ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಬರುವ ನಾನಾ ಶಾಲೆಗಳಲ್ಲಿ ಖಾಲಿರುವ ವಿವಿಧ ಗ್ರೂಪ್ ಸಿ ವೃಂದದ ಶಿಕ್ಷಕ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ.
ಉಳಿಕೆ ಮೂಲ ವೃಂದದಲ್ಲಿ 725+42 ಹಿಂಬಾಕಿ ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿ 277+43 ಹಿಂಬಾಕಿ ಹುದ್ದೆಗಳು ಸೇರಿದಂತೆ 1087 ಸ್ಥಾನಗಳಿಗೆ ನೇಮಕ ನಡೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜು.15ರಿಂದ ಆ.17ರವೆರೆಗೆ ಇರಲಿದೆ. ಅರ್ಹ ಆಸಕ್ತರು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – ಜುಲೈ 15
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಆಗಸ್ಟ್ 17(ವಿಸ್ತರಣೆ)
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಆಗಸ್ಟ್ 18(ವಿಸ್ತರಣೆ)
- ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ – —
ಹುದ್ದೆಗಳ ವಿವರ:
ಉಳಿಕೆ ಮೂಲ ವೃಂದದ ಹುದ್ದೆಗಳ ವಿವರ
| ಕನ್ನಡ ಭಾಷಾ ಶಿಕ್ಷಕರು | 103 (100+03(ಹಿ)) |
| ಇಂಗ್ಲಿಷ್ ಭಾಷಾ ಶಿಕ್ಷಕರು | 108 (100+08(ಹಿ)) |
| ಹಿಂದಿ ಭಾಷಾ ಶಿಕ್ಷಕರು | 55 (50+05(ಹಿ)) |
| ಗಣಿತ ಶಿಕ್ಷಕರು | 103 (100+03(ಹಿ)) |
| ವಿಜ್ಞಾನ ಶಿಕ್ಷಕರು | 106 (100+06(ಹಿ)) |
| ಸಮಾಜ ವಿಜ್ಞಾನ ಶಿಕ್ಷಕರು | 154 (150+04(ಹಿ)) |
| ಗಣಕಯಂತ್ರ ಶಿಕ್ಷಕರು | 57 (50+07(ಹಿ)) |
| ದೈಹಿಕ ಶಿಕ್ಷಣ ಶಿಕ್ಷಕರು | 81 (75+06(ಹಿ)) |
| ಒಟ್ಟು | 725 + 42(ಹಿ) = 767 |
ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ವಿವರ
| ಕನ್ನಡ ಭಾಷಾ ಶಿಕ್ಷಕರು | 62 (60+02(ಹಿ)) |
| ಇಂಗ್ಲಿಷ್ ಭಾಷಾ ಶಿಕ್ಷಕರು | 69 (61+08(ಹಿ)) |
| ಹಿಂದಿ ಭಾಷಾ ಶಿಕ್ಷಕರು | 31 (26+05(ಹಿ)) |
| ಗಣಿತ ಶಿಕ್ಷಕರು | 35 (29+06(ಹಿ)) |
| ವಿಜ್ಞಾನ ಶಿಕ್ಷಕರು | 32 (26+06(ಹಿ)) |
| ಸಮಾಜ ವಿಜ್ಞಾನ ಶಿಕ್ಷಕರು | 24 (16+08(ಹಿ)) |
| ದೈಹಿಕ ಶಿಕ್ಷಣ ಶಿಕ್ಷಕರು | 33 (28+05(ಹಿ)) |
| ಪದವೀಧರ ಚಿತ್ರಕಲಾ ಶಿಕ್ಷಕರು | 17 (15+02(ಹಿ)) |
| ಡಿಪ್ಲೋಮಾ ಚಿತ್ರಕಲಾ ಶಿಕ್ಷಕರು | 17 (16+01(ಹಿ)) |
| ಒಟ್ಟು | 320 (277+43(ಹಿ)) |
ಶೈಕ್ಷಣಿಕ ಅರ್ಹತೆ:
ಸಂಬಂಧಿತ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ಅಭ್ಯಸಿಸಿ ಕಲಾ ವಿಭಾದಲ್ಲಿ ಸ್ನಾತಕೋತ್ತರ ಪದವಿ(ಅಥವಾ ಸಂಬಂಧಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ) ಅಥವಾ ಬ್ಯಾಚುಲರ್ ಆಫ್ ಎಜ್ಯುಕೇಶನ್(ಬಿ.ಎಡ್) ಪದವಿ ಹೊಂದಿರಬೇಕು.
ಇತರೆ ಅರ್ಹತೆ: ಕೆಟಿಇಟಿ ಅಥವಾ ಸಿಟಿಇಟಿ ಅರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಗಮನಿಸಿ: ವಿದ್ಯಾರ್ಹತೆಯ ಕುರಿತು ವಿಸ್ತೃತ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ. ಸುದ್ದಿಯ ಕೊನೆಯಲ್ಲಿ ಮುಖ್ಯ ಲಿಂಕ್ಸ್‌ಗಳಡಿ ಒದಗಿಸಲಾಗಿದೆ.
ವಯೋಮಿತಿ:
13-08-2026ರಂತೆ;
ಕನಿಷ್ಠ – 18 ವರ್ಷ,
ಗರಿಷ್ಠ-
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ– 45 ವರ್ಷ
- ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ- 48 ವರ್ಷ
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ – 50 ವರ್ಷ
ಸರ್ಕಾರದ ನೇಮಕಾತಿ ನಿಯಮಗಳ ಪ್ರಕಾರ ನಿಗದಿತ ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದೆ. ಮಾಹಿತಿಗಾಗಿ ಅಧಿಕೃತ ಅಧಿಕಸೂಚನೆ ಓದಿ.
ಆಯ್ಕೆ ಪ್ರಕ್ರಿಯೆ:
- ಸ್ಪರ್ಧಾತ್ಮಕ ಪರೀಕ್ಷೆ
- ದಾಖಲಾತಿ ಪರಿಶೀಲನೆ
ವೇತನ ಶ್ರೇಣಿ:
ಕನ್ನಡ ಭಾಷಾ ಶಿಕ್ಷಕ/ಆಂಗ್ಲ ಭಾಷಾ ಶಿಕ್ಷಕ/ಹಿಂದಿ ಭಾಷಾ ಶಿಕ್ಷಕ/ವಿಜ್ಞಾನ ಶಿಕ್ಷಕ/ಗಣಿತ ಶಿಕ್ಷಕ/ಸಮಾಜ ವಿಜ್ಞಾನ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಗೆ; ರೂ.54175-1375-58300-1500-64300-1650-74200-1900-85600-2300-99400/-
ಪದವೀಧರ ಚಿತ್ರಕಲಾ ಶಿಕ್ಷಕ/ಡಿಪ್ಲೊಮಾ ಚಿತ್ರಕಲಾ ಶಿಕ್ಷಕ ಹುದ್ದೆಗೆ; ರೂ.49050-1250-52800-1375-58300-1500-64300-1650-74200-1900-85600-2300-92500/-
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ /ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಸೇರಿದ ಅಭ್ಯರ್ಥಿಗಳಿಗೆ ರೂ.750/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ-1// ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.500/-
ಅಂಗವಿಕಲ/ವಿಕಲಚೇತನ ಅಭ್ಯರ್ಥಿಗಳಿಗೆ ರೂ.250/-
ಅರ್ಜಿ ಸಲ್ಲಿಕೆ ವಿಧಾನ.?
ಹಂತ-1 ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ ಕ್ಕೆ ಭೇಟಿ ನೀಡಿ
ಹಂತ-2 ನಂತರ ಮೆನುನಲ್ಲಿ “ನೇಮಕಾತಿ” ವಿಭಾಗಡಿ “KREIS ನೇಮಕಾತಿ – 2026” ಉಪವಿಭಾಗಡಿ ತಾವು ಅರ್ಜಿ ಸಲ್ಲಿಸಲು ಬಯಸುವ ವೃಂದದ ಮೇಲೆ ಕ್ಲಿಕ್ಕಿಸಿ.
ಹಂತ-3 ತದನಂತರ ಅಲ್ಲಿ ನೀಡಲಾದ KREIS – 2026 ನೇಮಕಾತಿ ಆನ್‌ಲೈನ್ ಅರ್ಜಿ ಲಿಂಕ್(16-07-2026) ಆನ್ಲೈನ್ ಅರ್ಜಿ ಲಿಂಕ್ ಕ್ಲಿಕ್ಕಿಸಿ.
ಹಂತ-4 ಮುಂದೆ ಹೊಸ ಪುಟ ತೆರೆಯುತ್ತದೆ, ಹೊಸ ಬಳಕೆದಾರಾಗಿದ್ದಲ್ಲಿ ಡಿಜಿಲಾಕರ್ ಮುಖೇನ ನೋಂದಾಯಿಸಿಕೊಂಡು ಅರ್ಜಿ ನಮೂನೆ ತುಂಬಿ. ಕೊನೆಗೆ ನಿಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
Important Direct Links:
| Dated On 13/8/2026 | Download |
| Official Notification PDF(RPC) | Download |
| Official Notification PDF(KK) | Download |
| KK Vacancy Clarification PDF | Download |
| RPC Vacancy Clarification PDF | Download |
| Online Application Link | Apply Now |
| Official Webiste | kea.kar.nic.in |
| More Upadates | KarnatakaHelp.in |
Gvt job
I want job sir
Mallapur to Mallapur distance Bagalkot road near to Laxamni distance Bagalkot Karnataka India to