ಉತ್ತರ ಪಶ್ಚಿಮ ರೈಲ್ವೆಯಲ್ಲಿ ಅಪ್ರೆಂಟಿಸ್‌ ತರಬೇತಿಗೆ ಅರ್ಜಿ ಆಹ್ವಾನ

ಐಟಿಐ ಅರ್ಹತೆ

Published on:

ಜೈಪುರ: ಉತ್ತರ ಪಶ್ಚಿಮ ರೈಲ್ವೆಯು(ಎನ್‌ಡಬ್ಲ್ಯೂಆರ್)‌ ಅಪ್ರೆಂಟಿಸ್ ಕಾಯ್ದೆಯಡಿ ವಿವಿಧ ಟ್ರೇಡ್‌ನ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದು, ಅರ್ಹ ಅಭ್ಯರ್ಥಿಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಕೋಶ(ಆರ್‌ಆರ್‌ಸಿ) ಅಧಿಕೃತ ಅಧಿಸೂಚನೆ ಹೊರಡಿಸಿದೆ.

ರೈಲ್ವೆಯ ವಲಯದ ವಿವಿಧ ವರ್ಕ್‌ಶಾಪ್‌ಗಳು ಮತ್ತು ಘಟಕಗಳಲ್ಲಿ ಒಟ್ಟು 2008 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಫಿಟ್ಟರ್, ಎಲೆಕ್ಟ್ರೀಷಿಯನ್, ವೆಲ್ಡರ್, ಡೀಸೆಲ್ ಮೆಕ್ಯಾನಿಕ್, ಕಾರ್ಪೆಂಟರ್, ಪೇಂಟರ್ ಸೇರಿದಂತೆ ವಿವಿಧ ಟ್ರೇಡ್‌ಗಳಲ್ಲಿ ಈ ತರಬೇತಿ ಅವಕಾಶಗಳಿವೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಅಕ್ಟೋಬರ್‌ 07
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ನವೆಂಬರ್ 06(ರಾತ್ರಿ 23:59 ರವರೆಗೆ)

ಹುದ್ದೆಗಳ ವಿವರ:

ಅಭ್ಯರ್ಥಿಗಳು ಈ ಕೆಳಗಿನ ಯಾವುದಾದರೊಂದು ವಿಭಾಗವನ್ನು (Unit) ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ:

  • ಡಿಆರ್‌ಎಂ ಆಫೀಸ್ (DRM Office), ಅಜ್ಮೀರ್
  • ಡಿಆರ್‌ಎಂ ಆಫೀಸ್ (DRM Office), ಬಿಕಾನೇರ್
  • ಡಿಆರ್‌ಎಂ ಆಫೀಸ್ (DRM Office), ಜೈಪುರ
  • ಡಿಆರ್‌ಎಂ ಆಫೀಸ್ (DRM Office), ಜೋಧ್‌ಪುರ
  • ಬಿ.ಟಿ.ಸಿ. ಕ್ಯಾರೇಜ್, ಅಜ್ಮೀರ್
  • ಬಿ.ಟಿ.ಸಿ. ಲೋಕೋ, ಅಜ್ಮೀರ್
  • ಕ್ಯಾರೇಜ್ ವರ್ಕ್‌ಶಾಪ್, ಬಿಕಾನೇರ್
  • ಕ್ಯಾರೇಜ್ ವರ್ಕ್‌ಶಾಪ್, ಜೋಧ್‌ಪುರ

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇಕಡಾ 50 ರಷ್ಟು ಒಟ್ಟು ಅಂಕಗಳೊಂದಿಗೆ 10ನೇ ತರಗತಿ ಅಥವಾ ತತ್ಸಮಾನ 10+2 ಪದ್ಧತಿಯಡಿ ತೇರ್ಗಡೆಯಾಗಿರಬೇಕು.

ಇದರೊಂದಿಗೆ, ಸಂಬಂಧಪಟ್ಟ ಟ್ರೇಡ್‌ನಲ್ಲಿ ಎನ್‌ಸಿವಿಟಿ ಅಥವಾ ಎಸ್‌ಸಿವಿಟಿಯಿಂದ ನೀಡಲಾದ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರ (ITI – National Trade Certificate) ಹೊಂದಿರಬೇಕು.

ಸೂಚನೆ: ಅಂತಿಮ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ.

ವಯೋಮಿತಿ:

ಕನಿಷ್ಠ 15 ವರ್ಷಗಳು ತುಂಬಿರಬೇಕು. 06-11-2026ಕ್ಕೆ ಅನ್ವಯಿಸುವಂತೆ 24 ವರ್ಷಗಳನ್ನು ಮೀರಿರಬಾರದು.

  • ವಯೋಮಿತಿ ಸಡಿಲಿಕೆ:
    • ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳು.
    • ಒಬಿಸಿಅಭ್ಯರ್ಥಿಗಳಿಗೆ 3 ವರ್ಷಗಳು.
    • ವಿಕಲಚೇತನ(ಪಡಬ್ಲ್ಯೂಬಿಡಿ) ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.
    • ಮಾಜಿ ಸೈನಿಕರಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದ ಅಂಕಗಳ ಶೇಕಡಾವಾರು ಮತ್ತು ಐಟಿಐ(ITI) ನಲ್ಲಿ ಪಡೆದ ಅಂಕಗಳ ಸರಾಸರಿಯನ್ನು ಆಧರಿಸಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಮೆರಿಟ್ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳನ್ನು ಮೂಲ ದಾಖಲೆಗಳ ಪರಿಶೀಲನೆ(ಡಿವಿ) ಮತ್ತು ವೈದ್ಯಕೀಯ ತಪಾಸಣೆಗೆ(ಎಂಡಿ) ಕರೆಯಲಾಗುತ್ತದೆ.

ಸ್ಟೈಪೆಂಡ್/ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ರೈಲ್ವೆ ಮಂಡಳಿಯು ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳು ಮತ್ತು ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಮಾಸಿಕ ಸ್ಟೈಪೆಂಡ್ (ಶಿಷ್ಯವೇತನ) ನೀಡಲಾಗುತ್ತದೆ.

ತರಬೇತಿಯ ಅವಧಿಯಲ್ಲಿ ಯಾವುದೇ ಉಚಿತ ವಸತಿ ಸೌಕರ್ಯವನ್ನು (Hostel) ರೈಲ್ವೆ ಇಲಾಖೆ ಒದಗಿಸುವುದಿಲ್ಲ, ಅಭ್ಯರ್ಥಿಗಳೇ ಸ್ವಂತ ವ್ಯವಸ್ಥೆ ಮಾಡಿಕೊಳ್ಳಬೇಕು.

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.100/-
  • ಎಸ್‌ಸಿ/ಎಸ್‌ಟಿ, ವಿಕಲಚೇತನ(ಪಿಡಬ್ಲ್ಯೂಬಿಡಿ) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೂಲಕವೇ ಪಾವತಿಸಬೇಕು.

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ಅಭ್ಯರ್ಥಿಗಳು ಆರ್‌ಆರ್‌ಸಿ ಜೈಪುರದ ಅಧಿಕೃತ ವೆಬ್‌ಸೈಟ್ www.rrcjaipur.in ಗೆ ಭೇಟಿ ನೀಡಿ, ಅ.07ರಿಂದ ಲಭ್ಯವಾಗುವ ಆನ್‌ಲೈನ್ ಅರ್ಜಿ ನಮೂನೆ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಪ್ರಮುಖ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್‌–ಅ.07ರಿಂದ ಲಭ್ಯ–
ಅಧಿಕೃತ ಜಾಲತಾಣwww.rrcjaipur.in
ಮತ್ತಷ್ಟು‌ ಸುದ್ದಿಗಳಿಗಾಗಿಕರ್ನಾಟಕಹೆಲ್ಪ್‌.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment