ಯಾದಗಿರಿ | ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ; ಪರಿಷ್ಕೃತ ಅಧಿಸೂಚನೆ ಪ್ರಕಟ

Published on:

Updated On:

ಯಾದಗಿರಿ: ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ 12 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಜು.12 ರಿಂದ 26ರೊಳಗೆ ಜಿಲ್ಲಾ ಪಂಚಾಯತಿಯ ಅಧಿಕೃತ ವೆಬ್ ಸೈಟ್ https://zpyadgir.karnataka.in ಮೂಲಕ ಯಾದಗಿರಿ, ಸುರಪುರ, ಗುರಮಿಠಕಲ್‌, ವಡಗೇರಾ, ಹುಣಸಗಿ, ನಾರಾಯಣಪೂರ, ರಾಜನಕೊಳ್ಳೂರು ವ್ಯಾಪ್ತಿಯ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ನೇಮಕಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭ ದಿನಾಂಕ – ಜುಲೈ 12
  • ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ – ಜುಲೈ 26

ಖಾಲಿ ಇರುವ ಗ್ರಾಮ ಪಂಚಾಯತಿಗಳ ವಿವರ:

ತಾಲೂಕಿನ ಹೆಸರುಗ್ರಾಮ ಪಂಚಾಯತಿ ಹೆಸರು
ಯಾದಗಿರಿವರ್ಕನಳ್ಳಿ
ಯಾದಗಿರಿಠಾಣಗುಂದಿ
ಯಾದಗಿರಿಬಂದಳ್ಳಿ
ಯಾದಗಿರಿಕಿಲ್ಲನಕೇರಾ
ಸುರಪುರಅರಕೇರಾ (ಕೆ)(ಬಿಜಾಸಪೂರ)
ಹುಣಸಗಿಕಾಮನಟಗಿ
ಹುಣಸಗಿಮೂದುನೂರ (ಕೆ)
ಹುಣಸಗಿರಾಜನಕೊಳ್ಳೂರು
ಹುಣಸಗಿನಾರಾಯಣಪೂರ
ಗುರುಮಿಠಕಲ್‌ಅನಪೂರ
ಗುರುಮಿಠಕಲ್‌ಪುಟಪಾಕ
ವಡಗೇರಾವಡಗೇರಾ

ವಿದ್ಯಾರ್ಹತೆ:

ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಮತ್ತು ಸರ್ಟಿಫಿಕೇಷನ್‌ ಕೋರ್ಸ್‌ ಇನ್‌ ಲೈಬ್ರರಿ ಸೈನ್ಸ್‌ ಪ್ರಮಾಣ ಪತ್ರ ಪಡೆದಿರಬೇಕು. ಜೊತೆಗೆ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್‌ ಕೋರ್ಸ್‌ನಲ್ಲಿ ಉತ್ತೀರ್ಣತೆ ಹೊಂದಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಕೆಯ ಕೊನೆದಿನಾಂಕಕ್ಕೆ ಅಭ್ಯರ್ಥಿಯ ಕನಿಷ್ಠ 18 ವರ್ಷಗಳು.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ
2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ
ಪ.ಜಾತಿ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷ

ಸರ್ಕಾರಿ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.

ಆಯ್ಕೆ ಪ್ರಕ್ರಿಯೆ:

ಮೆರಿಟ್‌ ಮತ್ತು ರೋಸ್ಟರ್‌ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಸಂಬಳ:

ಸರ್ಕಾರದ ಆದೇಶ ಸಂಖ್ಯೆ: RDPR 425 ಜಿಪಅ 2023 ದಿ: 13.02.2024 ರಂತೆ ಪ್ರತಿ
ಮಾಹೆ ಮಾಸಿಕ ಕನಿಷ್ಠ ವೇತನ ಹಾಗೂ ಕನಿಷ್ಠ ವೇತನದ ಜೊತೆಗೆ ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ
ನಿಗದಿಪಡಿಸುವ ವ್ಯತ್ಯಯವಾಗುವ ತುಟ್ಟಿ ಭತ್ಯೆಯನ್ನು(VDA) ಪಾವತಿಸಲಾಗುವುದು.

ಅರ್ಜಿ ಶುಲ್ಕ:

ಯಾವುದೇ ಅರ್ಜಿ ಶುಲ್ಕವಿಲ್ಲ.

ಸೂಚನೆ: ಪ್ರಿಯ ಓದುಗ ಮಿತ್ರರೆ, ಮತ್ತಷ್ಟು ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.

ಅರ್ಜಿ ಸಲ್ಲಿಸುವುದು ಹೇಗೆ.?

ಅಧಿಕೃತ ಜಾಲತಾಣ ದಲ್ಲಿ ಲಭ್ಯವಿರುವ https://nicforms.nic.in/enRhYmxlNmEzYTNkOGRjNDk3MjIwMjYwNjIzNjQ2 ಲಿಂಕ್‌ ಗೆ ಭೇಟಿ ನೀಡಿ. ಅಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯನ್ನು ತುಂಬಿ, ಕೇಳಲಾದ ದಾಖಲಾತಿ ಅಪ್ಲೋಡ್‌ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

Yadgir Zilla Panchayat Library Supervisor Recruitment 2026
ಯಾದಗಿರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ 2026ರ ಆನ್‌ಲೈನ್‌ ಅರ್ಜಿ ನಮೂನೆ ಚಿತ್ರಪಟ

Important Direct Links:

Official Revised Notification PDF(Dated on 12-07-2026)Download
Online Application Form Link (Active)Apply Now
Official Websitezpyadgiri.karnataka.gov.in
More UpdatesKarnatakaHelp.in

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

6 thoughts on “ಯಾದಗಿರಿ | ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ; ಪರಿಷ್ಕೃತ ಅಧಿಸೂಚನೆ ಪ್ರಕಟ”

    • Hi ನಾನು ಮಹಿಮಾ BA 2nd year ಓಡುತ್ತಾ ಇದೀನಿ ನನಗೆ ಗ್ರಂಥಲಯದಲಿ ಕೆಲಸ ಮಾಡಲು ತುಂಬಾ ಇಷ್ಟ ಅಗಗಿ ಈ ಪ್ರಕಾರವಾಗಿ ಕೇಳಕೋಳುತೇನೇ ಧಾನ್ಯವದಳು

      Reply

Leave a Comment