ಎಲ್‌ಐಸಿ(LIC) ಗೋಲ್ಡನ್ ಜುಬ್ಲಿ ಫೌಂಡೇಶನ್ ವತಿಯಿಂದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು 2026-27ನೇ ಸಾಲಿನ ಎಲ್‌ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2023-24 ರಿಂದ 2025-26 ರವರೆಗಿನ ಶೈಕ್ಷಣಿಕ ವರ್ಷಗಳಲ್ಲಿ 10ನೇ ತರಗತಿ ಅಥವಾ 12ನೇ ತರಗತಿ/ತತ್ಸಮಾನ ಪರೀಕ್ಷೆಗಳಲ್ಲಿ ಕನಿಷ್ಠ 60% ಅಂಕಗಳು ಅಥವಾ ಸಮಾನವಾದ ಸಿಜಿಪಿಎ ಪಡೆದಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಅರ್ಹರು ಹಾಗೂ ಕುಟುಂಬದ ವಾರ್ಷಿಕ ಆದಾಯವು ₹4.5 ಲಕ್ಷದೊಳಗಿರಬೇಕು.
ಸದರಿ ವಿದ್ಯಾರ್ಥಿವೇತನದಲ್ಲಿ ಎರಡು ಬಗೆಗಳಿದ್ದು, ಮೊದಲನೆಯದು ಸಾಮಾನ್ಯ ವಿದ್ಯಾರ್ಥಿವೇತನ ಇದು ದ್ವಿತೀಯ ಪಿಯುಸಿ/ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.60ರಷ್ಟು ಅಂಕ ಗಳಿಸಿ, ಪ್ರಸ್ತುತ ಸಾಲಿನಲ್ಲಿ ಸಂಬಂಧಿತ ವಿಷಯಗಳಲ್ಲಿ(ಮೆಡಿಕಲ್,ಯಾವುದೇ ಪದವಿ, ಡಿಪ್ಲೊಮಾ, ಇತರೆ) ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಅನ್ವಯ. ಆಯಾ ಕೋರ್ಸ್‌ಗಳಿಗೆ ಅನುಗುಣವಾಗಿ ₹20,000 ರಿಂದ ₹50,000ರವರೆಗೆ ವಿದ್ಯಾರ್ಥಿವೇತನ ದೊರಕಲಿದೆ.
ಎರಡನೆಯದು. ವಿಶೇಷ ವಿದ್ಯಾರ್ಥಿವೇತನಕ್ಕಾಗಿ, ಕನಿಷ್ಠ ಶೇ.60 ಅಂಕಗಳೊಂದಿಗೆ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ ಇಂಟರ್‌ಮೀಡಿಯೇಟ್/ದ್ವಿತಿಯ ಪಿಯುಸಿ ಅಥವಾ ಡಿಪ್ಲೊಮಾ ಕೋರ್ಸ್‌ಗಳ ಮೊದಲ ವರ್ಷಕ್ಕೆ ಪ್ರವೇಶ ಪಡೆದಿರಬೇಕು. ಒಟ್ಟು 15,000/- ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಬೇಕಾಗುವ ಅಗತ್ಯ ದಾಖಲೆಗಳೇನು?
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಬ್ಯಾಂಕ್ ಪಾಸ್‌ಬುಕ್
- ಶೈಕ್ಷಣಿಕ ದಾಖಲೆಗಳು(ಹಿಂದಿನ ವರ್ಷದ)
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಆಸಕ್ತ ವಿದ್ಯಾರ್ಥಿಗಳು ಸೆ.30ರೊಳಗೆ http://www.b4s.in/knah/LICC1ನ ಮೂಲಕ ಅರ್ಜಿ ಸಲ್ಲಿಸಬಹುದು.
Thank you for your support
⁷
15