ಬೆಂಗಳೂರು: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಯಗಳ ಇಲಾಖೆಯಲ್ಲಿ ಖಾಲಿ ಇರುವ 750 ಭೂಮಾಪಕ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ.
ಉಳಿಕೆ ಮೂಲ ವೃಂದದಲ್ಲಿ 560 ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ 190 ಸ್ಥಾನಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಪ್ರಕ್ರಿಯೆ ನಡೆಯಲಿದೆ. ಬಿಇ ಅಥವಾ ಬಿ.ಟೆಕ್ ಅಥವಾ ಸಂಬಂಧಿತ ವಿಷಯದಲ್ಲಿ ಬಿಎಸ್ಸಿ ಅಥವಾ ಡಿಪ್ಲೊಮಾ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆ.07ರವರೆಗೆ ಗಡುವು ನೀಡಲಾಗಿದೆ. ಅರ್ಜಿ ಸಲ್ಲಿಕೆ ಲಿಂಕ್ -https://cetonline.karnataka.gov.in/kea/indexnew
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ -ಜುಲೈ 11
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 07
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ -ಆಗಸ್ಟ್ 10
- ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ – ಅಕ್ಟೋಬರ್ 03 (ಪತ್ರಿಕೆ 1,2)
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಈ ಕೆಳಗಿನ ಅರ್ಹತೆ ಹೊಂದಿರತಕ್ಕದ್ದು;
a) ಕಾನೂನಿನಡಿಯಲ್ಲಿ ಸ್ಥಾಪಿತವಾದ ಇಂಜಿನಿಯರಿಂಗ್ ನಲ್ಲಿ ಅಥವಾ ತಂತ್ರಜ್ಞಾನದಲ್ಲಿ ಯಾವುದೇ ಪದವಿ ಹೊಂದಿರಬೇಕು; ಅಥವಾ ಯಾವುದೇ ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನದಲ್ಲಿ ಎಎಂಐಇ ಪದವಿ ಹೊಂದಿರಬೇಕು. ಅಥವಾ
b) ಕಾನೂನಿನಡಿಯಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯದಿಂದ ಗಣಿತ/ಭೌತಶಾಸ್ತ್ರ /ಕಂಪ್ಯೂಟರ್ ಸೈನ್ಸ್/ಮಾಹಿತಿ ತಂತ್ರಜ್ಞಾನ ಇನ್ಸುಮೆಂಟೇಶನ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್/ಕೃಷಿ ಬಿ.ಎಸ್. ಸಿ. ಪದವಿ ಪಡೆದಿರತಕ್ಕದ್ದು. ಅಥವಾ
c) ಎ.ಐ.ಸಿ.ಟಿ.ಇ ಮಾನ್ಯತೆ ಪಡೆದ ಅಧಿಕೃತ ಸಂಸ್ಥೆಯಿಂದ ಇಂಜಿನಿಯರಿಂಗ್ /ತಂತ್ರಜ್ಞಾನದ ಯಾವುದೇ ವಿಭಾಗದಲ್ಲಿ ಡಿಪ್ಲೊಮಾ.
ವಯಸ್ಸಿನ ಮಿತಿ:
07-08-206ರಂತೆ;
ಕನಿಷ್ಠ – 18 ವರ್ಷ,
ಗರಿಷ್ಠ-
- ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ– 40 ವರ್ಷ
- ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ- 43 ವರ್ಷ
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ – 45 ವರ್ಷ
ಸರ್ಕಾರದ ನೇಮಕಾತಿ ನಿಯಮಗಳ ಪ್ರಕಾರ ನಿಗದಿತ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ.ಮಾಹಿತಿಗಾಗಿ ಅಧಿಕೃತ ಅಧಿಕಸೂಚನೆ ಓದಿ.
ಆಯ್ಕೆ ಪ್ರಕ್ರಿಯೆ:
- ಸ್ಪರ್ಧಾತ್ಮಕ ಪರೀಕ್ಷೆ
- ದಾಖಲಾತಿ ಪರಿಶೀಲನೆ
ಸಂಬಳ:
ಮಾಸಿಕವಾಗಿ ರೂ.37500 ರಿಂದ 76100/-ವರೆಗೆ.
ವೇತನ ಶ್ರೇಣಿ: ರೂ.37500-900-39300-1000-43300-1125-47800-1250-52800-1375-58300-1500-64300-1650-74200-1900-76100/-
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ /ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಸೇರಿದ ಅಭ್ಯರ್ಥಿಗಳಿಗೆ ರೂ.750/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ-1// ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.500/-
ಅಂಗವಿಕಲ/ವಿಕಲಚೇತನ ಅಭ್ಯರ್ಥಿಗಳಿಗೆ ರೂ.250/-
ಅರ್ಜಿ ಸಲ್ಲಿಕೆ ಹೇಗೆ.??
ಹಂತ-1 ಕೆಇಎ ಅಧಿಕೃತ ಜಾಲತಾಣದ ಮೆನುವಿನಲ್ಲಿ ನೀಡಲಾದ ನೇಮಕಾತಿ ವಿಭಾಗದಡಿ ನೀಡಲಾದ “ಭೂ ಮಾಪಕರ ನೇಮಕಾತಿ – 2026” ಉಪವಿಭಾಗದಡಿ ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ವೃಂದ ಮೇಲೆ ಕ್ಲಿಕ್ಕಿಸಿ(RPC ಅಥವಾ KK).
ಹಂತ-2 ನಂತರ ಅಲ್ಲಿ ನೀಡಲಾದ ಭೂಮಾಪಕರ ಅರ್ಜಿ ಲಿಂಕ್ ಶಿರ್ಷೀಕೆಯ ಲಿಂಕ್ ಮೇಲೆ ಕ್ಲಿಕ್ಕಿಸಿ.
ಹಂತ-3 ತದನಂತರ ಅರ್ಜಿ ನಮೂನೆ ತೆರೆಯುತ್ತದೆ. ಹೊಸ ಅಭ್ಯರ್ಥಿಗಳಾಗಿದ್ದಲಿ ಡಿಜಿಲಾಕರ್ ಮೂಲಕ ನೋಂದಾಯಿಸಿಕೊಂಡು, ಲಾಗಿನ್ ಮಾಡಿಕೊಂಡು. ಅರ್ಜಿ ನಮೂನೆಯಲ್ಲಿ ಕೇಳಲಾದ ಸಂಪೂರ್ಣ ವಿವರ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಹಂತ-4 ಕೊನೆಗೆ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
Important Direct Links:
| Official Notification PDF(RPC) | Download |
| Official Notification PDF(KK) | Download |
| KEA VAO 2026 RPC Posts Clarification PDF | Download |
| KEA VAO 2026 KK Posts Clarification PDF | Download |
| Online Application Form Link | Apply Now |
| Official Website | kea.kar.nic.in |
| More Updates | KarnatakaHelp.in |