ನವದೆಹಲಿ: ಭಾರತೀಯ ಸರ್ವೋಚ್ಚ ನ್ಯಾಯಾಲಯವು(ಸುಪ್ರೀಂ ಕೋರ್ಟ್) ಗ್ರೂಪ್-ಬಿ ನಾನ್-ಗೆಜೆಟೆಡ್ ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗಾಗಿ ಅರ್ಹ ಭಾರತೀಯ ನಾಗರಿಕರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
ಒಟ್ಟು ತಾತ್ಕಾಲಿಕ 250 ಹುದ್ದೆಗಳಿಗೆ ವಿವಿಧ ಹಂತದ ಪರೀಕ್ಷೆಗಳು ಹಾಗೂ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಅಕ್ಟೋಬರ್ 07
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ- ಅಕ್ಟೋಬರ್ 28 (ರಾತ್ರಿ 11:55ರವರೆಗೆ)
- ವಸ್ತುನಿಷ್ಠ ಮಾದರಿಯ ಪರೀಕ್ಷೆ (ಒಟಿಟಿ) ನಡೆಯುವ ತಾತ್ಕಾಲಿಕ ದಿನಾಂಕ- ನವೆಂಬರ್ 20, 2026
- ಕೀ ಉತ್ತಗಳನ್ನು(Answer Keys) ಅಪ್‌ಲೋಡ್ ಮಾಡುವ ದಿನಾಂಕ- ನವೆಂಬರ್ 22, 2026
- ಆಕ್ಷೇಪಣೆ ಸಲ್ಲಿಸಲು ತಾತ್ಕಾಲಿಕ ದಿನಾಂಕಗಳು- ನವೆಂಬರ್ 22 ರಿಂದ ನವೆಂಬರ್ 23ರ ರಾತ್ರಿ 11:55ರವರೆಗೆ
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ(Bachelor’s degree) ಹೊಂದಿರಬೇಕು.
ಕಂಪ್ಯೂಟರ್ ಕಾರ್ಯಾಚರಣೆಯ ಜ್ಞಾನದೊಂದಿಗೆ ಕಂಪ್ಯೂಟರ್‌ನಲ್ಲಿ ನಿಮಿಷಕ್ಕೆ ಕನಿಷ್ಠ 35 ಪದಗಳ (35 w.p.m.) ಟೈಪಿಂಗ್ ವೇಗವನ್ನು ಹೊಂದಿರಬೇಕು.
ವಯೋಮಿತಿ:
01-09-20026ರಂತೆ, ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳು.
ಪರಿಶಿಷ್ಟ ಜಾತಿ(ಎಸ್‌ಸಿ), ಪರಿಶಿಷ್ಟ ಪಂಗಡ(ಎಸ್‌ಟಿ), ಇತರ ಹಿಂದುಳಿದ ವರ್ಗಗಳು(ಒಬಿಸಿ- ಎನ್‌ಸಿಎಲ್), ದೈಹಿಕ ವಿಕಲಚೇತನರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಭಾರತ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.
ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತರಿಗೆ ಗರಿಷ್ಠ 5 ವರ್ಷಗಳ ಸಡಿಲಿಕೆ ಇರುತ್ತದೆ. ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯ ಇಲಾಖಾ ಅಭ್ಯರ್ಥಿಗಳಿಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳು ಈ ಕೆಳಗಿನ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ:
- ವಸ್ತುನಿಷ್ಠ ಮಾದರಿಯ ಪರೀಕ್ಷೆ (ಒಟಿಟಿ):- 100 ಅಂಕಗಳ ಬಹು ಆಯ್ಕೆಯ ಪ್ರಶ್ನೆಗಳು (ಸಮಯ 1.5 ಗಂಟೆ, ಕನಿಷ್ಠ ಅರ್ಹತಾ ಅಂಕಗಳು 50). ಇದರಲ್ಲಿ ತಪ್ಪು ಉತ್ತರಗಳಿಗೆ 0.25 ಅಂಕಗಳ ನೆಗೆಟಿವ್ ಮಾರ್ಕಿಂಗ್ ಇರುತ್ತದೆ.
- ಕಂಪ್ಯೂಟರ್ ಟೈಪಿಂಗ್ ವೇಗ ಪರೀಕ್ಷೆ (ಟಿಎಸ್‌ಟಿ):- ಇಂಗ್ಲಿಷ್ ಭಾಷೆಯಲ್ಲಿ ನಿಮಿಷಕ್ಕೆ ಕನಿಷ್ಠ 35 ಪದಗಳ ವೇಗ ಇರಬೇಕು (ಸಮಯ 10 ನಿಮಿಷ, ಗರಿಷ್ಠ ಅಂಕಗಳು 50, ಕನಿಷ್ಠ ಅರ್ಹತಾ ಅಂಕಗಳು 25). ಒಟ್ಟು ಟೈಪ್ ಮಾಡಿದ ಪದಗಳಲ್ಲಿ ಕೇವಲ ಶೇ. 3 ರಷ್ಟು ತಪ್ಪುಗಳಿಗೆ ಮಾತ್ರ ಅವಕಾಶವಿರುತ್ತದೆ.
- ಲಿಖಿತ ವಿವರಣಾತ್ಮಕ ಪರೀಕ್ಷೆ:- ಇಂಗ್ಲಿಷ್ ಭಾಷೆಯಲ್ಲಿ ಕಾಂಪ್ರಿಹೆನ್ಷನ್, ಪ್ರೆಸಿಸ್ ರೈಟಿಂಗ್ ಮತ್ತು ಪ್ರಬಂಧ ಬರವಣಿಗೆ ಒಳಗೊಂಡಿರುತ್ತದೆ (ಸಮಯ 2 ಗಂಟೆ, ಗರಿಷ್ಠ ಅಂಕಗಳು 100, ಕನಿಷ್ಠ ಅರ್ಹತಾ ಅಂಕಗಳು 50).
- ಸಂದರ್ಶನ(Interview):- ಗರಿಷ್ಠ ಅಂಕಗಳು 25, ಕನಿಷ್ಠ ಅರ್ಹತಾ ಅಂಕಗಳು 13.
ಸಂಬಳ:
ಈ ಹುದ್ದೆಯು ಪೇ ಮ್ಯಾಟ್ರಿಕ್ಸ್‌ನ ಹಂತ 6 (Level 6)ರ ಅಡಿಯಲ್ಲಿದ್ದು, ಆರಂಭಿಕ ಮೂಲ ವೇತನ (Basic Pay) ರೂ. 35,400/-ಮತ್ತು ನಿಯಮಾನುಸಾರ ಇತರ ಭತ್ಯೆಗಳನ್ನು ಒಳಗೊಂಡಿರುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ/ಅನಾರಕ್ಷಿತ (General/Unreserved) ಅಭ್ಯರ್ಥಿಗಳಿಗೆ ರೂ.1,500(ಬ್ಯಾಂಕ್ ಶುಲ್ಕಗಳು ಹೆಚ್ಚುವರಿ).
- ಎಸ್‌ಸಿ/ಎಸ್ಟಿ/ಒಬಿಸಿ(ಎನ್‌ಸಿಎಲ್)/ಮಾಜಿ ಸೈನಿಕರು/ದೈಹಿಕ ವಿಕಲಚೇತನ ಅಭ್ಯರ್ಥಿಗಳಿಗೆ ರೂ.750/- (ಬ್ಯಾಂಕ್ ಶುಲ್ಕಗಳು ಹೆಚ್ಚುವರಿ).
ಶುಲ್ಕವನ್ನು ಯುಸಿಒ ಬ್ಯಾಂಕ್ ಒದಗಿಸುವ ಪಾವತಿ ಗೇಟ್‌ವೇ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಪಾವತಿಸಬೇಕಾಗುತ್ತದೆ. ಪಾವತಿಸಿದ ಶುಲ್ಕವನ್ನು ಯಾವುದೇ ಸಂದರ್ಭದಲ್ಲೂ ಮರುಪಾವತಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಸರ್ವೋಚ್ಚ ನ್ಯಾಯಾಲಯದ ಅಧಿಕೃತ ಜಾಲತಾಣ https://www.sci.gov.in/recruitments/ದಲ್ಲಿ ಅ.07ರಿಂದ ಲಭ್ಯವಾಗಲಿರುವ ಲಿಂಕ್ ಮೂಲಕ ಆನ್ಲೈನ್ ಮೂಲಕ ನಿಗದಿತ ಅರ್ಜಿ ಶುಲ್ಕ ಪಾವತಿ ಅರ್ಜಿ ಸಲ್ಲಿಕೆ ಮಾಡಬಹುದು.
ಪ್ರಮುಖ ದಿನಾಂಕಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | –ಅ.07ರಿಂದ ಲಭ್ಯ– |
| ಅಧಿಕೃತ ಜಾಲತಾಣ | https://www.sci.gov.in/ |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕ ಹೆಲ್ಪ್.ಇನ್ |