2026-27ನೇ ಸಾಲಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ತನ್ನ ವಿವಿಧ ರಿಫೈನರಿ ಘಟಕಗಳಿಗೆ ಅಪ್ರೆಂಟಿಸ್ ಕಾಯಿದೆಯಡಿ ನಾನಾ ಟ್ರೇಡ್ ಅಪ್ರೆಂಟಿಸ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ಬರೌನಿ, ಪರದೀಪ್ , ಮಥುರಾ , ಹಲ್ಡಿಯಾ , ಗವಾಹಟಿ , ಬೊಂಗೈಗಾಂವ್, ಎಓಡಿ ಡಿಗ್ಬೋಯ್ ಮತ್ತು ಗುಜರಾತ್ ರಿಫೈನರಿ ಘಟಕಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಯಾ ವಿಭಾಗ/ಟ್ರೇಡ್ ಅನುಗುಣವಾಗಿ ಒಂದು ವರ್ಷದಿಂದ ಎರಡು ವರ್ಷದವರೆಗೆ ತರಬೇತಿ ನೀಡಲಿದೆ. ಆಸಕ್ತ ಅಭ್ಯರ್ಥಿಗಳು https://apprenticeshipindia.gov.in/ ಅಥವಾ https://nats.education.gov.in/ನ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಅರ್ಜಿ ಸಲ್ಲಿಕೆಯ ಕೊನೆ ದಿನಾಂಕಗಳು:
- ಬರೌನಿ ರಿಫೈನರಿ, ಪರದೀಪ್ ರಿಫೈನರಿ, ಮಥುರಾ ರಿಫೈನರಿ, ಹಲ್ಡಿಯಾ ರಿಫೈನರಿ, ಗವಾಹಟಿ ರಿಫೈನರಿ, ಬೊಂಗೈಗಾಂವ್ ರಿಫೈನರಿ ಮತ್ತು ಗುಜರಾತ್ ರಿಫೈನರಿ – ಜುಲೈ 28
- ಎಓಡಿ ಡಿಗ್ಬೋಯ್ ರಿಫೈನರಿ – ಜುಲೈ 31
ರಿಫೈನರಿವಾರು ಸೀಟುಗಳ ವಿವರ:
| ಬರೌನಿ ರಿಫೈನರಿ | 432 |
| ಬೊಂಗೈಗಾಂವ್ ರಿಫೈನರಿ | 144 |
| ಎಓಡಿ ಡಿಗ್ಬೋಯ್ ರಿಫೈನರಿ | 126 |
| ಗುಜರಾತ್ ರಿಫೈನರಿ | 647 |
| ಗವಾಹಟಿ ರಿಫೈನರಿ | 102 |
| ಹಲ್ಡಿಯಾ ರಿಫೈನರಿ | 279 |
| ಮಥುರಾ ರಿಫೈನರಿ | 151 |
| ಪರದೀಪ್ ರಿಫೈನರಿ | 582 |
ಶೈಕ್ಷಣಿಕ ಅರ್ಹತೆ:
ಟ್ರೇಡ್ ಅಪ್ರೆಂಟಿಸ್:- ಮೂರು ವರ್ಷದ ಬಿ.ಎಸ್ಸಿ, ಎಸ್ಸೆಸ್ಸೆಲ್ಸಿ ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ, ಬಿಎ/ಬಿ.ಕಾಂ, ದ್ವಿತೀಯ ಪಿಯುಸಿ.
ಟೆಕ್ನಿಷಿಯನ್ ಅಪ್ರೆಂಟಿಸ್:- ಸಂಬಂಧಿತ ವಿಭಾಗದಲ್ಲಿ ಡಿಪ್ಲೋಮಾ ಪದವಿ
ವಯೋಮಿತಿ:
ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ.
ಆಯ್ಕೆ ಪ್ರಕ್ರಿಯೆ:
ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
- ಮೆರಿಟ್ ಪಟ್ಟಿ
- ದಾಖಲಾತಿ ಪರಿಶೀಲನೆ
ಸ್ಟೈಫಂಡ್:
ಅಪ್ರೆಂಟಿಸ್ ಅಧಿನಿಯಮ 1961/1973/ಅಪ್ರೆಂಟಿಸ್ ನಿಯಮಗಳು 1992(ತಿದ್ದುಪಡಿದಂತೆ) ಮತ್ತು ನಿಗಮದ ಮಾರ್ಗಸೂಚಿಗಳು ಮತ್ತು ಕಾರ್ಪೊರೇಷನ್ ನಿಯಮಗಳಿಗೆ ಅನುಸಾರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ.?
ಹಂತ-I ಟ್ರೇಡ್ ಅಪ್ರೆಂಟಿಸ್ ಅಭ್ಯರ್ಥಿಗಳು ಮೊದಲು https://apprenticeshipindia.gov.in/ನಲ್ಲಿ ಅರ್ಜಿ ಸಲ್ಲಿಸಬೇಕು, ಟೆಕ್ನಿಷಿಯನ್ ಅಪ್ರೆಂಟಿಸ್ ಅಭ್ಯರ್ಥಿಗಳು https://nats.education.gov.in/ನಲ್ಲಿ ಮೊದಲು ಅರ್ಜಿ ಸಲ್ಲಿಸಿ ಹೆಚ್ಚುವರಿ ಮಾಹಿತಿಯಾನ್ನು ಕಾರ್ಪೊರೇಷನ್‌ನ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಎಂಎಸ್ ಫಾರ್ಮ್‌ನ ಮೂಲಕ ಸಲ್ಲಿಸಬೇಕು.
ಹಂತ II: ಮೈಕ್ರೋಸಾಫ್ಟ್ ಫಾರ್ಮ್‌ಗಳಲ್ಲಿ ಹೆಚ್ಚುವರಿ ವಿವರಗಳನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು
Important Direct Links:
| Barauni Refinery Apprenticeship Notification PDF | Download |
| Bongaigaon Refinery Apprenticeship Notification PDF | Download |
| Digboi Refinery Apprenticeship Notification PDF | Download |
| Gujarat Refinery Apprenticeship Notification PDF | Download |
| Guwahati Refinery Apprenticeship Notification PDF | Download |
| Haldia Refinery Apprenticeship Notification PDF | Download |
| Mathura Refinery Apprenticeship Notification PDF | Download |
| Paradip Refinery Apprenticeship Notification PDF | Download |
| Trade Apprentice Apply Portal Link | Apply Now |
| Technician Apprentice Apply Portal Link | Apply Now |
| Haldia Refinery – Additional Data submission MS Form Link | Upload |
| Guwahati Refinery – Additional Data submission MS Form Link | Upload |
| Bongaigaon Refinery – Additional Data submission MS Form Link | Upload |
| Gujarat Refinery – Additional Data submission MS Form Link | Upload |
| Paradip Refinery – Additional Data submission MS Form Link | Upload |
| Mathura Refinery – Additional Data submission MS Form Link | Upload |
| Barauni Refinery – Additional Data submission MS Form Link | Upload |
| Official Website | www.iocl.com |
| More Updates | KarnatakaHelp.in |
Sewing mashin firee
“Thank you for sharing this sewing pattern. It was very helpful!”
Haginaval
u