ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌: ತಾತ್ಕಾಲಿಕ ಫಲಿತಾಂಶ ಪ್ರಕಟ

ಆಕ್ಷೇಪಣೆಗೆ ಅವಕಾಶ

Published on:

ಬೆಂಗಳೂರು ಸೆ.11: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೊಲೀಸ್‌ ಇಲಾಖೆಯ ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌ ಹುದ್ದೆಗಳ ನೇಮಕಾತಿಗಾಗಿ ಸೆ.06ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ.

ಸದರಿ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಸೆ.07ರಂದು ಬಿಡುಗಡೆಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೆ.09ರವರೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಅವಧಿಯಲ್ಲಿ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಸಿ ಸೆ.10ರಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಇದರನ್ವಯ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶವನ್ನು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದಲ್ಲಿ ಪ್ರಚುರಪಡಿಸಲಾಗಿದೆ.

ತಾತ್ಕಾಲಿಕ ಫಲಿತಾಂಶಕ್ಕೆ ಆಕ್ಷೇಪಣೆಗಳಿದ್ದಲ್ಲಿ ಸೆ.14ರ ಸಂಜೆ 5:30ರೊಳಗೆ ಪೂರಕ ದಾಖಲೆಗಳನ್ನು ಲಗತ್ತಿಸುವ ಮೂಲಕ ಸಲ್ಲಿಸಬಹುದು. ಪೂರಕ ದಾಖಲೆ ಇಲ್ಲದೆಯೇ ಸಲ್ಲಿಸಲಾಗುವ ಆಕ್ಷೇಪಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
ಹೆಚ್.ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕರು, ಕೆಇಎ

ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌ ತಾತ್ಕಾಲಿಕ ಫಲಿತಾಂಶ ಕೆಕೆ ವೃಂದದ ಲಿಂಕ್ಚೆಕ್‌ ಮಾಡಿ
ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌ ತಾತ್ಕಾಲಿಕ ಫಲಿತಾಂಶ ಆರ್‌ಪಿಸಿ ವೃಂದದ ಲಿಂಕ್ಚೆಕ್‌ ಮಾಡಿ
ಆಕ್ಷೇಪಣೆ ಸಲ್ಲಿಸುವ ಲಿಂಕ್ಈಗಲೇ ಆಕ್ಷೇಪಣೆ ಸಲ್ಲಿಸಿ
ಅಧಿಕೃತ ಜಾಲತಾಣkea.kar.nic.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

1 thought on “ಸಶಸ್ತ್ರ ಪೊಲೀಸ್‌ ಕಾನ್ಸ್ಟೇಬಲ್‌(ಸಿಎಆರ್/ಡಿಎಆರ್)‌: ತಾತ್ಕಾಲಿಕ ಫಲಿತಾಂಶ ಪ್ರಕಟ”

Leave a Comment