ಕೊಡಗು/ಮಡಿಕೇರಿ: ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ 39 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಲಯವು ಅಧಿಸೂಚನೆ ಹೊರಡಿಸಿದೆ.
ಅರ್ಹರು ಅರ್ಜಿ ಸಲ್ಲಿಸಲು ಅ.03 ಕೊನೆಯದಿನವಾಗಿದೆ. ಜವಾನ(ಪ್ಯೂನ್) 23 ಸ್ಥಾನ, ಬೆರಳಚ್ಚುಗಾರ 08 ಸ್ಥಾನ, ಆದೇಶಿಕ ಜಾರಿಕಾರ 06 ಸ್ಥಾನ ಹಾಗೂ 02 ಚಾಲಕ ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣ https://kodagu.dcourts.gov.in/online-recruitment/ದಲ್ಲಿ ಲಭ್ಯವಿರುವ ಲಿಂಕ್‌ಗಳ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ- ಸೆಪ್ಟೆಂಬರ್ 03
- ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ- ಅಕ್ಟೋಬರ್ 03(ರಾತ್ರಿ 11.59 ರವರೆಗೆ)
ಹುದ್ದೆಗಳ ಸಂಖ್ಯೆ ಮತ್ತು ವಿವರ:
- ಜವಾನ/ಸೇವಕ (Peon) 23 ಹುದ್ದೆಗಳು
- ಬೆರಳಚ್ಚುಗಾರ (Typist) 08 ಹುದ್ದೆಗಳು (07 ಹೊಸ ಹುದ್ದೆಗಳು + 01 ಬ್ಯಾಕ್‌ಲಾಗ್ ಹುದ್ದೆ)
- ಆದೇಶಿಕ ಜಾರಿಕಾರ (Process Server) 06 ಹುದ್ದೆಗಳು
- ಚಾಲಕರು (Driver) 02 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
⮞ ಜವಾನ, ಆದೇಶಿಕ ಜಾರಿಕಾರ ಮತ್ತು ಚಾಲಕ ಹುದ್ದೆಗಳಿಗೆ; ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಜವಾನ ಹುದ್ದೆಗೆ ಕನ್ನಡ ಓದುವ ಮತ್ತು ಬರೆಯುವ ಸಾಮರ್ಥ್ಯ ಹೊಂದಿರಬೇಕು.
ಆದೇಶಿಕ ಜಾರಿಕಾರ ಹುದ್ದೆಗೆ ಭಾರಿ/ಹಗುರ ವಾಹನ ಚಾಲನಾ ಪರವಾನಗಿ(HMV/LMV) ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಚಾಲಕ ಹುದ್ದೆಗೆ ಚಾಲ್ತಿಯಲ್ಲಿರುವ ಭಾರಿ ವಾಹನ ಚಾಲನಾ ಪರವಾನಗಿ (Heavy Vehicle Driving License) ಹೊಂದಿರಬೇಕು.
⮞ ಬೆರಳಚ್ಚುಗಾರ ಹುದ್ದೆಗೆ; ದ್ವಿತೀಯ ಪಿಯುಸಿ (2nd PUC) ಅಥವಾ ಕಮರ್ಷಿಯಲ್ ಪ್ರಾಕ್ಟಿಸ್‌ನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಗಳ ಪ್ರೌಢದರ್ಜೆ ಬೆರಳಚ್ಚು (Senior Grade Typewriting) ಪರೀಕ್ಷೆ ಅಥವಾ ಸೆಕ್ರೆಟರಿಯಲ್ ಪ್ರಾಕ್ಟಿಸ್ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು.
ಗಣಕಯಂತ್ರದ (ಕಂಪ್ಯೂಟರ್) ಜ್ಞಾನ ಹೊಂದಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು.
ಸರ್ಕಾರದ ಆದೇಶದನ್ವಯ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದ್ದು, ಪರಿಷ್ಕೃತ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳು
- ಪ್ರವರ್ಗ-2(ಎ), 2(ಬಿ), 3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷಗಳು
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷಗಳು
ನಿಯಮಾನುಸಾರ ಮಾಜಿ ಸೈನಿಕರು, ಅಂಗವಿಕಲರು, ವಿಧವೆಯರು ಮುಂತಾದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಮತ್ತಷ್ಟು ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಜವಾನ, ಆದೇಶಿಕ ಜಾರಿಕಾರ ಹುದ್ದೆಗಳಿಗೆ ಮೆರಿಟ್ ಲಿಸ್ಟ್ ಮತ್ತು ಸಂದರ್ಶನದ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯಲಿದೆ.
ಬೆರಳಚ್ಚುಗಾರ ಹುದ್ದೆಗೆ ಮೆರಿಟ್ ಲಿಸ್ಟ್, ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವ ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಚಾಲಕ ಹುದ್ದೆಗೆ ಚಾಲನಾ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ.
ಸಂಬಳ:
➢ ಬೆರಳಚ್ಚುಗಾರ ಮತ್ತು ಚಾಲಕ ಹುದ್ದೆಗಳಿಗೆ: ರೂ. 34,100 – 67,600 (ಮತ್ತು ಲಭ್ಯವಿರುವ ಇತರೆ ಭತ್ಯೆಗಳು)
➢ ಆದೇಶಿಕ ಜಾರಿಕಾರ ಹುದ್ದೆಗೆ: ರೂ. 31,775 – 61,300 (ಮತ್ತು ಲಭ್ಯವಿರುವ ಇತರೆ ಭತ್ಯೆಗಳು)
➢ ಜವಾನ ಹುದ್ದೆಗೆ: ರೂ. 27,000 – 46,675 (ಮತ್ತು ಲಭ್ಯವಿರುವ ಇತರೆ ಭತ್ಯೆಗಳು)
ಅರ್ಜಿ ಶುಲ್ಕ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.300/-
- ಪ್ರವರ್ಗ-2(ಎ), 2(ಬಿ), 3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ ರೂ.150/-
- ಪರಿಶಿಷ್ಟ ಜಾತಿ(SC), ಪರಿಶಿಷ್ಟ ಪಂಗಡ(ST), ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ (ಯಾವುದೇ ಶುಲ್ಕ ಇರುವುದಿಲ್ಲ).
ಪಾವತಿ ವಿಧಾನ: ಶುಲ್ಕವನ್ನು ಆನ್‌ಲೈನ್ ಮೂಲಕ (Net Banking/Credit Card/Debit Card/UPI/QR Code) ಮಾತ್ರ ಪಾವತಿಸಬೇಕು. ಡಿಡಿ, ಚಲನ್ ಅಥವಾ ನಗದು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:
ಹಂತ-1 ಕೊಡಗು ಜಿಲ್ಲಾ ನ್ಯಾಯಾಲಯ ಅಧಿಕೃತ ಜಾಲತಾಣ https://kodagu.dcourts.gov.in/ಕ್ಕೆ ಭೇಟಿ.
ಹಂತ-2 ಮುಖಪುಟದ ಮೆನುವಿಭಾಗದಲ್ಲಿ “Notice(ಪ್ರಕಟಣೆ)” ವಿಭಾಗದಡಿ “Recruitment(ನೇಮಕಾತಿ)” ಎಂಬ ಶೀರ್ಷಿಕೆಯ ಉಪವಿಭಾಗಕ್ಕೆ ಭೇಟಿ ನೀಡಿ.
ಹಂತ-3 ನಂತರ ಅಲ್ಲಿ ಹುದ್ದೆಗಳವಾರು ನೀಡಲಾದ ಆನ್‌ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ಕಿಸುವ ಮೂಲಕ ಅರ್ಜಿ ನಮೂನೆ ತೆರೆಯುತ್ತದೆ. ಕೇಳಲಾದ ಸಂಪೂರ್ಣ ವಿವರಗಳನ್ನು ತುಂಬಿ, ದಾಖಲೆಗಳನ್ನು ಅಪ್ಲೋಡ್ ಮಾಡಲು ಕೇಳಿದ್ದರೆ ಅಪ್ಲೋಡ್ ಮಾಡಿ.
ಹಂತ-4 ತದನಂತರ ತಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು:
| ಪ್ಯೂನ್ ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆದೇಶ ಜಾರಿಕಾರ ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಬೆರಳಚ್ಚುಗಾರ ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಚಾಲಕ ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಪ್ಯೂನ್ ಹುದ್ದೆ- ಆನ್‌ಲೈನ್ ಅರ್ಜಿ ಲಿಂಕ್ | ಅರ್ಜಿ ಸಲ್ಲಿಸಿ |
| ಆದೇಶ ಜಾರಿಕಾರ- ಆನ್‌ಲೈನ್ ಅರ್ಜಿ ಲಿಂಕ್ | ಅರ್ಜಿ ಸಲ್ಲಿಸಿ |
| ಬೆರಳಚ್ಚುಗಾರ- ಆನ್‌ಲೈನ್ ಅರ್ಜಿ ಲಿಂಕ್ | ಅರ್ಜಿ ಸಲ್ಲಿಸಿ |
| ಚಾಲಕ- ಆನ್‌ಲೈನ್ ಅರ್ಜಿ ಲಿಂಕ್ | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | kodagu.dcourts.gov.in |
| ಮತ್ತಷ್ಟು ಸುದ್ದಿಗಳಿಗಾಗಿ-> | ಕರ್ನಾಟಕಹೆಲ್ಪ್.ಇನ್ |
Ferry my