ನವದೆಹಲಿ: ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಜಾರಿ ನಿರ್ದೇಶನಾಲಯವು(ಇಡಿ) ಸಹಾಯಕ ನಿರ್ದೇಶಕ ಮತ್ತು ಉಪ ನಿರ್ದೇಶಕ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು, ಮಂಗಳೂರಿನ ಕಚೇರಿ ಸೇರಿದಂತೆ ದೇಶದ ನಾನಾ ಕಚೇರಿಯಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ 114 ಹುದ್ದೆಗಳು ಹಾಗೂ ಉಪ ನಿರ್ದೇಶಕ 63 ಹುದ್ದೆಗಳಿಗೆ ಡೆಪ್ಯುಟೇಶನ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಕೇಂದ್ರ/ರಾಜ್ಯ ಸರ್ಕಾರಗಳು, ರಾಜ್ಯ ಪೊಲೀಸ್ ಸಂಸ್ಥೆಗಳು, ಸಿಬಿಐ, ಆರ್ಬಿಐ ಅಥವಾ ಸಾರ್ವಜನಿಕ ವಲಯದ ಬ್ಯಾಂಕ್ಗಳ ಅಧಿಕಾರಿಗಳು ಅರ್ಜಿ ಸಲ್ಲಿಕೆಗೆ ಅರ್ಹತೆ ಹೊಂದಿರುತ್ತಾರೆ. ಇಡಿ ಅಧಿಕೃತ ವೆಬ್ಸೈಟ್ https://www.enforcementdirectorate.gov.inದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಡೌನ್ಲೋಡ್ ಮಾಡಿ ಮತ್ತು ಭರ್ತಿ ಮಾಡಿ, ನಿಗದಿತ ದಾಖಲೆಗಳೊಂದಿಗೆ ‘ಜಂಟಿ ನಿರ್ದೇಶಕರು (ಸಂಸ್ಥೆ), ಜಾರಿ ನಿರ್ದೇಶನಾಲಯ, ಬ್ಲಾಕ್ – ಎ, ಪ್ರವರ್ತನ್ ಭವನ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಸ್ತೆ, ನವದೆಹಲಿ-110011’ ವಿಳಾಸಕ್ಕೆ ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಆಗಸ್ಟ್ 2026 ರಿಂದ ಜುಲೈ 2027ರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಹೊರಡಿಸಿದ ದಿನಾಂಕ- ಆಗಸ್ಟ್ 31, 2026
- ಅರ್ಜಿ ಸಲ್ಲಿಕೆಯ ಅವಧಿ- ಈ ಸುತ್ತೋಲೆಯು ಆಗಸ್ಟ್ 2026 ರಿಂದ ಜುಲೈ 2027 ರವರೆಗೆ ಮಾನ್ಯವಾಗಿರುತ್ತದೆ. ಈ ಅವಧಿಯಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಪರಿಗಣಿಸಲಾಗುತ್ತದೆ.
ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
ಸಹಾಯಕ ನಿರ್ದೇಶಕ ಹುದ್ದೆಗೆ; ಕೇಂದ್ರ/ರಾಜ್ಯ ಸರ್ಕಾರಗಳು, ರಾಜ್ಯ ಪೊಲೀಸ್ ಸಂಸ್ಥೆಗಳು, ಕೇಂದ್ರಾಡಳಿತ ಪ್ರದೇಶಗಳು/ಅವುಗಳ ಪೊಲೀಸ್ ಸಂಸ್ಥೆಗಳು, ಸಿಬಿಐ (CBI), ಆರ್ಬಿಐ (RBI) ಅಥವಾ ಸಾರ್ವಜನಿಕ ವಲಯದ ಬ್ಯಾಂಕ್ಗಳ ಅಧಿಕಾರಿಗಳು ಅರ್ಹರು.
ಪೋಷಕ ಕೇಡರ್/ಇಲಾಖೆಯಲ್ಲಿ ನಿಯಮಿತ ಆಧಾರದ ಮೇಲೆ ಸದೃಶ (analogous) ಹುದ್ದೆಯನ್ನು ಹೊಂದಿರಬೇಕು ಅಥವಾ ಪೇ ಮ್ಯಾಟ್ರಿಕ್ಸ್ನ ಲೆವೆಲ್-8 ರಲ್ಲಿ 4 ವರ್ಷಗಳ ನಿಯಮಿತ ಸೇವೆಯನ್ನು ಪೂರೈಸಿರಬೇಕು.
ಹಣಕಾಸು ಅಥವಾ ಕ್ರಿಮಿನಲ್ ಕಾನೂನುಗಳಿಗೆ ಸಂಬಂಧಿಸಿದ ಇಂಟೆಲಿಜೆನ್ಸ್, ತನಿಖೆ, ಕಾನೂನು ಕೆಲಸ, ತೀರ್ಪು (adjudication) ಅಥವಾ ಪ್ರಾಸಿಕ್ಯೂಷನ್ ಕ್ಷೇತ್ರದಲ್ಲಿ; ಅಥವಾ ಬ್ಯಾಂಕಿಂಗ್, ಖಾತೆಗಳು ಅಥವಾ ಆಡಿಟ್ ತನಿಖಾ ಕ್ಷೇತ್ರದಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು.
ಉಪ ನಿರ್ದೇಶಕ ಹುದ್ದೆಗೆ; ಅಖಿಲ ಭಾರತ ಸೇವೆಗಳು, ಕೇಂದ್ರ ಸೇವೆಗಳು, ಕೇಂದ್ರ/ರಾಜ್ಯ ಸರ್ಕಾರಗಳು, ರಾಜ್ಯ ಪೊಲೀಸ್ ಸಂಸ್ಥೆಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತ/ಅವುಗಳ ಪೊಲೀಸ್ ಸಂಸ್ಥೆಗಳು, ಸಿಬಿಐ, ಆರ್ಬಿಐ ಅಥವಾ ಸಾರ್ವಜನಿಕ ವಲಯದ ಬ್ಯಾಂಕ್ಗಳ ಅಧಿಕಾರಿಗಳು ಅರ್ಹರು.
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ(Any Bachelor’s Degree) ಹೊಂದಿರಬೇಕು.
ಪೋಷಕ ಕೇಡರ್ನಲ್ಲಿ ನಿಯಮಿತ ಆಧಾರದ ಮೇಲೆ ಸದೃಶ ಹುದ್ದೆಯನ್ನು ಹೊಂದಿರಬೇಕು ಅಥವಾ ಲೆವೆಲ್-10 ರಲ್ಲಿ 5 ವರ್ಷಗಳ ನಿಯಮಿತ ಸೇವೆಯನ್ನು ಪೂರೈಸಿರಬೇಕು (ಆರ್ಬಿಐ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳ ಅಧಿಕಾರಿಗಳಿಗೆ ನಿರ್ದಿಷ್ಟ ಗ್ರೇಡ್/ಸ್ಕೇಲ್ ನಿಯಮಗಳು ಅನ್ವಯಿಸುತ್ತವೆ).
ಇಂಟೆಲಿಜೆನ್ಸ್, ತನಿಖೆ, ಕಾನೂನು ಕೆಲಸ, ತೀರ್ಪು ಅಥವಾ ಪ್ರಾಸಿಕ್ಯೂಷನ್ ಕ್ಷೇತ್ರದಲ್ಲಿ (ಹಣಕಾಸು, ಬ್ಯಾಂಕಿಂಗ್, ಖಾತೆಗಳು ಅಥವಾ ಆಡಿಟ್ಗೆ ಸಂಬಂಧಿಸಿದಂತೆ) 5 ವರ್ಷಗಳ ಅನುಭವ ಹೊಂದಿರಬೇಕು.
ವಯೋಮಿತಿ:
ಡೆಪ್ಯುಟೇಶನ್ ಆಧಾರದ ಮೇಲಿನ ನೇಮಕಾತಿಗಾಗಿ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯು 56 ವರ್ಷಗಳನ್ನು ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:
- ಅರ್ಹ ಮತ್ತು ಆಸಕ್ತ ಅಧಿಕಾರಿಗಳು ತಮ್ಮ ಕೇಡರ್ ನಿಯಂತ್ರಣ ಪ್ರಾಧಿಕಾರದ (Cadre Controlling Authority) ಮೂಲಕ ಸೂಕ್ತ ಮಾರ್ಗದಲ್ಲಿ ಅರ್ಜಿ ಸಲ್ಲಿಸಬೇಕು.
- ಕೇಡರ್ ನಿಯಂತ್ರಣ ಪ್ರಾಧಿಕಾರವು ಅಭ್ಯರ್ಥಿಯ ವಿವರಗಳನ್ನು ಪರಿಶೀಲಿಸಿ, ಯಾವುದೇ ಶಿಸ್ತು ಕ್ರಮ ಬಾಕಿ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು, ಅಗತ್ಯ ದಾಖಲೆಗಳೊಂದಿಗೆ (ಬಯೋಡೇಟಾ, ಕಳೆದ 5 ವರ್ಷಗಳ ಸಿ.ಆರ್. ಡೋಸಿಯರ್/ಎಪಿಎಆರ್ ಗ್ರೇಡಿಂಗ್ಸ್, ವಿಜಿಲೆನ್ಸ್ ಕ್ಲಿಯರೆನ್ಸ್, ಇಂಟೆಗ್ರಿಟಿ ಸರ್ಟಿಫಿಕೇಟ್, ಕೇಡರ್ ಕ್ಲಿಯರೆನ್ಸ್ ಮತ್ತು ಕಳೆದ 10 ವರ್ಷಗಳ ದಂಡನೆಗಳ ವಿವರಣೆ) ಅರ್ಜಿಯನ್ನು ಜಂಟಿ ನಿರ್ದೇಶಕರು (Estt.), ಜಾರಿ ನಿರ್ದೇಶನಾಲಯ, ನವದೆಹಲಿ ಇವರಿಗೆ ರವಾನಿಸಬೇಕು.
ಸಂಬಳ:
- ಸಹಾಯಕ ನಿರ್ದೇಶಕ ಹುದ್ದೆಗೆ ರೂ.56,100 ರಿಂದ 1,77,500/- (ಪೇ ಮ್ಯಾಟ್ರಿಕ್ಸ್ನ ಲೆವೆಲ್ 10)
- ಉಪ ನಿರ್ದೇಶಕ ಹುದ್ದೆಗೆ ರೂ.67,700 ರಿಂದ 2,08,700/-(ಪೇ ಮ್ಯಾಟ್ರಿಕ್ಸ್ನ ಲೆವೆಲ್ 11).
ಹೆಚ್ಚುವರಿ ಭತ್ಯೆ: ಜಾರಿ ನಿರ್ದೇಶನಾಲಯದಲ್ಲಿ ಕಾರ್ಯನಿರ್ವಹಿಸುವ ಈ ಅಧಿಕಾರಿಗಳು ಪ್ರಸ್ತುತ ಮೂಲ ವೇತನದ ಶೇ.20 ರಷ್ಟು ವಿಶೇಷ ಪ್ರೋತ್ಸಾಹಕ ಭತ್ಯೆಗೆ (Special Incentive Allowance) ಅರ್ಹರಾಗಿರುತ್ತಾರೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪ್ರಮುಖ ಲಿಂಕ್ಗಳು:
| ಸಹಾಯಕ ನಿರ್ದೇಶಕ ಹುದ್ದೆಯ ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಉಪ ನಿರ್ದೇಶಕ ಹುದ್ದೆಯ ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಅಧಿಕೃತ ಜಾಲತಾಣ | https://www.enforcementdirectorate.gov.in/ |
| ಮತ್ತಷ್ಟು ಸುದ್ದಿಗಳಿಗಾಗಿ->> | ಕರ್ನಾಟಕಹೆಲ್ಪ್.ಇನ್ |