ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪೊಲೀಸ್ ಇಲಾಖೆಯ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್(ಕೆಎಸ್‌ಆರ್‌ಪಿ), ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್‌ಐಎಸ್‌ಎಫ್) ಮತ್ತು ಭಾರತೀಯ ಮೀಸಲು ಪಡೆ(ಐಆರ್‌ಬಿ)ಯಲ್ಲಿ ಕೆಕೆ ವೃಂದ ಹಾಗೂ ಮಿಕ್ಕುಳಿದ ವೃಂದದಲ್ಲಿ ಖಾಲಿ ಇರುವ ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
ಕೆಎಸ್‌ಆರ್‌ಪಿ 334+(1455 ಆರ್‌ಪಿಸಿ), ಕೆಎಸ್‌ಐಎಸ್‌ಎಫ್ 364, ಐಆರ್‌ಬಿ 161 ಸೇರಿದಂತೆ ಒಟ್ಟು 2314 ಸ್ಥಾನಗಳಿಗೆ ನೇಮಕಾತಿ ನಡೆಯಲಿದೆ. ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆಯು ಸೆ.20ರಂದು ಜರುಗಲಿದೆ. ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದ ಮೂಲಕ ಆ.10ರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 13
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 10
- ಅರ್ಜಿ ಶುಲ್ಕ ಪಾವತಿಸಲು ಕೊನೆದಿನ – ಆಗಸ್ಟ್ 11
- ಲಿಖಿತ ಪರೀಕ್ಷೆಯ ದಿನಾಂಕ – ಸೆಪ್ಟೆಂಬರ್ 20
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ ಪಡೆದಿರಬೇಕು.
ವಯೋಮಿತಿ:
10-08-2026ರಂತೆ;
ಕನಿಷ್ಠ 18 ವರ್ಷ
ಸಾಮಾನ್ಯ ಅಭ್ಯರ್ಥಿಗಳಿಗೆ 33 ವರ್ಷ
ಪ.ಜಾ/ಪ.ಪಂ/ಪ್ರವರ್ಗ-1 ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 35 ವರ್ಷ
ಕರ್ನಾಟಕದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ 38 ವರ್ಷ
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ದೇಹದಾರ್ಢ್ಯತೆ ಪರೀಕ್ಷೆ(ಪಿಎಸ್‌ಟಿ)
- ಸಹಿಷ್ಣುತೆ ಪರೀಕ್ಷೆ(ಪಿಇಟಿ)
- ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು(ಪ್ರವರ್ಗ 2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ರೂ.750/-
ಪ.ಜಾ/ಪ.ಪಂ/ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.500/-
ಅರ್ಜಿ ಸಲ್ಲಿಸುವ ಪ್ರಕ್ರಿಯೆ…
ಹಂತ-1 ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ
ಹಂತ-2 ಮೆನುವಿನಲ್ಲಿ “ನೇಮಕಾತಿ” ವಿಭಾಗದಲ್ಲಿ “KSRP , IRB & KSISF ನೇಮಕಾತಿ – 2026” ಉಪವಿಭಾಗದಡಿ ತಾವು ಅರ್ಜಿ ಸಲ್ಲಿಸುವ ವೃಂದದ(ಕೆಕೆ ಅಥವಾ ಆರ್‌ಪಿಸಿ) ಮೇಲೆ ಕ್ಲಿಕ್ಕಿಸಿ.
ಹಂತ-3 ನಂತರ ಅಲ್ಲಿ ನೀಡಲಾದ “ಆನ್‌ಲೈನ್ ಅರ್ಜಿ ನಮೂನೆ ಲಿಂಕ್” ಮೇಲೆ ಕ್ಲಿಕ್ಕಿಸಿ. ತದನಂತರ ಹೊಸ ಪುಟ ತೆರೆಯುತ್ತದೆ. ಅರ್ಜಿ ನಮೂನೆಯಲ್ಲಿ ಕೇಳಾದ ಸಂಪೂರ್ಣ ಮಾಹಿತಿ ತುಂಬಿ ಹಾಗೂ ನಿಮಗೆ ಅನ್ವಯವಾಗುವ ಅರ್ಜಿ ಶುಲ್ಕ ಪಾವತಿಸಿ.
Important Direct Links:
| Official Notification PDF(KK) | Download |
| Official Notification PDF(RPC) | Download |
| RPC Posts Clarification PDF | Download |
| KK Posts Clarification PDF | Download |
| Online Application Form Link | Apply Now |
| Official Website | kea.kar.nic.in |
| More Updates | KarnatakaHelp.in |
Job