ನೌಕಾ ಹಡಗು ದುರಸ್ತಿ ಯಾರ್ಡ್(NSRY)ನಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿ!

ಐಟಿಐ ಉತ್ತೀರ್ಣ

Published on:

ರಕ್ಷಣಾ ಸಚಿವಾಲಯ(ನೌಕಾಪಡೆ)ದ ಅಪ್ರೆಂಟಿಸ್ ತರಬೇತಿ ಶಾಲೆ ಶ್ರೀ ವಿಜಯ ಪುರಂ ನೌಕಾ ಹಡಗು ದುರಸ್ತಿ ಯಾರ್ಡ್‌ನಲ್ಲಿ 2026-27ನೇ ಸಾಲಿಗೆ ಐಟಿ-03 ಬ್ಯಾಚ್ ಟೆಕ್ನಿಷಿಯನ್(ವೃತ್ತಿಪರ) ಅಪ್ರೆಂಟಿಸ್‌ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು 13 ವಿವಿಧ ಟ್ರೇಡ್‌ಗಳಲ್ಲಿ 50 ಹುದ್ದೆಗಳ ಭರ್ತಿಗೆ ನಡೆಯಲಿದೆ. ತರಬೇತಿ ಒಂದು ವರ್ಷದ್ದಾಗಿದ್ದು, ಸಂಬಂಧಿತ ಆಯಾ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://apprenticeship.recttindia.in/ದ ಮೂಲಕ ಅ.10ರೊಳಗೆ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಆರಂಭದ ದಿನಾಂಕ- ಆಗಸ್ಟ್‌ 17
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 10(ರಾತ್ರಿ 23:59 ಗಂಟೆಯವರೆಗೆ).
  • ತರಬೇತಿ ಪ್ರಾರಂಭವಾಗುವ ತಾತ್ಕಾಲಿಕ ದಿನಾಂಕ- ಡಿಸೆಂಬರ್ 01, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಕನಿಷ್ಠ ಮೆಟ್ರಿಕ್ಯುಲೇಷನ್(ಹತ್ತನೇ ತರಗತಿ) ತೇರ್ಗಡೆಯಾಗಿರಬೇಕು. ಇದರೊಂದಿಗೆ ಸಂಬಂಧಪಟ್ಟ ಟ್ರೇಡ್‌ಗಳಲ್ಲಿ NCVT ಅಥವಾ SCVT ಅಡಿಯಲ್ಲಿ ಐಟಿಐ (ITI) ಉತ್ತೀರ್ಣರಾಗಿರಬೇಕು.

ಈಗಾಗಲೇ ಅಪ್ರೆಂಟಿಸ್‌ಶಿಪ್ ತರಬೇತಿ ಪಡೆದಿರುವ ಅಥವಾ ಪ್ರಸ್ತುತ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

ವಯೋಮಿತಿ:

ತರಬೇತಿ ಪ್ರಾರಂಭವಾಗುವ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಸದರಿ ಅಪ್ರೆಂಟಿಸ್‌ಶಿಪ್ ತರಬೇತಿಗೆ ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ:

  • ಶಾರ್ಟ್‌ಲಿಸ್ಟ್ ಮಾಡುವುದು(ಮೆರಿಟ್ ಪಟ್ಟಿ)
  • ಸಂದರ್ಶನ
  • ದಾಖಲೆಗಳ ಪರಿಶೀಲನೆ
  • ವೈದ್ಯಕೀಯ ತಪಾಸಣೆ

ಸಂಬಳ/ಸ್ಟೈಪೆಂಡ್:

ಆಯ್ಕೆಯಾದ ಅಪ್ರೆಂಟಿಸ್‌ಗಳಿಗೆ ಅಪ್ರೆಂಟಿಸ್‌ಶಿಪ್ ನಿಯಮಗಳು 1992 ರ ಪ್ರಕಾರ ಅಥವಾ ಕಾಲಕಾಲಕ್ಕೆ ಸರ್ಕಾರವು ಪರಿಷ್ಕರಿಸುವ ನಿಯಮಗಳ ಪ್ರಕಾರ ಮಾಸಿಕ ಸ್ಟೈಪೆಂಡ್(Stipend) ಪಾವತಿಸಲಾಗುತ್ತದೆ.

ಅರ್ಜಿ ಶುಲ್ಕ:

ಅಧಿಕೃತ ಪ್ರಕಟಣೆಯಲ್ಲಿ ಯಾವುದೇ ರೀತಿಯ ಅರ್ಜಿ ಶುಲ್ಕದ ಬಗ್ಗೆ ಉಲ್ಲೇಖಿಸಲಾಗಿಲ್ಲ (ಅರ್ಜಿ ಶುಲ್ಕ ಇರುವುದಿಲ್ಲ).

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಆದ https://apprenticeship.recttindia.in/ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.

ಹಂತ 1: ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಿ.
ಹಂತ 2: ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
ಹಂತ 3: ವಿವರವಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಫೋಟೋ ಮತ್ತು ಸಹಿ ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ.

ಪ್ರಮುಖ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್‌ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಲಿಂಕ್‌ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣmod.gov.in
ಹೆಚ್ಚಿನ ಮಾಹಿತಿಗಾಗಿಕರ್ನಾಟಕಹೆಲ್ಪ್.ಇನ್
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment