ಯಾದಗಿರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಅಧೀನ ಸಂಸ್ಥೆಗಳಿಗೆ 11 ಫಾರ್ಮಸಿ ಅಧಿಕಾರಿ ಹಾಗೂ 15 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಅರ್ಹತೆ ಜೊತೆಗೆ ನಿಗದಿತ ಅನುಭವ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಜು.09 ರಿಂದ 18ರೊಳಗೆ ಅಧಿಕೃತ ಜಾಲತಾಣ https://yadgiri.nic.in ಮತ್ತು https://zpyadgiri. karnataka.gov.inಗಳ ಮೂಲಕ ಅರ್ಜಿ ಸಲ್ಲಿಸಬಹುದು.
ಶೈಕ್ಷಣಿಕ ಅರ್ಹತೆ:
ಫಾರ್ಮಸಿ ಅಧಿಕಾರಿ ಹುದ್ದೆಗೆ:- ಡಿ-ಫಾರ್ಮಾ
ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗೆ:- ಡಿಎಂಎಲ್‌ಟಿ(ಡಿಪ್ಲೊಮಾ ಇನ್ ಮೆಡಿಕಲ್ ಲಾಬೊರೇಟರಿ ಟೆಕ್ನಲಾಜಿ)
ಗಮನಿಸಿ: ಅಧಿಕೃತ ಅಧಿಸೂಚನೆಯಲ್ಲಿ ಶೈಕ್ಷಣಿಕ ಅರ್ಹತೆ ಕುರಿತು ಮಾಹಿತಿ ಲಭ್ಯವಿಲ್ಲ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಶೈಕ್ಷಣಿಕ ದಾಖಲೆಗಳು(ಎಲ್ಲಾ ಸೆಮಿಸ್ಟರ್ ಅಂಕಪಟ್ಟಿ)
- ಅನುಭವದ ಪ್ರಮಾಣಪತ್ರ
- ಕಲ್ಯಾಣ ಕರ್ನಾಟಕ ಪ್ರಮಾಣಪತ್ರ(371ಜೆ)
- ಕಂಪ್ಯೂಟರ್ ಕೋರ್ಸ್ ಪ್ರಮಾಣಪತ್ರ
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08473-251312ಗೆ ಕಚೇರಿಯ ಕೆಲಸದ ಸಮಯದಲ್ಲಿ ಸಂಪರ್ಕಿಸಬಹುದು.
ಪ್ರಮುಖ ಲಿಂಕ್ಸ್:
| Notice PDF | Download |
| Pharmacy Officer Online Application Form Link | Apply Now |
| Jr. Medical Laboratory Technology Officer Online Application Form Link | Apply Now |
| Official Website | yadgir.nic.in |
| More Updatess | KarnatakaHelp.in |