ಐಬಿಪಿಎಸ್ ಆರ್‌ಆರ್‌ಬಿ ಗ್ರೂಪ್-ಎ, ಬಿ ಹುದ್ದೆಗಳ ನೇಮಕಾತಿ; ಅರ್ಜಿ ಅವಧಿ ವಿಸ್ತರಣೆ

ಒಟ್ಟು 13768 ಹುದ್ದೆಗಳು!

Published on:

Updated On:

ಮುಂಬೈ: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐಬಿಪಿಎಸ್)ಯು ದೇಶದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (ಆರ್‌ಆರ್‌ಬಿಸ್) ಖಾಲಿ ಇರುವ ಗ್ರೂಪ್ “ಎ” ಅಧಿಕಾರಿಗಳು (ಸ್ಕೇಲ್-I, II, III) ಮತ್ತು ಗ್ರೂಪ್ “ಬಿ” ಕಚೇರಿ ಸಹಾಯಕ(ಮಲ್ಟಿಪರ್ಪಸ್) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆದಿನಾಂಕವನ್ನು ಸೆ.27ರವರೆಗೆ ವಿಸ್ತರಿಸಿದೆ.

ಕಚೇರಿ ಸಹಾಯಕರು 8,612 ಹುದ್ದೆ, ಆಫೀಸರ್ ಸ್ಕೇಲ್-I 3,583 ಹುದ್ದೆ, ಆಫೀಸರ್ ಸ್ಕೇಲ್-II 874 ಹುದ್ದೆ, ಆಫೀಸರ್ ಸ್ಕೇಲ್-II 466 ಹುದ್ದೆ ಹಾಗೂ ಆಫೀಸರ್ ಸ್ಕೇಲ್-III 233 ಹುದ್ದೆ ಸೇರಿದಂತೆ ಒಟ್ಟು 13768 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಸಂಬಂಧಿತ ವಿಷಯದಲ್ಲಿ ಪದವಿ ಜೊತೆಗೆ ಆಯಾ ಕ್ಷೇತ್ರದಲ್ಲಿ ನಿಗದಿತ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳು ಐಬಿಪಿಎಸ್‌ನ ಅಧಿಕೃತ ವೆಬ್‌ಸೈಟ್ https://www.ibps.in/index.php/rural-bank-xv/ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಪ್ರಾರಂಭದ ದಿನಾಂಕ- ಸೆಪ್ಟೆಂಬರ್‌ 01
  • ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 27(ವಿಸ್ತರಣೆ)
  • ಪೂರ್ವಭಾವಿ ಪರೀಕ್ಷೆಯ ದಿನಾಂಕ- ನವೆಂಬರ್/ಡಿಸೆಂಬರ್ 2026
  • ಮುಖ್ಯ ಪರೀಕ್ಷೆ /ಒಂದೇ ಹಂತದ ಪರೀಕ್ಷೆಯ ದಿನಾಂಕ- ಡಿಸೆಂಬರ್ 2026 / ಫೆಬ್ರವರಿ 2027
  • ಸಂದರ್ಶನ ಪ್ರಕ್ರಿಯೆ(ಅಧಿಕಾರಿ ಹುದ್ದೆಗಳಿಗೆ)- ಜನವರಿ/ಫೆಬ್ರವರಿ 2027
  • ತಾತ್ಕಾಲಿಕ ಹಂಚಿಕೆ ಫಲಿತಾಂಶದ ದಿನಾಂಕ- ಫೆಬ್ರವರಿ/ಮಾರ್ಚ್ 2027

ಬ್ಯಾಂಕ್ವಾರು ಹುದ್ದೆ ಸಂಖ್ಯೆ ಮಾಹಿತಿ:

ಬ್ಯಾಂಕ್ ಹೆಸರುಕಚೇರಿ ಸಹಾಯಕರು (OA)ಆಫೀಸರ್ ಸ್ಕೇಲ್-Iಆಫೀಸರ್ ಸ್ಕೇಲ್-II & III
ಆಂಧ್ರಪ್ರದೇಶ ಗ್ರಾಮೀಣ ಬ್ಯಾಂಕ್9004000
ಅರುಣಾಚಲ ಪ್ರದೇಶ ಗ್ರಾಮೀಣ ಬ್ಯಾಂಕ್26157
ಅಸ್ಸಾಂ ಗ್ರಾಮೀಣ ಬ್ಯಾಂಕ್1811692
ಬಿಹಾರ ಗ್ರಾಮೀಣ ಬ್ಯಾಂಕ್5003940
ಛತ್ತೀಸ್‌ಗಢ ಗ್ರಾಮೀಣ ಬ್ಯಾಂಕ್2969932
ಗುಜರಾತ್ ಗ್ರಾಮೀಣ ಬ್ಯಾಂಕ್51060095
ಹರಿಯಾಣ ಗ್ರಾಮೀಣ ಬ್ಯಾಂಕ್2119435
ಹಿಮಾಚಲ ಪ್ರದೇಶ ಗ್ರಾಮೀಣ ಬ್ಯಾಂಕ್51304
ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಬ್ಯಾಂಕ್2003218
ಜಾರ್ಖಂಡ್ ಗ್ರಾಮೀಣ ಬ್ಯಾಂಕ್2858019
ಕರ್ನಾಟಕ ಗ್ರಾಮೀಣ ಬ್ಯಾಂಕ್2793000
ಕೇರಳ ಗ್ರಾಮೀಣ ಬ್ಯಾಂಕ್3505517
ಮಧ್ಯಪ್ರದೇಶ ಗ್ರಾಮೀಣ ಬ್ಯಾಂಕ್48425278
ಮಹಾರಾಷ್ಟ್ರ ಗ್ರಾಮೀಣ ಬ್ಯಾಂಕ್30015035
ಮಣಿಪುರ ಗ್ರಾಮೀಣ ಬ್ಯಾಂಕ್001
ಮೇಘಾಲಯ ಗ್ರಾಮೀಣ ಬ್ಯಾಂಕ್262620
ಮಿಜೋರಾಂ ಗ್ರಾಮೀಣ ಬ್ಯಾಂಕ್45257
ನಾಗಾಲ್ಯಾಂಡ್ ಗ್ರಾಮೀಣ ಬ್ಯಾಂಕ್020
ಒಡಿಶಾ ಗ್ರಾಮೀಣ ಬ್ಯಾಂಕ್60037551
ಪುದುಚೇರಿ ಗ್ರಾಮಾ ಬ್ಯಾಂಕ್695
ಪಂಜಾಬ್ ಗ್ರಾಮೀಣ ಬ್ಯಾಂಕ್857524
ರಾಜಸ್ಥಾನ ಗ್ರಾಮೀಣ ಬ್ಯಾಂಕ್225250101
ತಮಿಳುನಾಡು ಗ್ರಾಮಾ ಬ್ಯಾಂಕ್2449058
ತೆಲಂಗಾಣ ಗ್ರಾಮೀಣ ಬ್ಯಾಂಕ್75016085
ತ್ರಿಪುರ ಗ್ರಾಮೀಣ ಬ್ಯಾಂಕ್NRNRNR
ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕ್120042525
ಉತ್ತರಾಖಂಡ್ ಗ್ರಾಮೀಣ ಬ್ಯಾಂಕ್2147522
ಪಶ್ಚಿಮ ಬಂಗಾಳ ಗ್ರಾಮೀಣ ಬ್ಯಾಂಕ್20474172

(ಸೂಚನೆ: NR ಎಂದರೆ ವರದಿಯಾಗಿಲ್ಲ ಎಂದರ್ಥ)

ಶೈಕ್ಷಣಿಕ ಅರ್ಹತೆ:

21-09-2026ಕ್ಕೆ ಅನ್ವಯಿಸುವಂತೆ;

ಕಚೇರಿ ಸಹಾಯಕ ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ (Bachelor’s Degree) ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.

ಅಧಿಕಾರಿ ಸ್ಕೇಲ್-I (ಸಹಾಯಕ ವ್ಯವಸ್ಥಾಪಕ) ಹುದ್ದೆಗೆ; ಯಾವುದೇ ಪದವಿ ಹೊಂದಿರಬೇಕು (ಕೃಷಿ, ತೋಟಗಾರಿಕೆ, ಅರಣ್ಯಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಕಾನೂನು, ಅರ್ಥಶಾಸ್ತ್ರ ಇತ್ಯಾದಿ ಪದವೀಧರರಿಗೆ ಆದ್ಯತೆ ನೀಡಲಾಗುವುದು).

ಅಧಿಕಾರಿ ಸ್ಕೇಲ್-II (ಜನರಲ್‌ ಬ್ಯಾಂಕಿಂಗ್‌ ಆಫೀಸರ್) ಹುದ್ದೆಗೆ; ಕನಿಷ್ಠ 50% ಅಂಕಗಳೊಂದಿಗೆ ಪದವಿ ಪಡೆದಿರಬೇಕು ಮತ್ತು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.

ಅಧಿಕಾರಿ ಸ್ಕೇಲ್-III (ಹಿರಿಯ ವ್ಯವಸ್ಥಾಪಕ) ಹುದ್ದೆಗೆ; ಕನಿಷ್ಠ 50% ಅಂಕಗಳೊಂದಿಗೆ ಪದವಿ ಹೊಂದಿರಬೇಕು ಮತ್ತು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು.

* ಜೊತೆಗೆ ಸ್ಥಳೀಯ ಭಾಷೆಯ ಪ್ರಾವೀಣ್ಯತೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ವಯೋಮಿತಿ:

01-09-2026ಕ್ಕೆ ಅನ್ವಯಿಸುವಂತೆ;

ಕಚೇರಿ ಸಹಾಯಕ ಹುದ್ದೆಗೆ; 18 ರಿಂದ 28 ವರ್ಷಗಳು (ಅಭ್ಯರ್ಥಿಗಳು 02.09.1998 ಕ್ಕಿಂತ ಮುಂಚೆ ಮತ್ತು 01.09.2008 ಕ್ಕಿಂತ ನಂತರ ಜನಿಸಿರಬಾರದು).

ಅಧಿಕಾರಿ ಸ್ಕೇಲ್-I ಹುದ್ದೆಗೆ; 18 ರಿಂದ 30 ವರ್ಷಗಳು (ಅಭ್ಯರ್ಥಿಗಳು 02.09.1996 ಕ್ಕಿಂತ ಮುಂಚೆ ಮತ್ತು 01.09.2008 ಕ್ಕಿಂತ ನಂತರ ಜನಿಸಿರಬಾರದು).

ಅಧಿಕಾರಿ ಸ್ಕೇಲ್-II ಹುದ್ದೆಗೆ; 21 ರಿಂದ 32 ವರ್ಷಗಳು.

ಅಧಿಕಾರಿ ಸ್ಕೇಲ್-III ಹುದ್ದೆಗೆ; 21 ರಿಂದ 40 ವರ್ಷಗಳು.

ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ(ಎನ್‌ಸಿಎಲ್) ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಕಚೇರಿ ಸಹಾಯಕ ಹುದ್ದೆಗೆ; ಎರಡು ಹಂತದ ಆನ್‌ಲೈನ್ ಪರೀಕ್ಷೆಗಳ ಮೂಲಕ ಆಯ್ಕೆ ನಡೆಯುತ್ತದೆ. ಮೊದಲಿಗೆ ಪೂರ್ವಭಾವಿ ಪರೀಕ್ಷೆ (Preliminary Exam) ಮತ್ತು ಅದರಲ್ಲಿ ಅರ್ಹತೆ ಪಡೆದವರಿಗೆ ಮುಖ್ಯ ಪರೀಕ್ಷೆ (Main Exam) ನಡೆಸಲಾಗುತ್ತದೆ. ಮುಖ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಮಾಡಲಾಗುತ್ತದೆ (ಯಾವುದೇ ಸಂದರ್ಶನ ಇರುವುದಿಲ್ಲ).

ಅಧಿಕಾರಿ ಸ್ಕೇಲ್-I ಹುದ್ದೆಗೆ; ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ತದನಂತರ ಸಂದರ್ಶನ (Interview) ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅಧಿಕಾರಿ ಸ್ಕೇಲ್-II ಮತ್ತು III ಹುದ್ದೆಗೆ; ಈ ಹುದ್ದೆಗಳಿಗೆ ಕೇವಲ ಒಂದೇ ಹಂತದ ಆನ್‌ಲೈನ್ ಪರೀಕ್ಷೆ (Single Online Exam) ಇರುತ್ತದೆ. ಇದರಲ್ಲಿ ಅರ್ಹತೆ ಪಡೆದವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.

ಸಂಬಳ:

ಆಯಾ ಬ್ಯಾಂಕಿನ ನೇಮಕಾತಿ ನಿಯಮಗಳ ಪ್ರಕಾರ ಹುದ್ದೆಗಳವಾರು ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ (ಆನ್‌ಲೈನ್ ಪಾವತಿ):

  • ಅಧಿಕಾರಿ ಹುದ್ದೆಗಳಿಗೆ (ಸ್ಕೇಲ್ I, II & III);
    • ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ರೂ.175/-
    • ಇತರೆ ಎಲ್ಲಾ ಅಭ್ಯರ್ಥಿಗಳಿಗೆ ರೂ.850/-
  • ಕಚೇರಿ ಸಹಾಯಕ ಹುದ್ದೆಗಳಿಗೆ;
    • ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕ/ಅಂಗವಿಕಲ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.175/-
    • ಇತರೆ ಎಲ್ಲಾ ಅಭ್ಯರ್ಥಿಗಳಿಗೆ ರೂ.850/-

ಅರ್ಜಿ ಸಲ್ಲಿಸುವುದು ಹೇಗೆ.?

ಹಂತ-1 ಅಭ್ಯರ್ಥಿಗಳು ಐಬಿಪಿಎಸ್‌ ಅಧಿಕೃತ ಜಾಲತಾಣ https://www.ibps.in/ಕ್ಕೆ ಭೇಟಿ ನೀಡಿ. ಮುಖಪುಟದಲ್ಲಿ “CRP RRBs” ಶೀರ್ಷಿಕೆ ಲಿಂಕ್‌ ಕ್ಲಿಕ್ಕಿಸಿ.

ಹಂತ-2 ನಂತರ ಅಲ್ಲಿ “Regional Rural Banks XV” ಒತ್ತಿ, ಮುಂದೆ ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಯ ಲಿಂಕ್‌ಅನ್ನು (Apply Online for Recruitment of Office Assistants (Multipurpose) under CRP- RRBs-XV ಅಥವಾ Apply Online for Recruitment of Officers -Scale I, II & III under CRP-RRBs-XV)ಕ್ಲಿಕ್ಕಿಸಿ.

ಹಂತ-3 ತದನಂತರ ಹೊಸಪುಟ ತೆರೆಯುತ್ತದೆ. ಅಭ್ಯರ್ಥಿಗಳು ಹೊಸ ಬಳಕೆದಾರರಾಗಿ ನೋಂದಣಿಯಾಗುವ ಮೂಲಕ ಅರ್ಜಿ ನಮೂನೆ ತುಂಬಬಹುದು.

ಹಂತ-4 ಕೊನೆಗೆ ತಮಗೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಕೆ ಮಾಡಬಹುದು.

ಪ್ರಮುಖ ಲಿಂಕ್‌ಗಳು:

ಅರ್ಜಿ ಕೊನೆದಿನಾಂಕ ವಿಸ್ತರಣೆ ಪ್ರಕಟಣೆ(21/09/2026)ಡೌನ್ಲೋಡ್‌ ಮಾಡಿ
ಅಧಿಕೃತ ಅಧಿಸೂಚನೆ ಪಿಡಿಎಫ್ಡೌನ್ಲೋಡ್‌ ಮಾಡಿ
ಕಚೇರಿ ಸಹಾಯಕ ಹುದ್ದೆಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ಲಿಂಕ್ಅರ್ಜಿ ಸಲ್ಲಿಸಿ
ಆಫೀಸರ್‌ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ಲಿಂಕ್ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣwww.ibps.in
ಮತ್ತಷ್ಟು ಸುದ್ದಿಗಳಿಗಾಗಿ —>>ಕರ್ನಾಟಕಹೆಲ್ಪ್‌.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment