ಭುವನೇಶ್ವರ: ಪೂರ್ವ ಕರಾವಳಿ ರೈಲ್ವೆ(ಈಸ್ಟ್ ಕೋಸ್ಟ್ ರೈಲ್ವೆ)ಯ ರೈಲ್ವೆ ನೇಮಕಾತಿ ಮಂಡಳಿಯು ಅಪ್ರೆಂಟಿಸ್ ಕಾಯ್ದೆಯಡಿ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ವಲಯ ವ್ಯಾಪ್ತಿಯ ವಿವಿಧ ವಿಭಾಗಗಳು ಮತ್ತು ಕಾರ್ಯಾಗಾರಗಳಿಗೆ ಒಟ್ಟು 1599 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ಸಂಬಂಧಿತ ಆಯಾ ಟ್ರೇಡ್‌ಗಳ ತರಬೇತಿ ಒದಗಿಸಲಿದೆ. ಟ್ರೇಡ್‌ಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ ಜೊತೆಗೆ ಐಟಿಐ ಅಥವಾ ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಅಧಿಕೃತ ಜಾಲತಾಣ www.rrcbbs.org.inಕ್ಕೆ ಭೇಟಿ ನೀಡಿ, ಸೆ.15ರೊಳಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ ಮತ್ತು ಸಮಯ- ಆಗಸ್ಟ್ 26 ರಂದು ಸಂಜೆ 17:00 ಗಂಟೆಗೆ.
- ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮತ್ತು ಸಮಯ- ಸೆಪ್ಟೆಂಬರ್ 15 ರಂದು ಸಂಜೆ 17:00 ಗಂಟೆಗೆ.
ಟ್ರೇಡ್‌ವಾರು ಸ್ಥಾನಗಳ ಮಾಹಿತಿ:
| ಟ್ರೇಡ್ ಹೆಸರು (Trade Name) | ಒಟ್ಟು ಹುದ್ದೆಗಳ ಸಂಖ್ಯೆ (Total Slots) |
|---|---|
| ಫಿಟ್ಟರ್(Fitter) | 263 |
| ಬ್ಲಾಕ್ ಸ್ಮಿತ್/ಇಂಜಿನಿಯರಿಂಗ್ ಬ್ಲಾಕ್ ಸ್ಮಿತ್(Black Smith/Engg. Black Smith) | 165 |
| ವೆಲ್ಡರ್(Welder) | 115 |
| ಪ್ಲಂಬರ್(Plumber) | 82 |
| ಮೇಸನ್(Mason) | 102 |
| ಬ್ರಿಡ್ಜ್ ಎರೆಕ್ಟರ್(Bridge Erector) | 90 |
| ಕಾರ್ಪೆಂಟರ್(Carpenter) | 100 |
| ಎಲೆಕ್ಟ್ರೀಷಿಯನ್(Electrician) | 100 |
| ವೈರ್‌ಮನ್(Wireman) | 49 |
| ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್(Electronics Mechanic) | 29 |
| ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ – ಟಿಎಂಒ(Electronics Mechanic – TMO) | 18 |
| ಮೆಕ್ಯಾನಿಕ್-ಡೀಸೆಲ್-ಟಿಎಂಒ(Mechanic – Diesel – TMO) | 18 |
| ಡ್ರಾಫ್ಟ್ಸ್‌ಮನ್-ಸಿವಿಲ್(D/Man – Civil) | 20 |
| ಸಾರಂಗ್(Sarang) | 22 |
| ಗ್ರೈಂಡರ್(Grinder) | 36 |
| ಡ್ರಿಲ್ಲರ್(Driller) | 36 |
| ಪೇಂಟರ್(Painter) | 43 |
| ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್(COPA) | 22 |
| ಶೀಟ್ ಮೆಟಲ್ ವರ್ಕರ್(Sheet Metal Worker) | 20 |
| ಮಷಿನಿಸ್ಟ್(Machinist) | 24 |
| ಮೆಕ್ಯಾನಿಕ್ – ಮೋಟಾರ್ ವೆಹಿಕಲ್(Mechanic – MV) | 10 |
| ರೆಫ್ರಿಜರೇಷನ್ ಮತ್ತು ಎ.ಸಿ. ಮೆಕ್ಯಾನಿಕ್(Refrigeration & A.C. Mech) | 21 |
| ಲ್ಯಾಬೊರೇಟರಿ ಟೆಕ್ನಿಷಿಯನ್ – ಪೆಥಾಲಜಿ(Laboratory Technician – Pathology) | 8 |
| ಟರ್ನರ್(Turner) | 6 |
| ಡ್ರಾಫ್ಟ್ಸ್‌ಮನ್ – ಮೆಕ್ಯಾನಿಕ್(D/Man – Mechanic) | 2 |
| ಸೆಕ್ರೆಟೇರಿಯಲ್ ಅಸಿಸ್ಟೆಂಟ್ – ಸ್ಟೆನೋಗ್ರಫಿ(Secretarial Assistant – Stenography) | 10 |
| ಒಟ್ಟು ಹುದ್ದೆಗಳು(Grand Total) | 1599 |
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್(10ನೇ ತರಗತಿ) ಉತ್ತೀರ್ಣರಾಗಿರಬೇಕು. ಇದರೊಂದಿಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ(ITI) ಪ್ರಮಾಣಪತ್ರವನ್ನು ಹೊಂದಿರಬೇಕು.
(ಗಮನಿಸಿ: ಮೆಡಿಕಲ್ ಲ್ಯಾಬೊರೇಟರಿ ಟೆಕ್ನಿಷಿಯನ್ ಹುದ್ದೆಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳೊಂದಿಗೆ 12ನೇ ತರಗತಿ ಪಾಸ್ ಆಗಿರಬೇಕು ಮತ್ತು 10 ಹಾಗೂ 12ನೇ ತರಗತಿ ಎರಡರಲ್ಲೂ ಕನಿಷ್ಠ 50% ಅಂಕಗಳನ್ನು ಹೊಂದಿರಬೇಕು).
ವಯೋಮಿತಿ:
15-09-2026ರಂತೆ;
ಅಭ್ಯರ್ಥಿಗಳ ವಯಸ್ಸು ಕನಿಷ್ಠ 15 ವರ್ಷ ತುಂಬಿರಬೇಕು ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.
- ವಯೋಮಿತಿ ಸಡಿಲಿಕೆ:
- SC/ST ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ಇರುತ್ತದೆ.
- OBC ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇರುತ್ತದೆ.
- ವಿಕಲಚೇತನ (PwBD) ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇರುತ್ತದೆ.
- ಮಾಜಿ ಸೈನಿಕರಿಗೆ(Ex-Servicemen) ರಕ್ಷಣಾ ಪಡೆಯಲ್ಲಿ ಸಲ್ಲಿಸಿದ ಸೇವಾ ಅವಧಿ ಮತ್ತು ಹೆಚ್ಚುವರಿ 3 ವರ್ಷಗಳ ಸಡಿಲಿಕೆ ಇರುತ್ತದೆ (ಗರಿಷ್ಠ 10 ವರ್ಷಗಳವರೆಗೆ).
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಯನ್ನು ಸಂಪೂರ್ಣವಾಗಿ ಮೆರಿಟ್ ಪಟ್ಟಿಯ(Merit List) ಆಧಾರದ ಮೇಲೆ ಮಾಡಲಾಗುತ್ತದೆ.
- ಮೆರಿಟ್ ಪಟ್ಟಿ
- ದಾಖಲಾತಿ ಪರಿಶೀಲನೆ
- ವೈದ್ಯಕೀಯ ತಪಾಸಣೆ
ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳಿಗೆ ಭುವನೇಶ್ವರದಲ್ಲಿರುವ ರೈಲ್ವೆ ನೇಮಕಾತಿ ಸೆಲ್(RRC) ಪ್ರಧಾನ ಕಚೇರಿಯಲ್ಲಿ ದಾಖಲೆ ಪರಿಶೀಲನೆ(Document Verification) ಮತ್ತು ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.
ಸ್ಟೈಪೆಂಡ್/ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ರೈಲ್ವೆ ಮಂಡಳಿಯು ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳು ಮತ್ತು ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ನಿಗದಿಪಡಿಸಿದ ದರದಲ್ಲಿ ಮಾಸಿಕ ಸ್ಟೈಪೆಂಡ್ (Stipend) ಪಾವತಿಸಲಾಗುವುದು.
ಅರ್ಜಿ ಶುಲ್ಕ:
- ಅರ್ಜಿ ಶುಲ್ಕವು ₹100/- ಆಗಿರುತ್ತದೆ (ಇದು ಮರುಪಾವತಿಸಲಾಗದ ಶುಲ್ಕವಾಗಿದೆ).
- ಎಸ್‌ಸಿ (SC), ಎಸ್‌ಟಿ (ST), ವಿಕಲಚೇತನರು (PwBD) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ.?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ www.rrcbbs.org.in ಗೆ ಭೇಟಿ ನೀಡಬಹುದು.
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್(ಆ.26ರಿಂದ ಲಭ್ಯ) | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | www.rrcbbs.org.in |
| ಹೆಚ್ಚಿನ ಮಾಹಿತಿಗಾಗಿ —>> | ಕರ್ನಾಟಕಹೆಲ್ಪ್.ಇನ್ |