ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ಪೊಲೀಸ್ ಇಲಾಖೆಯ ಆರ್‌ಪಿಸಿ ಹಾಗೂ ಕೆಕೆ ವೃಂದದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆ.02ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಶುಕ್ರವಾರ(ಆ.21) ಪ್ರಕಟಿಸಿದೆ.
ಅಭ್ಯರ್ಥಿಗಳು ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶವನ್ನು ಆ.15 ರಂದು ಪ್ರಕಟಿಸಿ, ಆ.17ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಆಕ್ಷೇಪಣೆಗಳನ್ನು ಪರಿಶೀಲಿಸಿ ಆ.19ರಂದು ತಾತ್ಕಾಲಿಕ ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕನಿಷ್ಠ 30 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರುವ ಅಭ್ಯರ್ಥಿಗಳ ಜಿಲ್ಲಾವಾರು ಅಂತಿಮ ಅಂಕಪಟ್ಟಿಯನ್ನು ಇದೀಗ ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/indexnewದಲ್ಲಿ ಪ್ರಕಟಿಸಲಾಗಿದೆ.
ಈ ಅಂತಿಮ ಅಂಕಪಟ್ಟಿಯನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗುವುದು. ತದನಂತರ ನೇಮಕಾತಿ ಪ್ರಾಧಿಕಾರದಿಂದ ಜಿಲ್ಲಾ/ನಗರ/ಘಟಕವಾರು 1:5 ಅನುಪಾತದ ಪಟ್ಟಿಯನ್ನು ಪ್ರಕಟಿಸಿ, ದೇಹದಾರ್ಡ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಯನ್ನು ನಡೆಸಲು ಹಾಗೂ ನಿಯಮಾನುಸಾರ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ಕ್ರಮ ವಹಿಸುವರು.
| ಕೆಕೆ ಅಂತಿಮ ಅಂಕಪಟ್ಟಿಗಾಗಿ | ಇಲ್ಲಿ ಕ್ಲಿಕ್ಕಿಸಿ |
| ಆರ್‌ಪಿಸಿ ಅಂತಿಮ ಅಂಕಪಟ್ಟಿಗಾಗಿ | ಇಲ್ಲಿ ಕ್ಲಿಕ್ಕಿಸಿ |
| ಅಧಿಕೃತ ಜಾಲತಾಣ | ಕೆಇಎ |
| ಹೆಚ್ಚಿನ ಮಾಹಿತಿಗಾಗಿ | ಕರ್ನಾಟಕ ಹೆಲ್ಪ್.ಇನ್ |
Basavaraj s/o RudrayyswamyElekudligi Harpur
Yes