ಯಾದಗಿರಿ: ಯಾದಗಿರಿ ತಾಲೂಕು ಸೇರಿದಂತೆ ಶಹಾಪೂರ, ಹುಣಸಗಿ ತಾಲೂಕಿನ ನಾನಾ ಗ್ರಾಮಗಳಿಗೆ ಹೊಸ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಸೋಮಶೇಖರ ಬಿರಾದಾರ ಅವರು ತಿಳಿಸಿದ್ದಾರೆ.
ಯಾದಗಿರಿ ತಾಲೂಕಿನ ಸೌರಾಷ್ಟ್ರ ಹಳ್ಳಿ, ಕಿಲ್ಲನಕೇರಾ, ಶಹಾಪೂರ ತಾಲೂಕಿನ ಮುಡಬೂಳ, ರಸ್ತಾಪೂರ, ಹುಣಸಗಿ ತಾಲೂಕಿನ ನಾರಾಯಣಪೂರದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು,ಅಗತ್ಯ ದಾಖಲೆಗಳೊಂದಿಗೆ ಏ.30ರೊಳಗೆ ಅರ್ಜಿ(ನಮೂನೆ-ಎ)ರಲ್ಲಿ ಅರ್ಜಿಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಯಾದಗಿರಿ ಕೊಠಡಿ ಸಂಖ್ಯೆ ಎ10, ಜಿಲ್ಲಾಡಳಿತ ಭವನ, ಚಿತ್ತಾಪೂರ ರಸ್ತೆ ಇಲ್ಲಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ KarnatakaHelp.inಗೆ ಭೇಟಿ ನೀಡಿ.
Hi