ಬೆಂಗಳೂರು: ಜಾಲಹಳ್ಳಿ ವಾಯುಪಡೆ ಶಾಲೆಯಲ್ಲಿ ಖಾಲಿ ಇರುವ ನಾನಾ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
06 ಪಿಜಿಟಿ, 01 ಟಿಜಿಟಿ, 08 ಪಿಆರ್‌ಟಿ, 05 ಹೆಲ್ಪರ್ಸ್ ಹಾಗೂ 05 ಪಾರ್ಟ್ ಟೈಮ್ ಇನ್ಸ್ಟ್ರಕ್ಟರ್ ಸೇರಿದಂತೆ ಒಟ್ಟು 25 ಸ್ಥಾನಗಳಿಗೆ ನೇಮಕ ನಡೆಯಲಿದ್ದು, ಗುತ್ತಿಗೆ, ನಿಯಮಿತ, ಎಂಪೆನೆಲ್ ಆಧಾರದಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಏ.11 ಕೊನೆಯದಿನವಾಗಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು AFSJAL ಅಧಿಕೃತ ಜಾಲತಾಣ https://www.afsjal.org/index.phpದಲ್ಲಿ ವಿದ್ಯಾರ್ಹತೆ ಕುರಿತು ನೀಡಲಾದ ಅಧಿಸೂಚನೆ ಪರಿಶೀಲಿಸಿ, ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಜೊತಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ‘ಕಾರ್ಯನಿರ್ವಾಹಕ ನಿರ್ದೇಶಕರು ವಾಯುಪಡೆ ಶಾಲೆ, ಜಾಲಹಳ್ಳಿ, ಜಾಲಹಳ್ಳಿ ಪೂರ್ವ, ಬೆಂಗಳೂರು-560014’ ವಿಳಾಸಕ್ಕೆ ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 11, 2026
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ ವಿಜ್ಞಾನ ವಿಷಯದೊಂದಿಗೆ ದ್ವಿತೀಯ ಪಿಯುಸಿ ಉತ್ತೀರ್ಣ, ಸಂಬಂಧಿತ ವಿಭಾಗದಲ್ಲಿ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ಬಿ.ಇ/ಬಿ.ಟೆಕ್, ಬಿ.ಎಡ್, ಬಿ.ಎಲ್.ಎಡ್, ಬ್ರಿಡ್ಜ್ ಕೋರ್ಸ್ ಅಥವಾ ತತ್ಸಮಾನದಂತಹ ಸಂಬಂಧಿತ ಅರ್ಹತೆಗಳನ್ನು ಹೊಂದಿರಬೇಕು.
ಗಮನಿಸಿ: ವಿದ್ಯಾರ್ಹತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ, ಈ ಸುದ್ದಿಯ ಕೊನೆಯಲ್ಲಿ “Important Direct Links” ಶಿರ್ಷೀಕೆಯಡಿ ನೀಡಲಾಗಿದೆ.
ವಯೋಮಿತಿ:
✓ ಪಿಜಿಟಿ, ಟಿಜಿಟಿ ಹಾಗೂ ಪಿಆರ್‌ಟಿ ಹುದ್ದೆಗಳಿಗೆ;
ಕನಿಷ್ಠ ಮಿತಿ 21 ವರ್ಷಗಳು
ಗರಿಷ್ಠ ಮಿತಿ 50 ವರ್ಷಗಳು
✓ ಸಹಾಯಕ ಹುದ್ದೆಗಳಿಗೆ;
ಕನಿಷ್ಠ ಮಿತಿ 21 ವರ್ಷಗಳು
ಗರಿಷ್ಠ ಮಿತಿ 40 ವರ್ಷಗಳು
✓ ಪಾರ್ಟ್ ಟೈಮ್ ಇನ್ಸ್ಟ್ರಕ್ಟರ್ ಹುದ್ದೆಗಳಿಗೆ; ಜಾಲಹಳ್ಳಿ ವಾಯುಪಡೆ ಶಾಲೆ ನಿಯಮಗಳ ಅನುಸಾರ
ವಯೋಮಿತಿ ಸಡಿಲಿಕೆ; ಮಹಿಳಾ ಅಭ್ಯರ್ಥಿಗಳು ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 05 ವರ್ಷಗಳು.
ಆಯ್ಕೆ ವಿಧಾನ:
ಜಾಲಹಳ್ಳಿ ವಾಯುಪಡೆ ಶಾಲೆ ನಿಯಮಗಳ ಅನುಸಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂಬಳ:
ಪಿಜಿಟಿ ಹುದ್ದೆಗಳಿಗೆ ₹35000-59000
ಟಿಜಿಟಿ ಹುದ್ದೆಗಳಿಗೆ ₹33000-56000
ಪಿ.ಆರ್.ಟಿ ಹುದ್ದೆಗಳಿಗೆ ₹28500-48000
ಸಹಾಯಕರು ಹುದ್ದೆಗಳಿಗೆ ₹13000-22000
ಪಾರ್ಟ್ ಟೈಮ್ ಇನ್ಸ್ಟ್ರಕ್ಟರ್ ಹುದ್ದೆಗಳಿಗೆ : ಜಾಲಹಳ್ಳಿ ವಾಯುಪಡೆ ಶಾಲೆ ನಿಯಮಗಳ ಅನುಸಾರ
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಅರ್ಜಿ ಸಲ್ಲಿಸುವ ವಿಧಾನ
• ಅಭ್ಯರ್ಥಿಗಳು AFSJAL ಅಧಿಕೃತ ಜಾಲತಾಣ https://www.afsjal.org/index.php ಕ್ಕೆ ಭೇಟಿ ನೀಡಿ.
• ನಂತರ ಡೌನ್‌ಲೋಡ್‌ಗಳು ವಿಭಾಗದಲ್ಲಿ ನೀಡಲಾಗಿರುವ “ಅರ್ಜಿ ನಮೂನೆ 2026ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ” ಆಯ್ಕೆಯನ್ನು ಆರಿಸಿ.
• ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ-ವಿವರ, ಸಹಿ, ಭಾವಚಿತ್ರ, ಡಿಮ್ಯಾಂಡ್ ಡ್ರಾಫ್ಟ್, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಈ ಕೆಳಗಿನ ವಿಳಾಸಕ್ಕೆ ಏಪ್ರಿಲ್ 11 ರೊಳಗೆ ತಲುಪುವಂತೆ ಅಂಚೆ ಮೂಲಕ ಕಳುಹಿಸಬೇಕು.
ವಿಳಾಸ: ಕಾರ್ಯನಿರ್ವಾಹಕ ನಿರ್ದೇಶಕರು ವಾಯುಪಡೆ ಶಾಲೆ, ಜಾಲಹಳ್ಳಿ, ಜಾಲಹಳ್ಳಿ ಪೂರ್ವ, ಬೆಂಗಳೂರು-560014
ಹೆಚ್ಚಿನ ಮಾಹಿತಿಗಾಗಿ: ಸಂಪರ್ಕ ಸಂಖ್ಯೆ – 080-23455069/63 ಅನ್ನು ಸಂಪರ್ಕಿಸಬಹುದು.
Important Direct Links:
| Official Notification PDF | Download |
| Post Wise Qualification Details PDF | Download |
| Application Form PDF Link | Download |
| Application Form(Microsoft Word) Link | View and Edit |
| Official Website | www.afsjal.org |
| More Updates | KarnatakaHelp.in |