ಬೆಂಗಳೂರು ಸೆ.21: ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್(ಕೆಎಸ್‌ಆರ್‌ಪಿ, ಐಆರ್ಬಿ, ಕೆಎಸ್‌ಐಎಸ್‌ಎಫ್)ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೆ.20ರಂದು ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಸೋಮವಾರ ಪ್ರಕಟಿಸಿದೆ.
ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದವಾರು ಕೀ ಉತ್ತರಗಳನ್ನು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnew.aspx ದ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಆಕ್ಷೇಪಣೆ ಸಲ್ಲಿಸಿ…
ಪ್ರಕಟಿಸಲಾದ ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಸೆ.23ರ ಬೆಳಗ್ಗೆ 10.30ರೊಳಗೆ ಪತ್ರಿಕೆ ವಿವರ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಜೊತೆಗೆ ಪೂರಕ ದಾಖಲೆಗಳನ್ನು ಲಗತ್ತಿಸಿ ಪ್ರತಿ ಪ್ರಶ್ನೆಗೆ ರೂ.25/-ರಂತೆ ಆಕ್ಷೇಪಣಾ ಶುಲ್ಕ ಪಾವತಿಸುವ ಮೂಲಕ ಆಕ್ಷೇಪಣೆ ಸಲ್ಲಿಕೆ ಮಾಡಬಹುದು.