ಕೇಂದ್ರ ಲೋಕ ಸೇವಾ ಆಯೋಗವು(ಯುಪಿಎಸ್ಸಿ) 2027ನೇ ಸಾಲಿನ ಜಂಟಿ ಭೂ-ವಿಜ್ಞಾನಿ ಪರೀಕ್ಷೆ(ಸಿಜಿಎಸ್)ಗೆ ಅಧಿಸೂಚನೆ ಪ್ರಕಟಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸದರಿ ಪರೀಕ್ಷೆಯ ಮೂಲಕ ಕೇಂದ್ರ ಅಂತರ್ಜಲ ಮಂಡಳಿಯ 16 ಹುದ್ದೆಗಳು ಮತ್ತು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಇಲಾಖೆಯ 141 ಹುದ್ದೆಗಳು ಸೇರಿದಂತೆ 157 ಹುದ್ದೆಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸೆ.22ರೊಳಗೆ ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್ https://upsconline.nic.in ನಲ್ಲಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅಧಿಸೂಚನೆ ಹೊರಡಿಸಿದ ದಿನಾಂಕ- ಸೆಪ್ಟೆಂಬರ್ 02
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 22 (ಸಂಜೆ 18:00 ಗಂಟೆಯವರೆಗೆ)
- ಪೂರ್ವಭಾವಿ ಪರೀಕ್ಷೆ ದಿನಾಂಕ- ಜನವರಿ 10, 2027
- ಮುಖ್ಯ ಪರೀಕ್ಷೆ ದಿನಾಂಕ- ಜೂನ್ 19 ಮತ್ತು 20, 2027
ಹುದ್ದೆಗಳ ಸಂಖ್ಯೆಗಳು(ತಾತ್ಕಾಲಿಕ) ವಿವರಗಳು:
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಇಲಾಖೆ(GSI)ಯ ಹುದ್ದೆಗಳ ವಿವರಗಳು:
ಜಿಯಾಲಜಿಸ್ಟ್ ಗ್ರೂಪ್ ‘ಎ’ 29 ಹುದ್ದೆಗಳು
ಜಿಯೋಫಿಸಿಸ್ಟ್ ಗ್ರೂಪ್ ‘ಎ’ 31 ಹುದ್ದೆಗಳು
ಕೆಮಿಸ್ಟ್ ಗ್ರೂಪ್ ‘ಎ’ 07 ಹುದ್ದೆಗಳು
ಅಸಿಸ್ಟೆಂಟ್ ಜಿಯಾಲಜಿಸ್ಟ್ ಗ್ರೂಪ್ ‘ಬಿ’ 34 ಹುದ್ದೆಗಳು
ಅಸಿಸ್ಟೆಂಟ್ ಜಿಯೋಫಿಸಿಸ್ಟ್ ಗ್ರೂಪ್ ‘ಬಿ’ 35 ಹುದ್ದೆಗಳು
ಅಸಿಸ್ಟೆಂಟ್ ಕೆಮಿಸ್ಟ್ ಗ್ರೂಪ್ ‘ಬಿ’ 06 ಹುದ್ದೆಗಳು
(ಗಮನಿಸಿ: ಈ ವರ್ಗದಲ್ಲಿ ಒಟ್ಟು 08 ಹುದ್ದೆಗಳನ್ನು ವಿಕಲಚೇತನ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ).
ಕೇಂದ್ರ ಅಂತರ್ಜಲ ಮಂಡಳಿಯ(CGWB) ಹುದ್ದೆಗಳ ವಿವರಗಳು:
ಸೈಂಟಿಸ್ಟ್ ‘ಬಿ’ (ಹೈಡ್ರೋಜಿಯಾಲಜಿ) ಗ್ರೂಪ್ ‘ಎ’ 05 ಹುದ್ದೆಗಳು
ಸೈಂಟಿಸ್ಟ್ ‘ಬಿ’ (ಕೆಮಿಕಲ್) ಗ್ರೂಪ್ ‘ಎ’ 01 ಹುದ್ದೆ
ಸೈಂಟಿಸ್ಟ್ ‘ಬಿ’ (ಜಿಯೋಫಿಸಿಕ್ಸ್) ಗ್ರೂಪ್ ‘ಎ’ 01 ಹುದ್ದೆ
ಅಸಿಸ್ಟೆಂಟ್ ಹೈಡ್ರೋಜಿಯಾಲಜಿಸ್ಟ್ ಗ್ರೂಪ್ ‘ಬಿ’ 07 ಹುದ್ದೆಗಳು
ಅಸಿಸ್ಟೆಂಟ್ ಕೆಮಿಸ್ಟ್ ಗ್ರೂಪ್ ‘ಬಿ’ 01 ಹುದ್ದೆ
ಅಸಿಸ್ಟೆಂಟ್ ಜಿಯೋಫಿಸಿಸ್ಟ್ ಗ್ರೂಪ್ ‘ಬಿ’ 01 ಹುದ್ದೆ
(ಗಮನಿಸಿ: ಈ ವರ್ಗದಲ್ಲಿ ಒಟ್ಟು 02 ಹುದ್ದೆಗಳನ್ನು ವಿಕಲಚೇತನ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ).
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು.
ಜಿಯಾಲಜಿಸ್ಟ್ ಗ್ರೂಪ್ ‘ಎ’ ಹುದ್ದೆಗೆ; ಜಿಯಾಲಜಿಕಲ್ ಸೈನ್ಸ್, ಜಿಯಾಲಜಿ, ಅಪ್ಲೈಡ್ ಜಿಯಾಲಜಿ, ಜಿಯೋ-ಎಕ್ಸ್ಪ್ಲೋರೇಷನ್, ಮಿನರಲ್ ಎಕ್ಸ್ಪ್ಲೋರೇಷನ್, ಇಂಜಿನಿಯರಿಂಗ್ ಜಿಯಾಲಜಿ, ಮೆರೈನ್ ಜಿಯಾಲಜಿ, ಅರ್ಥ್ ಸೈನ್ಸ್ ಅಂಡ್ ರಿಸೋರ್ಸ್ ಮ್ಯಾನೇಜ್ಮೆಂಟ್, ಓಷಿಯಾನೋಗ್ರಫಿ ಮತ್ತು ಕೋಸ್ಟಲ್ ಏರಿಯಾ ಸ್ಟಡೀಸ್, ಪೆಟ್ರೋಲಿಯಂ ಜಿಯೋಸೈನ್ಸ್ ಅಥವಾ ಜಿಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ(Master’s Degree).
ಜಿಯೋಫಿಸಿಸ್ಟ್ ಗ್ರೂಪ್ ‘ಎ’ ಮತ್ತು ಸೈಂಟಿಸ್ಟ್ ‘B’ (ಜಿಯೋಫಿಜಿಕ್ಸ್) ಗ್ರೂಪ್ ‘ಎ’ (ಸಿಜಿಡಬ್ಲ್ಯೂಬಿ) ಹುದ್ದೆಗೆ; ಭೌತಶಾಸ್ತ್ರ(Physics) ಅಥವಾ ಅಪ್ಲೈಡ್ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಅಥವಾ ಜಿಯೋಫಿಸಿಕ್ಸ್ನಲ್ಲಿ ಎಂ.ಎಸ್ಸಿ/ ಅಪ್ಲೈಡ್ ಜಿಯೋಫಿಸಿಕ್ಸ್/ ಮೆರೈನ್ ಜಿಯೋಫಿಸಿಕ್ಸ್/ ಎಕ್ಸ್ಪ್ಲೋರೇಷನ್ ಜಿಯೋಫಿಸಿಕ್ಸ್ನಲ್ಲಿ ಎಂ.ಎಸ್ಸಿ ಅಥವಾ ಅಪ್ಲೈಡ್ ಜಿಯೋಫಿಸಿಕ್ಸ್ನಲ್ಲಿ ಎಂ.ಎಸ್ಸಿ(ಟೆಕ್).
ಕೆಮಿಸ್ಟ್ ಗ್ರೂಪ್ ‘ಎ’ ಮತ್ತು ಸೈಂಟಿಸ್ಟ್ ‘ಬಿ’ (ಕೆಮಿಕಲ್) ಗ್ರೂಪ್ ‘ಎ’ (ಸಿಜಿಡಬ್ಲ್ಯೂಬಿ) ಹುದ್ದೆಗೆ; ರಸಾಯನಶಾಸ್ತ್ರ (Chemistry), ಅಪ್ಲೈಡ್ ರಸಾಯನಶಾಸ್ತ್ರ ಅಥವಾ ಅನಾಲಿಟಿಕಲ್ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ.
ಸೈಂಟಿಸ್ಟ್ ‘B’ (ಹೈಡ್ರೊಜಿಯೊಲಜಿ) ಗ್ರೂಪ್ ‘ಎ’ ಮತ್ತು ಅಸಿಸ್ಟೆಂಟ್ ಹೈಡ್ರೋಜಿಯಾಲಜಿಸ್ಟ್ ಗ್ರೂಪ್ ‘ಬಿ’ (ಸಿಜಿಡಬ್ಲ್ಯೂಬಿ)ಹುದ್ದೆಗೆ; ಜಿಯಾಲಜಿ, ಅಪ್ಲೈಡ್ ಜಿಯಾಲಜಿ, ಮೆರೈನ್ ಜಿಯಾಲಜಿ ಅಥವಾ ಹೈಡ್ರೋಜಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ.
ಅಸಿಸ್ಟೆಂಟ್ ಕೆಮಿಸ್ಟ್ ಗ್ರೂಪ್ ‘ಬಿ’ (ಜಿಎಸ್ಐ & ಸಿಜಿಡಬ್ಲ್ಯೂಬಿ) ಹುದ್ದೆಗೆ; ರಸಾಯನಶಾಸ್ತ್ರ, ಅಪ್ಲೈಡ್ ರಸಾಯನಶಾಸ್ತ್ರ, ಅನಾಲಿಟಿಕಲ್ ರಸಾಯನಶಾಸ್ತ್ರ, ಫಿಸಿಕಲ್ ರಸಾಯನಶಾಸ್ತ್ರ, ಇನ್ಆರ್ಗಾನಿಕ್ ರಸಾಯನಶಾಸ್ತ್ರ, ಆರ್ಗಾನಿಕ್ ರಸಾಯನಶಾಸ್ತ್ರ, ಹೈಡ್ರೋ-ಕೆಮಿಸ್ಟ್ರಿ ಅಥವಾ ಇಂಡಸ್ಟ್ರಿಯಲ್ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಅಥವಾ ಇಂಟಿಗ್ರೇಟೆಡ್ ಎಂ.ಎಸ್ಸಿ.
ಅಸಿಸ್ಟೆಂಟ್ ಜಿಯಾಲಜಿಸ್ಟ್ ಗ್ರೂಪ್ ‘ಬಿ’ ಹುದ್ದೆಗೆ; ಜಿಯಾಲಜಿ, ಅಪ್ಲೈಡ್ ಜಿಯಾಲಜಿ, ಮಿನರಲ್ ಎಕ್ಸ್ಪ್ಲೋರೇಷನ್, ಮೆರೈನ್ ಜಿಯಾಲಜಿ ಅಥವಾ ಅರ್ಥ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಇಂಟಿಗ್ರೇಟೆಡ್ ಸ್ನಾತಕೋತ್ತರ ಪದವಿ.
ಅಸಿಸ್ಟೆಂಟ್ ಜಿಯೋಫಿಸಿಸ್ಟ್ ಗ್ರೂಪ್ ‘ಬಿ’ (ಜಿಎಸ್ಐ & ಸಿಜಿಡಬ್ಲ್ಯೂಬಿ)ಹುದ್ದೆಗೆ; ಜಿಯೋಫಿಸಿಕ್ಸ್, ಎಕ್ಸ್ಪ್ಲೋರೇಷನ್ ಜಿಯೋಫಿಸಿಕ್ಸ್, ಅಪ್ಲೈಡ್ ಜಿಯೋಫಿಸಿಕ್ಸ್, ಜಿಯೋ-ಎಕ್ಸ್ಪ್ಲೋರೇಷನ್, ಮೆರೈನ್ ಜಿಯೋಫಿಸಿಕ್ಸ್, ಭೌತಶಾಸ್ತ್ರ, ಅಪ್ಲೈಡ್ ಭೌತಶಾಸ್ತ್ರ ಅಥವಾ ಅಪ್ಲೈಡ್ ಜಿಯಾಲಜಿಯಲ್ಲಿ ಎಂ.ಎಸ್ಸಿ ಅಥವಾ ಎಂ.ಎಸ್ಸಿ (ಟೆಕ್) ಅಥವಾ ಇಂಟಿಗ್ರೇಟೆಡ್ ಎಂ.ಎಸ್ಸಿ.
ವಯೋಮಿತಿ:
ಅಭ್ಯರ್ಥಿಯು 1 ಜನವರಿ 2027 ಕ್ಕೆ ಕನಿಷ್ಠ 21 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 32 ವರ್ಷ ಮೀರಬಾರದು (ಅಂದರೆ ಅಭ್ಯರ್ಥಿಯು 2 ಜನವರಿ 1995 ಕ್ಕಿಂತ ಮುಂಚಿತವಾಗಿ ಮತ್ತು 1 ಜನವರಿ 2006 ಕ್ಕಿಂತ ತಡವಾಗಿ ಜನಿಸಿರಬಾರದು).
ವಯೋಮಿತಿ ಸಡಿಲಿಕೆ:
- ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST) ಅಭ್ಯರ್ಥಿಗಳಿಗೆ ಗರಿಷ್ಠ 5 ವರ್ಷಗಳು.
- ಇತರ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ ಗರಿಷ್ಠ 3 ವರ್ಷಗಳು.
- ಸರ್ಕಾರಿ ನೌಕರರಿಗೆ (ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿದ ಇಲಾಖೆಗಳ ನೌಕರರಿಗೆ) ಗರಿಷ್ಠ 5 ವರ್ಷಗಳು.
- ಅಂಗವಿಕಲ(PwBD) ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯು ಮೂರು ಸತತ ಹಂತಗಳನ್ನು ಒಳಗೊಂಡಿರುತ್ತದೆ:
- ಹಂತ-1: ಪೂರ್ವಭಾವಿ ಪರೀಕ್ಷೆ: ಇದು ಒಟ್ಟು 400 ಅಂಕಗಳ ವಸ್ತುನಿಷ್ಠ (Objective Type) ಪರೀಕ್ಷೆಯಾಗಿದ್ದು, ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ (1/3 ರಷ್ಟು ಅಂಕ ಕಡಿತ) ಇರುತ್ತದೆ.
- ಹಂತ-2: ಮುಖ್ಯ ಪರೀಕ್ಷೆ : ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಒಟ್ಟು 600 ಅಂಕಗಳ ವಿವರಣಾತ್ಮಕ (Descriptive Type) ಪರೀಕ್ಷೆ ನಡೆಸಲಾಗುತ್ತದೆ. ಇದು ಮೂರು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.
- ಹಂತ-3: ವ್ಯಕ್ತಿತ್ವ ಪರೀಕ್ಷೆ/ಸಂದರ್ಶನ: ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 200 ಅಂಕಗಳ ಸಂದರ್ಶನ ನಡೆಸಲಾಗುತ್ತದೆ.
ಸಂಬಳ:
ಕೇಂದ್ರ ಲೋಕ ಸೇವಾ ಆಯೋಗದ ನೇಮಕಾತಿ ನಿಯಮಗಳಿಗೆ ಅನುಗುಣವಾಗಿ ಆಯಾ ಹುದ್ದೆಗಳಿಗೆ ವೇತನ ನೀಡಲಾಗುತ್ತದೆ. ( ಅಧಿಕೃತ ಅಧಿಸೂಚನೆಯಲ್ಲಿ ಈ ಕುರಿತು ಮಾಹಿತಿ ಒದಗಿಸಿಲ್ಲ)
ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು OBC/EWS ಅಭ್ಯರ್ಥಿಗಳಿಗೆ ರೂ.200/-
- ಎಲ್ಲಾ ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಪಾವತಿ ವಿಧಾನ: ನೆಟ್ ಬ್ಯಾಂಕಿಂಗ್, ವೀಸಾ/ಮಾಸ್ಟರ್/ರೂಪೇ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಯುಪಿಐ (UPI) ಮೂಲಕ ಶುಲ್ಕ ಪಾವತಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ.?
ಹಂತ-1 ಯುಪಿಎಸ್ಸಿ ನೇಮಕಾತಿ ಅಧಿಕೃತ ಜಾಲತಾಣ ಕ್ಕೆ ಭೇಟಿ ನೀಡಿ.
ಹಂತ-2 ಹೊಸ ಬಳಕೆದಾರರಾಗಿ ನೋಂದಣಿಯಾಗಿ.(ಈಗಾಗಲೇ ಖಾತೆ ಇದ್ದರೆ ನೇರವಾಗಿ ಲಾಗಿನ್ ಮಾಡಿಕೊಳ್ಳಿ)
ಹಂತ-3 ನಂತರ “ಯೂನಿವರ್ಸಲ್ ರಿಜಿಸ್ಟ್ರೇಷನ್” ಮತ್ತು “ಕಾಮನ್ ಅಪ್ಲಿಕೇಶನ್ ಫಾರಂ” ಪೂರ್ಣಗೊಳಿಸಿ, “ಪರೀಕ್ಷೆಗಳು(Examinations)” ವಿಭಾಗದ ಮೇಲೆ ಕ್ಲಿಕ್ಕಿಸಿ.
ಹಂತ-4 ತದನಂತರ ಅಲ್ಲಿ “Combined Geo-Scientist (Preliminary) Examination” ಮೇಲೆ ಕ್ಲಿಕ್ಕಿಸಿ ಅರ್ಜಿ ನಮೂನೆ ತುಂಬಿ ಹಾಗೂ ತಮಗೆ ಅನ್ವಯವಾಗುವ ಅರ್ಜಿ ಶುಲ್ಕಪಾವತಿಸಿ. ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್ಲೈನ್ ಅರ್ಜಿ ನಮೂನೆ ಲಿಂಕ್ | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | www.upsc.gov.in |
| ಮತ್ತಷ್ಟು ಸುದ್ದಿಗಳಿಗಾಗಿ-> | ಕರ್ನಾಟಕ ಹೆಲ್ಪ್.ಇನ್ |