ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶಾಲಾ ಶಿಕ್ಷಣ ಇಲಾಖೆಯ ಅಧೀನದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಗ್ರೂಪ್-ಎ ವೃಂದದ ಒಟ್ಟು 247 ಪ್ರಾಂಶುಪಾಲರ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಉಪನ್ಯಾಸಕರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಉಳಿಕೆ ಮೂಲ ವೃಂದ 216 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ವಲಯ ಸ್ಥಳೀಯ ವೃಂದದ 31 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ನಡೆಯಲಿದೆ. ನಿಗದಿತ ಶೈಕ್ಷಣಿಕ ಅರ್ಹತೆ ಹಾಗೂ ಉಪನ್ಯಾಸಕ ವೃತ್ತಿ ಕನಿಷ್ಠ ಹತ್ತು ವರ್ಷಗಳ ಸೇವೆ ಪೂರೈಸಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ- ಸೆಪ್ಟೆಂಬರ್ 07
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 24(ವಿಸ್ತರಣೆ)
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಅಕ್ಟೋಬರ್ 25(ವಿಸ್ತರಣೆ)
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಶಾಲಾ ಶಿಕ್ಷಣ ಇಲಾಖೆಯ (ಸರ್ಕಾರಿ ಪದವಿ ಪೂರ್ವ ಕಾಲೇಜುಗಳ) ಉಪನ್ಯಾಸಕರ ವೃಂದದಲ್ಲಿ ಕನಿಷ್ಠ ಹತ್ತು (10) ವರ್ಷಗಳ ಸೇವೆಯನ್ನು ಪೂರೈಸಿರಬೇಕು.
ಅಭ್ಯರ್ಥಿಯು ತನ್ನ ಖಾಯಂಪೂರ್ವ ಸೇವಾವಧಿಯನ್ನು (Probationary Period) ತೃಪ್ತಿಕರವಾಗಿ ಪೂರೈಸಿರಬೇಕು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗದಿತ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ಈ ನೇಮಕಾತಿಗೆ ಯಾವುದೇ ವಯೋಮಿತಿಯ ಮಿತಿ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಮೂಲ ದಾಖಲಾತಿಗಳ ಪರಿಶೀಲನೆಯನ್ನು ಒಳಗೊಂಡಿರುತ್ತದೆ:
- ಸ್ಪರ್ಧಾತ್ಮಕ ಪರೀಕ್ಷೆ
- ದಾಖಲಾತಿ ಪರಿಶೀಲನೆ
- ಅಂತಿಮ ಆಯ್ಕೆ
ಸಂಬಳ:
ವೇತನ ಶ್ರೇಣಿ ಮಾಸಿಕವಾಗಿ ರೂ.90,200 ರಿಂದ 1,59,200/- (2024ರ ಪರಿಷ್ಕೃತ ರಾಜ್ಯ ವೇತನ ಶ್ರೇಣಿಯ ಅನ್ವಯ).
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಮತ್ತು ಇತರ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ.1,500/-
ಪ.ಜಾತಿ(ಎಸ್‌ಸಿ)/ಪ.ಪಂಗಡ(ಎಸ್‌ಟಿ)/ ಪ್ರವರ್ಗ-1/ ಮಾಜಿ ಸೈನಿಕ/ ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ.1,000/-
ವಿಶೇಷ ಚೇತನ ಅಭ್ಯರ್ಥಿಗಳಿಗೆ- ರೂ.500/-
ಅರ್ಜಿ ಸಲ್ಲಿಕೆಯ ವಿಧಾನ:
ಹಂತ-1 ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnew.aspxಕ್ಕೆ ಭೇಟಿ.
ಹಂತ-2 ನಂತರ ಮೆನುನಲ್ಲಿ “ನೇಮಕಾತಿ” ವಿಭಾಗಡಿ “ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) 2026″ ಉಪವಿಭಾಗಡಿ ನೀಡಲಾದ (ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ವೃಂದ [ಕೆಕೆ/ಆರ್‌ಪಿಸಿ] ಮೇಲೆ ಕ್ಲಿಕ್ಕಿಸಿ)
ಹಂತ-3 ತದನಂತರ “ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) 2026 ಆನ್‌ಲೈನ್ ಅರ್ಜಿ ಲಿಂಕ್) ಶೀರ್ಷಿಕೆ ಮೇಲೆ ಕ್ಲಿಕ್ಕಿಸಿ.
ಹಂತ-4 ಮುಂದೆ ಹೊಸಪುಟ ತೆರೆಯುತ್ತದೆ. ಅಲ್ಲಿ ಹೊಸಬಳಕೆದಾರರಾಗಿ ನೋಂದಣಿಯಾಗಿ.
ಹಂತ-5 ಅರ್ಜಿ ನಮೂನೆಯನ್ನು ಹಂತ-ಹಂತವಾಗಿ ತುಂಬಿ ಹಾಗೂ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಮುಖ್ಯ ಲಿಂಕ್‌ಗಳು
| ಅರ್ಜಿ ಅವಧಿ ವಿಸ್ತರಣೆ ಪ್ರಕಟಣೆ(03/10/2026) | ಆರ್‌ಪಿಸಿ | ಹೆಚ್‌ಕೆ |
| ಅಧಿಕೃತ ಅಧಿಸೂಚನೆ (ಕೆಕೆ) ಪಿಡಿಎಫ್ | ಡೌನ್ಲೋಡ್ ಮಾಡಿ |
| ಅಧಿಕೃತ ಅಧಿಸೂಚನೆ (ಆರ್‌ಪಿಸಿ) ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್‌ಲೈನ್ ಅರ್ಜಿ ನಮೂನೆ ಲಿಂಕ್ | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | kea.kar.nic.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕ ಹೆಲ್ಪ್.ಇನ್ |
I will experience person
Ambedkar padavi poorva clg
Chandan school society lxr
Swami Vivekanand school society glb