ಬೆಂಗಳೂರು: ಭಾರತ ಸರ್ಕಾರದ ರಕ್ಷಣಾ ಸಚಿವಾಲಯದಡಿ ಕಾರ್ಯನಿರ್ವಹಿಸುವ ಬಿಇಎಂಎಲ್ ಲಿಮಿಟೆಡ್(BEML Limited)ನ ಬೆಂಗಳೂರು, ಮೈಸೂರು, ಕೆ.ಜಿ.ಎಫ್ ಮತ್ತು ಪಾಲಕ್ಕಾಡ್ ಉತ್ಪಾದನಾ ಘಟಕಗಳಲ್ಲಿ ಅಪ್ರೆಂಟಿಸ್‌ಶಿಪ್ ಕಾಯ್ದೆಯಡಿ ಅಪ್ರೆಂಟಿಸ್‌ಶಿಪ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಒಟ್ಟು 1,346 ಸೀಟುಗಳಿಗೆ ನೇಮಕ ನಡೆಯಲಿದೆ. ಬಿ.ಟೆಕ್/ಬಿಇ, ಡಿಪ್ಲೊಮಾ, ಪದವಿ, ಐಟಿಐ ಅಭ್ಯರ್ಥಿಗಳಿಗೆ ಆಯಾ ಸಂಬಂಧಿತ ಟ್ರೇಡ್‌ನ ಕುರಿತು ಒಂದು ವರ್ಷದ ಅವಧಿಯವರೆಗೆ ತರಬೇತಿ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://recruitment.bemlindia.in/ದ ಮೂಲಕ ಸೆ.08ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಆಗಸ್ಟ್ 18
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 08
ಹುದ್ದೆಗಳ ವಿವರ:
ಬೆಂಗಳೂರು ಕಾಂಪ್ಲೆಕ್ಸ್ (Bangalore Complex) 400 ಸೀಟುಗಳು
ಮೈಸೂರು ಕಾಂಪ್ಲೆಕ್ಸ್ (Mysore Complex) 227 ಸೀಟುಗಳು
ಕೆ.
ಜಿ.ಎಫ್ ಕಾಂಪ್ಲೆಕ್ಸ್ (KGF Complex) 608 ಸೀಟುಗಳು
ಪಾಲಕ್ಕಾಡ್ ಕಾಂಪ್ಲೆಕ್ಸ್ (Palakkad Complex) 111 ಸೀಟುಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಕೆಳಗಿನ ವಿದ್ಯಾರ್ಹತೆಗಳನ್ನು ಹೊಂದಿರಬೇಕು:
ಪದವೀಧರ(ತಾಂತ್ರಿಕ) ಅಭ್ಯರ್ಥಿಗಳಿಗೆ; ಸಂಬಂಧಪಟ್ಟ ವಿಭಾಗಗಳಲ್ಲಿ 4 ವರ್ಷದ ಬಿ.ಇ/ಬಿ.ಟೆಕ್ ಪದವಿ.
ಸಾಮಾನ್ಯ ಪದವೀಧರ ಅಭ್ಯರ್ಥಿಗಳಿಗೆ; 3 ವರ್ಷದ ಬಿ.ಎಸ್ಸಿ(B.Sc), ಬಿ.ಕಾಂ(B.Com), ಬಿಸಿಎ(BCA), ಬಿಬಿಎ(BBA) ಅಥವಾ ಬಿಬಿಎ-ಎಚ್‌ಆರ್(BBA-HR) ಪದವಿ.
ಡಿಪ್ಲೊಮಾ(Diploma) ಅಭ್ಯರ್ಥಿಗಳಿಗೆ; ಸಂಬಂಧಪಟ್ಟ ವಿಭಾಗಗಳಲ್ಲಿ 3 ವರ್ಷದ ಪೂರ್ಣಾವಧಿ ಡಿಪ್ಲೊಮಾ.
ಐಟಿಐ(ITI) ಅಭ್ಯರ್ಥಿಗಳಿಗೆ: ಸಂಬಂಧಪಟ್ಟ ಟ್ರೇಡ್‌ಗಳಲ್ಲಿ ಪೂರ್ಣಾವಧಿ ಐಟಿಐ (1 ವರ್ಷ ಅಥವಾ 2 ವರ್ಷದ ಕೋರ್ಸ್) ಉತ್ತೀರ್ಣರಾಗಿರಬೇಕು.
(ಗಮನಿಸಿ: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಿಂದ 3 ವರ್ಷಗಳ ಒಳಗಾಗಿ ಉತ್ತೀರ್ಣರಾಗಿರಬೇಕು).
ವಯೋಮಿತಿ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿ ಕನಿಷ್ಠ 17 ವರ್ಷ ಪೂರೈಸಿರಬೇಕು.
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿ(ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಆಧಾರದ ಮೇಲೆ)
- ದಾಖಲಾತಿ ಪರಿಶೀಲನೆ
- ಅಂತಿಮ ಮೆರಿಟ್ ಪಟ್ಟಿ
ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ.
ಸ್ಟೈಪೆಂಡ್/ಸಂಬಳ:
ತರಬೇತಿ ಅವಧಿಯಲ್ಲಿ ಮಾಸಿಕವಾಗಿ ನೀಡಲಾಗುವ ಸ್ಟೈಪೆಂಡ್ ವಿವರ ಹೀಗಿದೆ:
- ಇಂಜಿನಿಯರಿಂಗ್ ಪದವೀಧರ(Graduate Technical) ಅಭ್ಯರ್ಥಿಗಳಿಗೆ; ₹12,300/-
- ಸಾಮಾನ್ಯ ಪದವೀಧರ(Graduates General)ಅಭ್ಯರ್ಥಿಗಳಿಗೆ; ₹12,300/-
- ಡಿಪ್ಲೊಮಾ(Diploma)ಅಭ್ಯರ್ಥಿಗಳಿಗೆ; ₹10,900/-
- ಐಟಿಐ(ITI)ಅಭ್ಯರ್ಥಿಗಳಿಗೆ; ಆಯಾ ಟ್ರೇಡ್ ಆಧಾರದ ಮೇಲೆ ₹9,600/- ಅಥವಾ ₹10,560/-
ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ಮೊದಲು NAPS ಪೋರ್ಟಲ್ (ITI ಅಭ್ಯರ್ಥಿಗಳಿಗೆ) ಅಥವಾ NATS ಪೋರ್ಟಲ್ (ಪದವಿ/ಡಿಪ್ಲೊಮಾ ಅಭ್ಯರ್ಥಿಗಳಿಗೆ) ನಲ್ಲಿ ನೋಂದಾಯಿಸಿಕೊಂಡು ಪ್ರೊಫೈಲ್ ಪೂರ್ಣಗೊಳಿಸಬೇಕು.
ತದನಂತರ ಬಿಇಎಂಎಲ್ ಅಧಿಕೃತ ವೆಬ್‌ಸೈಟ್ https://recruitment.bemlindia.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪ್ರಮುಖ ಲಿಂಕ್ಸ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| NAPS ಪೋರ್ಟಲ್ (ITI ಅಭ್ಯರ್ಥಿಗಳಿಗಾಗಿ) ನೋಂದಣಿ | ನೋಂದಣಿ ಮಾಡಿ |
| NATS ಪೋರ್ಟಲ್ (ಪದವಿ/ಡಿಪ್ಲೊಮಾ ಅಭ್ಯರ್ಥಿಗಳಿಗಾಗಿ) ನೋಂದಣಿ | ನೋಂದಣಿ ಮಾಡಿ |
| ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ | ಅಪ್ಲೈ ಮಾಡಿ |
| ಅಧಿಕೃತ ಜಾಲತಾಣ | www.bemlindia.in |
| ಹೆಚ್ಚಿನ ಮಾಹಿತಿಗಾಗಿ | KarnatakaHelp.in |