ರೇಷನ್ ಕಾರ್ಡ್ ‘ಅನ್ನ ಸೇವೆ’ ಇ-ಕೆವೈಸಿ; ಎಲ್ಲಾ ಜಿಲ್ಲೆಗೆ ವಿಸ್ತರಣೆ!
ಒಂದು ಕಡೆ ಕೆಲಸದ ಒತ್ತಡಗಳು.. ಇನ್ನೊಂದು ಕಡೆ ಮನೆಯ ಜವಾಬ್ದಾರಿಗಳು… ಎಲ್ಲೆಲ್ಲಿಗೋ ಕೆಲಸದ ನಿಮಿತ್ತ ಬೇರೆ-ಬೇರೆ ಪ್ರದೇಶಗಳಿಗೆ ತೆರಳಿದ್ದವರು ರೇಷನ್ ಕಾರ್ಡ್ ಇ-ಕೆವೈಸಿ ಸಲುವಾಗಿಯೇ ತಮ್ಮ ಊರುಗಳಿಗೆ ಮರಳುವುದು ಅನಿವಾರ್ಯವಾಗಿತ್ತು. ನ್ಯಾಯಬೆಲೆ ಅಂಗಡಿಗೆ ಹೋದರೆ ಅಲ್ಲಿ ಸರತಿ ಸಾಲು, ಇಲ್ಲವೇ ಸರ್ವರ್ ಸಮಸ್ಯೆ! ಇದರಿಂದ ಬೇಸತ್ತ ಜನ ಮನಸ್ಸಿನಲ್ಲಿಯೇ ಗೊಣಗಿ ತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದರು… ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಈ ಸಮಸ್ಯೆಗಳಿಗೆ ಪರಿಹಾರ ನೀಡಲು ‘ಅನ್ನ ಸೇವೆ’ ಆ್ಯಪ್ ಬಿಡುಗಡೆಗೊಳಿಸಿದೆ. … More