ರೇಷನ್ ಕಾರ್ಡ್ ಇ-ಕೆವೈಸಿ(E-KYC); ಇದ್ದಿರುವ ಸ್ಥಳದಿಂದಲೇ ಮಾಡಿ..!!

Published on:

Updated On:

ಒಂದು ಕಡೆ ಕೆಲಸದ ಒತ್ತಡಗಳು.. ಇನ್ನೊಂದು ಕಡೆ ಮನೆಯ ಜವಾಬ್ದಾರಿಗಳು… ಎಲ್ಲೆಲ್ಲಿಗೋ ಕೆಲಸದ ನಿಮಿತ್ತ ಬೇರೆ-ಬೇರೆ ಪ್ರದೇಶಗಳಿಗೆ ತೆರಳಿದ್ದವರು ರೇಷನ್‌ ಕಾರ್ಡ್‌ ಇ-ಕೆವೈಸಿ ಸಲುವಾಗಿಯೇ ತಮ್ಮ ಊರುಗಳಿಗೆ ಮರಳುವುದು ಅನಿವಾರ್ಯವಾಗಿತ್ತು. ನ್ಯಾಯಬೆಲೆ ಅಂಗಡಿಗೆ ಹೋದರೆ ಅಲ್ಲಿ ಸರತಿ ಸಾಲು, ಇಲ್ಲವೇ ಸರ್ವರ್‌ ಸಮಸ್ಯೆ! ಇದರಿಂದ ಬೇಸತ್ತ ಜನ ಮನಸ್ಸಿನಲ್ಲಿಯೇ ಗೊಣಗಿ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದರು…

ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಈ ಸಮಸ್ಯೆಗಳಿಗೆ ಪರಿಹಾರ ನೀಡಲು ‘ಅನ್ನ ಸೇವೆ’ ಆ್ಯಪ್ ಬಿಡುಗಡೆಗೊಳಿಸಿದೆ. ಈ ಆ್ಯಪ್ ಬಳಸಿ ಫಲಾನುಭವಿಗಳು ಮುಖಚಹರೆ ದೃಢೀಕರಣ ಮಾಡುವ ಮೂಲಕ ತಾವು ಇರುವ ಸ್ಥಳದಿಂದಲೇ ಇ-ಕೆವೈಸಿ ಪೂರ್ಣಗೊಳಿಸಬಹುದು.

ಸದ್ಯಕ್ಕೆ ಪ್ರಾಯೋಗಿಕವಾಗಿ ಬಳ್ಳಾರಿ, ಬೆಂಗಳೂರು, ಬೆಂಗಳೂರು ಸೆಂಟ್ರಲ್‌, ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ, ಬೀದರ್‌, ಹಾವೇರಿ, ಕೊಪ್ಪಳ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಫಲಾನುಭವಿಗಳು ಇ-ಕೆವೈಸಿಯನ್ನು ಅನ್ನ ಸೇವೆ ಆ್ಯಪ್ ಮೂಲಕ ಮಾಡಿಕೊಳ್ಳಬಹುದು. ಇನ್ನುಳಿದ ಜಿಲ್ಲೆಗಳ ಫಲಾನುಭವಿಗಳಿಗೂ ಅತಿ ಶೀಘ್ರದಲ್ಲೇ ಅವಕಾಶ ಕಲ್ಪಿಸಲಾಗುತ್ತದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.

ರೇಷನ್ ಕಾರ್ಡ್ ಇ-ಕೆವೈಸಿಗಾಗಿ ಅಗತ್ಯ ದಾಖಲೆಗಳೇನು?

  • ರೇಷನ್‌ ಕಾರ್ಡ್(ಪಡಿತರ ಚೀಟಿ)
  • ಇ-ಕೆವೈಸಿ ಆಗಿಲ್ಲದವರ ಸದಸ್ಯರ ಆಧಾರ್‌ ಕಾರ್ಡ್ ಸಂಖ್ಯೆ(ಆ್ಯಪ್ನಲ್ಲಿ ಸ್ವಯಂಚಾಲಿತವಾಗಿ ತೋರುತ್ತದೆ)

ರೇಷನ್ ಕಾರ್ಡ್ ಇ-ಕೆವೈಸಿಗಾಗಿ ಬೇಕಾದ ಅಪ್ಲಿಕೇಶನ್ಗಳು

  • ಅನ್ನ ಸೇವೆ
  • ಆಧಾರ್‌ ಫೇಸ್‌ ಅಥೆಂಟಿಕೇಶನ್ ಆ್ಯಪ್(CeG Face EKYC APP)
  • ಆಧಾರ್‌ ಫೇಸ್‌ ಆರ್‌ಡಿ(AadhaarFaceRD)

‘ಅನ್ನ ಸೇವೆ’ ಆ್ಯಪ್ ಮೂಲಕ ರೇಷನ್ ಕಾರ್ಡ್ ಇ-ಕೆವೈಸಿ(E-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ-1 ಮೊದಲು ಪ್ಲೇ ಸ್ಟೋರ್‌ನಿಂದ ‘ಅನ್ನ ಸೇವೆ‘ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಹಂತ-2 ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು, 12 ಅಂಕಿಯ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಗೂ ಕಾರ್ಡ್‌ಗೆ ಲಿಂಕ್‌ ಇರುವ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಮುಂದೆ “ಒ.ಟಿ.ಪಿ ಕಳುಹಿಸಿ” ಒಟನ್‌ ಮೇಲೆ ಕ್ಲಿಕ್ಕಿಸಿಕೊಂಡು.(ಈ ಕೆಳಗೆ ಚಿತ್ರಪಟದಲ್ಲಿ ತೋರಿಸಲಾಗಿದೆ)

ಹಂತ-3 ತದನಂತರ ಫಲಾನುಭವಿಯ ವಿವರಗಳು(Family Member details) ಪರದೆಯಾಗುತ್ತದೆ. ಫಲಾನುಭವಿಗಳ ಹೆಸರಿನ ಮುಂದೆ “Pending” ಅಂತ ಕೆಂಪು ಬಣ್ಣದಲ್ಲಿದ್ದರೆ ಅವರು ‘ವೆರಿಫೈ ಈಕೆವೈಸಿ’ (Verify E-KYC) ಬಟನ್ ಒತ್ತಿ.

ಹಂತ-4 ಮುಂದೆ ಇ ಆಡಳಿತ ಕೇಂದ್ರದ ಆಧಾರ್ ಸೇವೆ/Center for e Governance Aadhaar Service ಪೋರ್ಟಲ್‌ ತೆರೆಯುತ್ತದೆ. ಅಲ್ಲಿ ಸ್ವಯಂ ಘೋಷಣೆಯನ್ನು ಚೆಕ್‌ ಮಾಡಿಕೊಂಡು, “Face Capture” ಶೀರ್ಷಿಕೆಯ ಬಟನ್‌ ಮೇಲೆ ಕ್ಲಿಕ್ಕಿಸಿ, ಈಗ ಕ್ಯಾಮೆರಾ ತೆರೆದ ನಂತರ, ನಿಮ್ಮ ಮುಖವನ್ನು ತೋರಿಸಿ ಮತ್ತು ಕಣ್ಣುಗಳನ್ನು ಮಿಟುಕಿಸುವ ಮೂಲಕ ಫೇಸ್ ಕ್ಯಾಪ್ಚರ್ ಪೂರ್ಣಗೊಳಿಸಿ. ಯಶಸ್ವಿಯಾದ ನಂತರ ಇ-ಕೆವೈಸಿ ಪೂರ್ಣಗೊಂಡಿದೆ ಎಂಬ ಸಂದೇಶ ಬರುತ್ತದೆ.

ಗಮನಿಸಿ ಬಂಧುಗಳೇ, ಅತಿ ಶೀಘ್ರದಲ್ಲೇ ಈ ಮೇಲಿನ ಹಂತಗಳಿಗೆ ಸಂಬಂಧಿತ ಆಯಾ ಚಿತ್ರಪಟಗಳನ್ನು(Screenshots) ಲಗತ್ತಿಸಲಾಗುವುದು. ಆವಾಗ ಸರಳವಾಗಿ ತಮಗೆ ಅರ್ಥವಾಗಬಹುದು ಎಂಬುದು ನಮ್ಮ ಆಶಯ.

ರೇಷನ್‌ ಕಾರ್ಡ್‌ ಇ-ಕೆವೈಸಿ ಮಾಡಲು ಅಕ್ಟೋಬರ್‌ 20ರವರೆಗೆ ಅವಕಾಶ ನೀಡಲಾಗಿದೆ.

ಪ್ರಮುಖ ಲಿಂಕ್‌ಗಳು:

ಅನ್ನ ಸೇವೆ ಆ್ಯಪ್ ಲಿಂಕ್‌ ಅಧಿಕೃತ ಲಿಂಕ್‌ ಶೀಘ್ರದಲ್ಲೇ ಲಭ್ಯ
ಆಧಾರ್‌ ಫೇಸ್‌ ಅಥೆಂಟಿಕೇಶನ್ ಆ್ಯಪ್(CeG Face EKYC APP) ಲಿಂಕ್ಡೌನ್ಲೋಡ್‌ ಮಾಡಿ
ಆಧಾರ್‌ ಫೇಸ್‌ ಆರ್‌ಡಿ(AadhaarFaceRD)ಡೌನ್ಲೋಡ್‌ ಮಾಡಿ
ಅಧಿಕೃತ ಜಾಲತಾಣahara.karnataka.gov.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕ ಹೆಲ್ಪ್.‌ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment