ಬೆಂಗಳೂರು: ವಿದ್ಯುತ್ ಸಚಿವಾಲಯದಡಿ ಬರುವ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ(ಸಿಪಿಆರ್‌ಐ)ಯು ಒಟ್ಟು 110 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ನೋಂದಣಿ ಮತ್ತು ಶುಲ್ಕ ಪಾವತಿ ಆರಂಭ ಸೆಪ್ಟೆಂಬರ್ 19
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 12(ಸಂಜೆ 5:00 ಗಂಟೆಯವರೆಗೆ)
- ಕಟ್-ಆಫ್ (ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ) ದಿನಾಂಕ ಅಕ್ಟೋಬರ್ 12
ಹುದ್ದೆಗಳ ವಿವರ:
ಇಂಜಿನಿಯರಿಂಗ್ ಆಫೀಸರ್ ಗ್ರೇಡ್-1 (ಎಲೆಕ್ಟ್ರಿಕಲ್) 7 ಹುದ್ದೆಗಳು
ಇಂಜಿನಿಯರಿಂಗ್ ಆಫೀಸರ್ ಗ್ರೇಡ್-1 (ಸಿವಿಲ್) 1 ಹುದ್ದೆ
ಇಂಜಿನಿಯರಿಂಗ್ ಅಸಿಸ್ಟೆಂಟ್ (ಎಲೆಕ್ಟ್ರಿಕಲ್) 10 ಹುದ್ದೆಗಳು
ಇಂಜಿನಿಯರಿಂಗ್ ಅಸಿಸ್ಟೆಂಟ್ (ಮೆಕ್ಯಾನಿಕಲ್) 5 ಹುದ್ದೆಗಳು
ಸೈಂಟಿಫಿಕ್ ಅಸಿಸ್ಟೆಂಟ್ 2 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್-1 (ಎಲೆಕ್ಟ್ರಿಕಲ್) 7 ಹುದ್ದೆಗಳು
ಟೆಕ್ನಿಷಿಯನ್ ಗ್ರೇಡ್-1 (ಮೆಕ್ಯಾನಿಕಲ್) 2 ಹುದ್ದೆಗಳು
ಟೆಕ್ನಿಕಲ್ ಅಟೆಂಡೆಂಟ್ ಗ್ರೇಡ್-1 37 ಹುದ್ದೆಗಳು
ಅಸಿಸ್ಟೆಂಟ್ ಗ್ರೇಡ್-II 29 ಹುದ್ದೆಗಳು
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಗ್ರೇಡ್-1 14 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಇಂಜಿನಿಯರಿಂಗ್ ಆಫೀಸರ್ ಹುದ್ದೆಗೆ; ಸಂಬಂಧಿತ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಜೊತೆಗೆ 2024/2025/2026 ನೇ ಸಾಲಿನ ಮಾನ್ಯತೆ ಪಡೆದ ಗೇಟ್(GATE) ಅಂಕಗಳನ್ನು ಹೊಂದಿರಬೇಕು.
ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ;: ರಸಾಯನಶಾಸ್ತ್ರದಲ್ಲಿ ಪ್ರಥಮ ದರ್ಜೆ ಬಿ.ಎಸ್ಸಿ ಪದವಿ ಜೊತೆಗೆ 5 ವರ್ಷಗಳ ಅನುಭವ.
ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗೆ; ಸಂಬಂಧಿತ ವಿಷಯದಲ್ಲಿ ಪ್ರಥಮ ದರ್ಜೆ ಡಿಪ್ಲೊಮಾ ಮತ್ತು 5 ವರ್ಷಗಳ ಅನುಭವ.
ಟೆಕ್ನಿಷಿಯನ್ ಹುದ್ದೆಗೆ; ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ(ITI) ಪ್ರಮಾಣಪತ್ರ.
ಟೆಕ್ನಿಕಲ್ ಅಟೆಂಡೆಂಟ್ ಹುದ್ದೆಗೆ; ಮೆಟ್ರಿಕ್ಯುಲೇಷನ್ (10ನೇ ತರಗತಿ) ಉತ್ತೀರ್ಣ.
ಅಸಿಸ್ಟೆಂಟ್ ಗ್ರೇಡ್-II ಹುದ್ದೆಗೆ; ಪ್ರಥಮ ದರ್ಜೆ ಪದವಿ ಮತ್ತು NIELIT ನಿಂದ ಬೇಸಿಕ್ ಕಂಪ್ಯೂಟರ್ ಕೋರ್ಸ್(BCC) ಪ್ರಮಾಣಪತ್ರ.
ಮಲ್ಟಿ-ಟಾಸ್ಕಿಂಗ್ ಸ್ಟಾಫ್(ಎಂಟಿಎಸ್) ಹುದ್ದೆಗೆ; ಮೆಟ್ರಿಕ್ಯುಲೇಷನ್(10ನೇ ತರಗತಿ) ಉತ್ತೀರ್ಣ.
ವಯೋಮಿತಿ:
ಇಂಜಿನಿಯರಿಂಗ್ ಆಫೀಸರ್ ಗ್ರೇಡ್-1 (ಎಲೆಕ್ಟ್ರಿಕಲ್/ಸಿವಿಲ್) ಹುದ್ದೆಗೆ 30 ವರ್ಷ
ಸೈಂಟಿಫಿಕ್ ಅಸಿಸ್ಟೆಂಟ್/ಇಂಜಿನಿಯರಿಂಗ್ ಅಸಿಸ್ಟೆಂಟ್ (ಎಲೆಕ್ಟ್ರಿಕಲ್/ಮೆಕ್ಯಾನಿಕಲ್) ಹುದ್ದೆಗೆ 35 ವರ್ಷ
ಟೆಕ್ನಿಷಿಯನ್ ಗ್ರೇಡ್-1 (ಎಲೆಕ್ಟ್ರಿಕಲ್/ಮೆಕ್ಯಾನಿಕಲ್) ಹುದ್ದೆಗೆ 28 ವರ್ಷ
ಟೆಕ್ನಿಕಲ್ ಅಟೆಂಡೆಂಟ್ ಗ್ರೇಡ್-1 ಹುದ್ದೆಗೆ 30 ವರ್ಷ
ಅಸಿಸ್ಟೆಂಟ್ ಗ್ರೇಡ್-II ಹುದ್ದೆಗೆ 30 ವರ್ಷ
ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಗ್ರೇಡ್-1 ಹುದ್ದೆಗೆ 25 ವರ್ಷ
ಆಯ್ಕೆ ಪ್ರಕ್ರಿಯೆ:
ಇಂಜಿನಿಯರಿಂಗ್ ಆಫೀಸರ್ ಹುದ್ದೆಗಳಿಗೆ ಗೇಟ್ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯದ್ದು, ಇತರೆ ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ), ಟ್ರೇಡ್ ಟೆಸ್ಟ್ ಅಥವಾ ಸ್ಕಿಲ್ ಟೆಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.
ಸಂಬಳ(ವೇತನ ಶ್ರೇಣಿ):
- ಇಂಜಿನಿಯರಿಂಗ್ ಆಫೀಸರ್ ಹುದ್ದೆಗೆ ಲೆವೆಲ್-7 (ರೂ.44,900 – 1,42,400)
- ಇಂಜಿನಿಯರಿಂಗ್/ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಲೆವೆಲ್-6 (ರೂ.35,400 – 1,12,400)
- ಅಸಿಸ್ಟೆಂಟ್ ಗ್ರೇಡ್-II ಹುದ್ದೆಗೆ ಲೆವೆಲ್-4 (ರೂ.25,500 – 81,100)
- ಟೆಕ್ನಿಷಿಯನ್ ಹುದ್ದೆಗೆ ಲೆವೆಲ್-2 (ರೂ.19,900 – 63,200)
- ಟೆಕ್ನಿಕಲ್ ಅಟೆಂಡೆಂಟ್/ಎಂಟಿಎಸ್ ಹುದ್ದೆಗೆ ಲೆವೆಲ್-1 (ರೂ.18,000 – 56,900)
ಅರ್ಜಿ ಶುಲ್ಕ:
ಪ.ಜಾತಿ/ಪ.ಪಂಗಡ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಇಂಜಿನಿಯರಿಂಗ್ ಆಫೀಸರ್, ಸೈಂಟಿಫಿಕ್ ಅಸಿಸ್ಟೆಂಟ್, ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ ರೂ.1000/-
ಟೆಕ್ನಿಷಿಯನ್, ಅಸಿಸ್ಟೆಂಟ್ ಗ್ರೇಡ್-II, ಟೆಕ್ನಿಕಲ್ ಅಟೆಂಡೆಂಟ್ ಹುದ್ದೆಗಳಿಗೆ ರೂ.700/-
ಅರ್ಜಿ ಸಲ್ಲಿಸುವುದು ಹೇಗೆ?
ಹಂತ-01 ಅಧಿಕೃತ ಜಾಲತಾಣ https://cpri.res.in/ಕ್ಕೆ ಭೇಟಿ ನೀಡಿ.
ಹಂತ-02 ನಂತರ ಮೆನುವಿನಲ್ಲಿ “Career” ವಿಭಾಗದಡಿ “Current Openings” ಎಂಬ ಉಪವಿಭಾಗದ ಮೇಲೆ ಕ್ಲಿಕ್ಕಿಸಿ.
ಹಂತ-03 ಮುಂದೆ ಅಲ್ಲಿ “ADVERTISEMENT No. CPRI/06/2026” ಅಧಿಸೂಚನೆ ಸಂಖ್ಯೆಯಡಿ “Important Links” ನಡಿ “Application Registration Link (Click Here)” ಎಂಬ ಶೀರ್ಷಿಕೆ ಲಿಂಕ್ ಮೇಲೆ ಕ್ಲಿಕ್ಕಿಸಿ.
ಹಂತ-04 ತದನಂತರ ಹೊಸಪುಟ ತೆರೆಯುತ್ತದೆ. ಅಭ್ಯರ್ಥಿಗಳು ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಂಡು ಈ ಕೆಳಗಿನ ಹಂತಗಳನ್ನು ಪೂರ್ಣಗೊಳಿಸಿ.
1) Registration Details(ನೋಂದಣಿ ವಿವರಗಳು)
2) Personal Details(ವೈಯಕ್ತಿಕ ವಿವರಗಳು)
3) Educational Qualification(ಶೈಕ್ಷಣಿಕ ವಿವರಗಳು)
4) Upload Documents(ದಾಖಲೆಗಳ ಅಪ್ಲೋಡ್)
5) Application Fee(ಅರ್ಜಿ ಶುಲ್ಕ ತುಂಬುವುದು)
6) Confirmation/Print Application(ದೃಢೀಕರಣ/ಅರ್ಜಿ ಸ್ವೀಕೃತಿ ಪ್ರಿಂಟ್)
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | cpri.res.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |