ವಿಜಯಪುರ: ಇಲ್ಲಿನ ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಮತ್ತು ಸಿಪಾಯಿ(ಪ್ಯೂನ್) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಿರಿಯ ಸಹಾಯಕ 12 ಹುದ್ದೆ, ಸಿಪಾಯಿ/ಕಾವಲುಗಾರ 06 ಹುದ್ದೆ ಸೇರಿದಂತೆ ಬ್ಯಾಂಕಿನಲ್ಲಿ ಒಟ್ಟು 18 ಹುದ್ದೆಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ, ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಸೆ.28ರೊಳಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ (https://snsbankvijayapur.com/) ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಸೆಪ್ಟೆಂಬರ್ 08
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 28(ಸಾಯಂಕಾಲ 5:30 ರವರೆಗೆ)
ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕಡ್ಡಾಯವಾಗಿ ಕನ್ನಡ ಓದಲು ಹಾಗೂ ಬರೆಯಲು ತಿಳಿದಿರಬೇಕು.
ಕಿರಿಯ ಸಹಾಯಕ ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿಯಲ್ಲಿ ಕನಿಷ್ಠ ಶೇ.60 ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
ಕನ್ನಡ ಭಾಷೆಯನ್ನು ಓದುವ, ಬರೆಯುವ, ಸ್ವಚ್ಛವಾಗಿ ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಜ್ಞಾನ ಹೊಂದಿರಬೇಕು. ಕಂಪ್ಯೂಟರ್ ಆಪರೇಷನ್ಸ್ ಮತ್ತು ಅಪ್ಲಿಕೇಶನ್ಸ್ ಜ್ಞಾನ ತಿಳಿದಿರಬೇಕು.
ಸಿಪಾಯಿ(ಪ್ಯೂನ್) ಹುದ್ದೆಗೆ; ಎಸ್.ಎಸ್.ಎಲ್.ಸಿ(SSLC) ಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಿ, ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
- ಸಾಮಾನ್ಯ ವರ್ಗ: 35 ವರ್ಷಗಳು
- ಹಿಂದುಳಿದ ವರ್ಗಗಳು (2A, 2B, 3A, 3B): 38 ವರ್ಷಗಳು
- ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST) / ಪ್ರವರ್ಗ-1: 40 ವರ್ಷಗಳು
- ವಿಶೇಷ ಸೂಚನೆ: ಕರ್ನಾಟಕ ಸರ್ಕಾರದ ಆದೇಶದನ್ವಯ ಗರಿಷ್ಠ ವಯೋಮಿತಿಗೆ ಹೆಚ್ಚುವರಿಯಾಗಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಕಿರಿಯ ಸಹಾಯಕ. ಈ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆಯು ತಲಾ 100 ಅಂಕಗಳ ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. (ಪ್ರಥಮ ಪತ್ರಿಕೆ: ಕನ್ನಡ ಭಾಷೆ – 50 ಅಂಕ, ಸಾಮಾನ್ಯ ಇಂಗ್ಲಿಷ್ – 25 ಅಂಕ, ಸಾಮಾನ್ಯ ಜ್ಞಾನ – 25 ಅಂಕ. ದ್ವಿತೀಯ ಪತ್ರಿಕೆ: ಸಹಕಾರ ರಂಗಕ್ಕೆ ಸಂಬಂಧಿಸಿದ ವಿಷಯ – 50 ಅಂಕ, ಭಾರತದ ಸಂವಿಧಾನ – 25 ಅಂಕ, ಸಹಕಾರಿ ಬ್ಯಾಂಕ್ ಉದ್ದೇಶ/ಕಾರ್ಯಚಟುವಟಿಕೆ – 25 ಅಂಕ).
ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ (15 ಅಂಕಗಳು) ಕರೆಯಲಾಗುವುದು. ಅಂತಿಮ ಆಯ್ಕೆ ಪಟ್ಟಿಯನ್ನು ಲಿಖಿತ ಪರೀಕ್ಷೆಯ ಅಂಕಗಳನ್ನು ಶೇಕಡಾ 85 ಕ್ಕೆ ಇಳಿಸಿ, ಅದಕ್ಕೆ ಸಂದರ್ಶನದ ಅಂಕಗಳನ್ನು (15 ಅಂಕಗಳು) ಸೇರಿಸಿ ಸಿದ್ಧಪಡಿಸಲಾಗುತ್ತದೆ.
ಸಿಪಾಯಿ(ಪ್ಯೂನ್) ಹುದ್ದೆಗೆ; ನಿಗದಿಪಡಿಸಿದ ಅರ್ಹತೆಯುಳ್ಳ ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ಲಿಖಿತ ಪರೀಕ್ಷೆಯ ಅಂಕಗಳನ್ನು ಶೇಕಡಾ 85% ಕ್ಕೆ ಇಳಿಸಿ, ಉಳಿದ 15 ಅಂಕಗಳನ್ನು ಸಂದರ್ಶನಕ್ಕೆ ನಿಗದಿಪಡಿಸಿ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಇತರ ಮಾಹಿತಿ: ಆಯ್ಕೆಯಾದ ಅಭ್ಯರ್ಥಿಗಳು 2 ವರ್ಷಗಳ ಪ್ರೊಬೇಷನರಿ ಅವಧಿಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ.
ಸಂಬಳ:
ಕಿರಿಯ ಸಹಾಯಕ ಹುದ್ದೆಗೆ; ವೇತನ ಶ್ರೇಣಿ ರೂ. 44,425-1,125-47,800-1,250-52,800-1,375-58,300-1,500-64,300-1,650-74,200-1,900-83,700/-.
ಸಿಪಾಯಿ(ಪ್ಯೂನ್) ಹುದ್ದೆಗೆ; ವೇತನ ಶ್ರೇಣಿ ರೂ.27,000-650-29,600-725-32,500-800-35,700-900-39,300-1,000-43,300-1,125-46,675/-.
ಇತರ ಭತ್ಯೆಗಳು: ರಾಜ್ಯ ಸರ್ಕಾರವು ತನ್ನ ನೌಕರರಿಗೆ ಕಾಲಕಾಲಕ್ಕೆ ಮಂಜೂರು ಮಾಡುವ ತುಟ್ಟಿಭತ್ಯೆ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.
ಅರ್ಜಿ ಶುಲ್ಕ:
- ಕಿರಿಯ ಸಹಾಯಕರು ಹುದ್ದೆಗೆ:
- ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1,200/-
- ಪರಿಶಿಷ್ಟ ಜಾತಿ(ಎಸ್‌ಸಿ)/ಪರಿಶಿಷ್ಟ ಪಂಗಡ(ಎಸ್‌ಟಿ) ಅಭ್ಯರ್ಥಿಗಳಿಗೆ ರೂ.600/-
- ಸಿಪಾಯಿ(ಪ್ಯೂನ್) ಹುದ್ದೆಗೆ:
- ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600/-
- ಪರಿಶಿಷ್ಟ ಜಾತಿ(ಎಸ್‌ಸಿ) / ಪರಿಶಿಷ್ಟ ಪಂಗಡ(ಎಸ್‌ಟಿ) ಅಭ್ಯರ್ಥಿಗಳಿಗೆ ರೂ.400/-
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ.?
ಹಂತ-1 ಅಧಿಕೃತ ಜಾಲತಾಣ https://snsbankvijayapur.com/ಕ್ಕೆ ಭೇಟಿ.
ಹಂತ-2 ನಂತರ ಮುಖಪುಟದಲ್ಲಿ “Job Application”ನಡಿ ಒದಗಿಸಲಾದ “Apply Now” ಬಟನ್ ಮೇಲೆ ಕ್ಲಿಕ್ಕಿಸಿ.
ಹಂತ-3 ತದನಂತರ “Online Job Application” ಎಂಬ ಹೊಸಪುಟ ತೆರೆದುಕೊಳ್ಳುತ್ತದೆ. ಅಲ್ಲಿ ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಮುಂದೆ “Next” ಬಟನ್ ಮೇಲೆ ಕ್ಲಿಕ್ಕಿಸಿದಾಗ ಅರ್ಜಿ ನಮೂನೆ ತೆರೆಯುತ್ತದೆ. ಕೇಳಲಾದ ಸಂಪೂರ್ಣ ವಿವರಗಳನ್ನು ತುಂಬಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಮುಖ್ಯ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | https://snsbankvijayapur.com/ |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |