ರೈಲ್ವೆ ಇಲಾಖೆಯಲ್ಲಿ ನಾನಾ ಪ್ಯಾರಾಮೆಡಿಕಲ್‌ ಹುದ್ದೆಗಳ ನೇಮಕಾತಿ!

ಬೆಂಗಳೂರು ಆರ್‌ಆರ್‌ಬಿಗೆ 18 ಹುದ್ದೆ ಮೀಸಲು

Published on:

ರೈಲ್ವೆ ನೇಮಕಾತಿ ಮಂಡಳಿಯು(ಆರ್‌ಆರ್‌ಬಿ) ಅಧಿಸೂಚನೆ ಸಂಖ್ಯೆ ಸಿಇಎನ್‌ 05/2026ರಡಿ ವಿವಿಧ ಪ್ಯಾರಾಮೆಡಿಕಲ್ ವಿಭಾಗದ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ಸದರಿ ನೇಮಕಾತಿಯಲ್ಲಿ ಒಟ್ಟು 590 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅ.14ರಂದು ಕೊನೆಗೊಳ್ಳಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ಜಾಲತಾಣ https://www.rrbapply.gov.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ ಸೆಪ್ಟೆಂಬರ್‌ 15
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 14 (ರಾತ್ರಿ 23:59 ಗಂಟೆಯವರೆಗೆ)
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಅಕ್ಟೋಬರ್ 16
  • ಅರ್ಜಿ ತಿದ್ದುಪಡಿ ವಿಂಡೋ(Modification Window)- ಅಕ್ಟೋಬರ್ 17 ರಿಂದ 26ರವರೆಗೆ
  • ಸ್ಕ್ರೈಬ್ ವಿವರಗಳನ್ನು ಸಲ್ಲಿಸುವ ದಿನಾಂಕ- ಅಕ್ಟೋಬರ್ 27ರಿಂದ 31ರವರೆಗೆ

ಹುದ್ದೆವಾರು ಸಂಖ್ಯೆ ವಿವರ:

ಹುದ್ದೆಯ ಹೆಸರುಒಟ್ಟು ಹುದ್ದೆಗಳು
ನರ್ಸಿಂಗ್ ಸೂಪರಿಂಟೆಂಡೆಂಟ್ (Nursing Superintendent)365
ಡಯಾಲಿಸಿಸ್ ಟೆಕ್ನಿಷಿಯನ್ (Dialysis Technician)01
ಹೆಲ್ತ್ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ ಗ್ರೇಡ್-II43
ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್01
ಫಾರ್ಮಾಸಿಸ್ಟ್ (ಪ್ರವೇಶ ದರ್ಜೆ) (Pharmacist)118
ರೇಡಿಯೋಗ್ರಾಫರ್ ಎಕ್ಸ್-ರೇ ಟೆಕ್ನಿಷಿಯನ್25
ಇಸಿಜಿ ಟೆಕ್ನಿಷಿಯನ್ (ECG Technician)04
ಆಪ್ಟೋಮೆಟ್ರಿಸ್ಟ್ (Optometrist)02
ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-II (Lab Assistant)31

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ(14.10.2026) ನಿಗದಿತ ವಿದ್ಯಾರ್ಹತೆಯನ್ನು ಹೊಂದಿರಬೇಕು.

ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ; ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿಯಲ್ಲಿ 3 ವರ್ಷಗಳ ಕೋರ್ಸ್ ಉತ್ತೀರ್ಣ ಅಥವಾ ಬಿ.ಎಸ್ಸಿ ನರ್ಸಿಂಗ್(B.Sc Nursing).

ಫಾರ್ಮಾಸಿಸ್ಟ್ ಹುದ್ದೆಗೆ; ಫಾರ್ಮಸಿಯಲ್ಲಿ ಬ್ಯಾಚುಲರ್ ಪದವಿ(B.Pharm) ಅಥವಾ ಡಾಕ್ಟರ್ ಆಫ್ ಫಾರ್ಮಸಿ (Pharm.D) ಮತ್ತು ಫಾರ್ಮಸಿ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರಬೇಕು.

ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-II ಹುದ್ದೆಗೆ; ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ (10+2) ಉತ್ತೀರ್ಣ ಜೊತೆಗೆ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ (DMLT) ಅಥವಾ ಬಿ.ಎಸ್ಸಿ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ.

ಇತರ ಹುದ್ದೆಗಳಿಗೆ; ಆಯಾ ಹುದ್ದೆಗೆ ಸಂಬಂಧಿಸಿದಂತೆ ಬಿ.ಎಸ್ಸಿ ಪದವಿ, ಡಿಪ್ಲೊಮಾ ಅಥವಾ ತತ್ಸಮಾನ ಪ್ರಮಾಣಪತ್ರ ಹೊಂದಿರಬೇಕು (ವಿವರಗಳಿಗೆ ಅಧಿಸೂಚನೆಯ ಅನುಬಂಧ-A ನೋಡಿ).

ವಯೋಮಿತಿ:

01.01.2027 ಕ್ಕೆ ಅನ್ವಯಿಸುವಂತೆ;

ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ ನಿಗದಿಪಡಿಸಲಾಗಿದೆ:

  • ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ 20 ರಿಂದ 40 ವರ್ಷಗಳು.
  • ಫಾರ್ಮಾಸಿಸ್ಟ್ ಹುದ್ದೆಗೆ 20 ರಿಂದ 35 ವರ್ಷಗಳು.
  • ಇತರ ಹುದ್ದೆಗಳಿಗೆ; ಹುದ್ದೆಯ ಆಧಾರದ ಮೇಲೆ 18-33 ವರ್ಷಗಳು, 19-33 ವರ್ಷಗಳು ಅಥವಾ 21-30 ವರ್ಷಗಳು.

ಗರಿಷ್ಠ ವಯೋಮಿತಿ ಸಡಿಲಿಕೆ:

  • ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು
  • ಒಬಿಸಿ(ಎನ್‌ಸಿಎಲ್) ಅಭ್ಯರ್ಥಿಗಳಿಗೆ 3 ವರ್ಷಗಳು
  • ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ರಿಂದ 15 ವರ್ಷಗಳು(ವರ್ಗದ ಆಧಾರದ ಮೇಲೆ)

ಆಯ್ಕೆ ಪ್ರಕ್ರಿಯೆ:

ಆಯ್ಕೆಯು ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ನಡೆಯುತ್ತದೆ. ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ:

  1. ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)
  2. ದಾಖಲೆಗಳ ಪರಿಶೀಲನೆ (ಡಿವಿ)
  3. ವೈದ್ಯಕೀಯ ಪರೀಕ್ಷೆ (ಎಂಡಿ)

ಹುದ್ದೆವಾರು ವೇತನ:

ಹುದ್ದೆಯ ಹೆಸರುಆರಂಭಿಕ ಸಂಬಳ
ನರ್ಸಿಂಗ್ ಸೂಪರಿಂಟೆಂಡೆಂಟ್₹ 44,900/- (ಲೆವೆಲ್ 7)
ಡಯಾಲಿಸಿಸ್ ಟೆಕ್ನಿಷಿಯನ್₹ 35,400/- (ಲೆವೆಲ್ 6)
ಹೆಲ್ತ್ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ ಗ್ರೇಡ್-II₹ 35,400/- (ಲೆವೆಲ್ 6)
ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್₹ 35,400/- (ಲೆವೆಲ್ 6)
ಫಾರ್ಮಾಸಿಸ್ಟ್ (ಪ್ರವೇಶ ದರ್ಜೆ)₹ 29,200/- (ಲೆವೆಲ್ 5)
ರೇಡಿಯೋಗ್ರಾಫರ್ ಎಕ್ಸ್-ರೇ ಟೆಕ್ನಿಷಿಯನ್₹ 29,200/- (ಲೆವೆಲ್ 5)
ಇಸಿಜಿ ಟೆಕ್ನಿಷಿಯನ್₹ 25,500/- (ಲೆವೆಲ್ 4)
ಆಪ್ಟೋಮೆಟ್ರಿಸ್ಟ್₹ 25,500/- (ಲೆವೆಲ್ 4)
ಲ್ಯಾಬ್ ಅಸಿಸ್ಟೆಂಟ್ ಗ್ರೇಡ್-II₹ 21,700/- (ಲೆವೆಲ್ 3)

ಅರ್ಜಿ ಶುಲ್ಕ:

ಎಲ್ಲಾ ಸಾಮಾನ್ಯ ಅಭ್ಯರ್ಥಿಗಳಿಗೆ ₹500/- (ಸಿಬಿಟಿ ಪರೀಕ್ಷೆಗೆ ಹಾಜರಾದ ನಂತರ ₹400/- ಬ್ಯಾಂಕ್ ಶುಲ್ಕ ಕಡಿತಗೊಳಿಸಿ ಮರುಪಾವತಿ ಮಾಡಲಾಗುತ್ತದೆ).

ಎಸ್ಸಿ, ಎಸ್ಟಿ, ಮಾಜಿ ಸೈನಿಕರು, ಪಿಡಬ್ಲ್ಯೂಬಿಡಿ, ಮಹಿಳೆಯರು, ತೃತೀಯ ಲಿಂಗಿಗಳು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ(ಇಬಿಸಿ) ಅಭ್ಯರ್ಥಿಗಳಿಗೆ ₹250/- (ಸಿಬಿಟಿ ಪರೀಕ್ಷೆಗೆ ಹಾಜರಾದ ನಂತರ ಸಂಪೂರ್ಣ ₹250/- ಮರುಪಾವತಿಯಾಗುತ್ತದೆ).

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಕೇವಲ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಹಂತಗಳು ಇಲ್ಲಿವೆ:

ಹಂತ 1 ಅಧಿಕೃತ ಜಾಲತಾಣ https://www.rrbapply.gov.in/ಕ್ಕೆ ಭೇಟಿ ನೀಡಿ. ಈಗಾಗಲೇ ಹೊಂದಿದ್ದರೆ ಲಾಗಿನ್‌ ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ಹೊಸ ಬಳಕೆದಾರರಾಗಿ ಖಾತೆ ರಚನೆ ಮಾಡಿಕೊಳ್ಳಿ.

ಹಂತ 2 ಅರ್ಜಿ ವಿವರಗಳನ್ನು ಭರ್ತಿ ಮಾಡುವುದು ಲಾಗಿನ್ ಆದ ನಂತರ, ನಿಮ್ಮ ಶೈಕ್ಷಣಿಕ ಅರ್ಹತೆ, ವೈಯಕ್ತಿಕ ವಿವರಗಳು ಮತ್ತು ಪರೀಕ್ಷಾ ಮಾಧ್ಯಮದ ಭಾಷೆಯನ್ನು ಆಯ್ಕೆ ಮಾಡಿ ಅರ್ಜಿಯನ್ನು ಭರ್ತಿ ಮಾಡಿ.

ಹಂತ 3 ಆದ್ಯತೆಗಳ ಆಯ್ಕೆ(Post & Zone Preference) ನೀವು ಅರ್ಜಿ ಸಲ್ಲಿಸಲು ಇಚ್ಛಿಸುವ ಯಾವುದಾದರೊಂದು RRB ಮಂಡಳಿಯನ್ನು ಮಾತ್ರ ಆಯ್ಕೆ ಮಾಡಿ, ಆ ವಲಯದಲ್ಲಿ ಲಭ್ಯವಿರುವ ಹುದ್ದೆಗಳಿಗೆ ನಿಮ್ಮ ಆದ್ಯತೆಯನ್ನು (Preference) ನಮೂದಿಸಿ.

ಹಂತ 4 ಫೋಟೋ ಸೆರೆಹಿಡಿಯುವುದು, ಸಹಿ ಮತ್ತು ದಾಖಲೆಗಳ ಅಪ್‌ಲೋಡ್ ಮಾಡಿಕೊಳ್ಳಿ.

ಹಂತ 5 ಅರ್ಜಿ ತುಂಬುವುದು ಪೂರ್ಣಗೊಂಡ ತದನಂತರ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣhttps://rrb.indianrailways.gov.in/
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್‌.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment