ರಾಷ್ಟ್ರೀಯ ಮಾಹಿತಿ ಕೇಂದ್ರ(NIC)ದಲ್ಲಿ ಉದ್ಯೋಗಾವಕಾಶ

ಅರ್ಜಿ ಸಲ್ಲಿಸಲು ಸೆ.30 ಕೊನೆದಿನ

Published on:

Updated On:

ನವದೆಹಲಿ: ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಮಾಹಿತಿ ಕೇಂದ್ರವು(ಎನ್‌ಐಸಿ) ಖಾಲಿ ಇರುವ ಗ್ರೂಪ್-ಬಿ ಸೈಂಟಿಫಿಕ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್-ಎ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ವಿಭಾಗದಲ್ಲಿ 300 ಹುದ್ದೆಗಳು, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ 26 ಹುದ್ದೆಗಳು ಹಾಗೂ ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಒಟ್ಟು 50 ಹುದ್ದೆಗಳು ಭರ್ತಿ ನಡೆಯಲಿದೆ.

ಸಂಬಂಧಿತ ಆಯಾ ವಿಭಾಗಗಳಲ್ಲಿ ಎಂ.ಎಸ್ಸಿ/ಎಂಎಸ್/ಎಂಸಿಎ/ಬಿಇ/ಬಿ.ಟೆಕ್ ಪದವಿ ಹಾಗೂ ಗೇಟ್‌ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಜಾಲತಾಣ https://recruitment.nic.in/ನ ಮೂಲಕ ಸೆ.30ರೊಳಗೆ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ- ಸೆಪ್ಟೆಂಬರ್‌ 01
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 30 (ಸಂಜೆ 05:30 ಗಂಟೆಯವರೆಗೆ)
  • ಅರ್ಹತೆಗಳನ್ನು ನಿರ್ಧರಿಸುವ ಕೊನೆಯ ದಿನಾಂಕ(Cut-off Date)- ಸೆಪ್ಟೆಂಬರ್ 30
  • ದಾಖಲಾತಿ ಪರಿಶೀಲನೆಯ ದಿನಾಂಕ: ಶೀಘ್ರದಲ್ಲೇ ಎನ್‌ಐಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.

ವಿಷಯ/ವಿಭಾಗವಾರು ಹುದ್ದೆಗಳ ಸಂಖ್ಯೆ ವಿವರ:

ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ(Computer Sciences & IT) ವಿಭಾಗದಲ್ಲಿ: ಸಾಮಾನ್ಯ ವರ್ಗ (ಯುಆರ್‌) 122, ಎಸ್‌ಸಿ 45, ಎಸ್‌ಟಿ 22, ಒಬಿಸಿ(ಎನ್‌ಸಿಎಲ್) 81, ಇಡಬ್ಲ್ಯೂಎಸ್ 30.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್(Electronics & Communication Engineering) ವಿಭಾಗದಲ್ಲಿ; ಸಾಮಾನ್ಯ ವರ್ಗ (ಯುಆರ್) 13, ಎಸ್‌ಸಿ 3, ಎಸ್‌ಟಿ 01, ಒಬಿಸಿ(ಎನ್‌ಸಿಎಲ್) 7,ಇಡಬ್ಲ್ಯೂಎಸ್ 02.

ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(Data Science & AI) ವಿಭಾಗದಲ್ಲಿ; ಸಾಮಾನ್ಯ ವರ್ಗ(ಯುಆರ್‌) 22, ಎಸ್‌ಸಿ 07, ಎಸ್‌ಟಿ 03, ಒಬಿಸಿ(ಎನ್‌ಸಿಎಲ್) 13, ಇಡಬ್ಲ್ಯೂಎಸ್ 05)

ಗಮನಿಸಿ: ವಿಕಲಚೇತನ(ಪಿಡಬ್ಲ್ಯೂಬಿಡಿ) ಅಭ್ಯರ್ಥಿಗಳಿಗೆ ನಿಯಮಾನುಸಾರ ಸಮಾನಾಂತರ ಮೀಸಲಾತಿಯನ್ನು ನೀಡಲಾಗಿದೆ.

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ಕಂಪ್ಯೂಟರ್ ಮತ್ತು ನೆಟ್‌ವರ್ಕಿಂಗ್ ಸೆಕ್ಯುರಿಟಿ, ಸಾಫ್ಟ್‌ವೇರ್ ಸಿಸ್ಟಮ್, ಇನ್ಫರ್ಮೇಷನ್ ಟೆಕ್ನಾಲಜಿ, ಇನ್ಫರ್ಮ್ಯಾಟಿಕ್ಸ್ ವಿಭಾಗಗಳಲ್ಲಿ ಎಂ.ಎಸ್ಸಿ/ಎಂಎಸ್/ಎಂಸಿಎ/ಬಿಇ/ಬಿ.ಟೆಕ್ ಪದವಿಯನ್ನು (ಒಂಟಿಯಾಗಿ ಅಥವಾ ಸಂಯೋಜನೆಯಲ್ಲಿ) ಉತ್ತೀರ್ಣರಾಗಿರಬೇಕು:

ಜೊತೆಗೆ ಅಭ್ಯರ್ಥಿಗಳು 2024, 2025 ಅಥವಾ 2026 ರ ಸಾಲಿನ ಮಾನ್ಯತೆ ಹೊಂದಿರುವ ಗೇಟ್ (GATE) ಸ್ಕೋರ್ ಕಾರ್ಡ್ ಹೊಂದಿರಬೇಕು.

  • ಕಂಪ್ಯೂಟರ್ ಸೈನ್ಸ್ ಹುದ್ದೆಗಳಿಗೆ: CS ಪೇಪರ್ ಕೋಡ್
  • ಎಲೆಕ್ಟ್ರಾನಿಕ್ಸ್ ಹುದ್ದೆಗಳಿಗೆ: EC ಪೇಪರ್ ಕೋಡ್
  • ಡೇಟಾ ಸೈನ್ಸ್ ಹುದ್ದೆಗಳಿಗೆ: DA ಪೇಪರ್ ಕೋಡ್

ಯಾವುದೇ ಪೂರ್ವ ಅನುಭವದ ಅಗತ್ಯವಿರುವುದಿಲ್ಲ.

ವಯೋಮಿತಿ:

30-09-2026 ಕ್ಕೆ ಅನ್ವಯಿಸುವಂತೆ;

➢ಸಾಮಾನ್ಯ ವರ್ಗ/ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷಗಳು
➢ಇತರ ಹಿಂದುಳಿದ ವರ್ಗ (OBC – NCL)ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷಗಳು
➢ಪ.ಜಾತಿ/ಪ.ಪಂಗಡ(SC/ST) ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು
➢ವಿಕಲಚೇತನರು(ಪಿಡಬ್ಲ್ಯೂಬಿಡಿ)ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳು (ಎಸ್‌ಸಿ/ಎಸ್‌ಟಿ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 45 ವರ್ಷಗಳು ಮತ್ತು ಒಬಿಸಿ ಪಿಡಬ್ಲ್ಯೂಬಿಡಿಗೆ 43 ವರ್ಷಗಳು)
➢ಸರ್ಕಾರಿ ಸೇವಾ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷಗಳು (ಎಸ್‌ಸಿ/ಎಸ್‌ಟಿಗೆ 40 ವರ್ಷಗಳು ಮತ್ತು ಒಬಿಸಿಗೆ 38 ವರ್ಷಗಳು)

ಮಾಜಿ ಸೈನಿಕರು: ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಮೆರಿಟ್ ಪಟ್ಟಿ(ಶಾರ್ಟ್‌ಲಿಸ್ಟ್): ಅಭ್ಯರ್ಥಿಗಳು ಸಲ್ಲಿಸಿದ 2024, 2025 ಅಥವಾ 2026 ರ ಗೇಟ್ (GATE) ಸ್ಕೋರ್ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಮೂರೂ ವರ್ಷಗಳ ಗೇಟ್ ಸ್ಕೋರ್‌ಗಳಿಗೆ ಸಮಾನ ಆದ್ಯತೆ ನೀಡಲಾಗುತ್ತದೆ.

ದಾಖಲಾತಿ ಪರಿಶೀಲನೆ: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ಮೂಲ ದಾಖಲಾತಿಗಳ ಪರಿಶೀಲನೆಗೆ ಕರೆಯಲಾಗುತ್ತದೆ. ಯಶಸ್ವಿ ಪರಿಶೀಲನೆಯ ನಂತರ ತಾತ್ಕಾಲಿಕ ನೇಮಕಾತಿ ಆದೇಶ ನೀಡಲಾಗುತ್ತದೆ.

ಸಂಬಳ:

ಈ ಹುದ್ದೆಯು 7ನೇ ವೇತನ ಆಯೋಗದ (7th CPC) ಪೇ ಮ್ಯಾಟ್ರಿಕ್ಸ್ ಲೆವೆಲ್ 6ರ ಅಡಿಯಲ್ಲಿದ್ದು, ಮಾಸಿಕ ವೇತನ ಶ್ರೇಣಿ ರೂ.35,400 ರಿಂದ ರೂ. 1,12,400/- ಇರುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗ (UR) / OBC / EWS ಅಭ್ಯರ್ಥಿಗಳಿಗೆ: ರೂ. 800/- (ಪ್ರತಿ ಶಿಸ್ತು/ವಿಭಾಗಕ್ಕೆ ಪ್ರತ್ಯೇಕವಾಗಿ ಪಾವತಿಸಬೇಕು)
  • SC / ST / PwBD ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (Nil).
  • ಶುಲ್ಕವನ್ನು ಆನ್‌ಲೈನ್ (ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್) ಮೂಲಕ ಮಾತ್ರ ಪಾವತಿಸಬೇಕು. ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿಸಲಾಗುವುದಿಲ್ಲ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ…

ಅಭ್ಯರ್ಥಿಗಳು ಅಧಿಕೃತ ಜಾಲತಾಣ https://recruitment.nic.in/ಗೆ ಭೇಟಿ ನೀಡಿ. ಅಲ್ಲಿ “To apply online for the post of Scientific/Technical Assistant-A Click Here (Last Date to apply : 30/09/2026 (05:30 P.M.))“ಎಂಬ ಶೀರ್ಷಕೆ ಮೇಲೆ ಕ್ಲಿಕ್ಕಿಸಿ.

Nic Scientific And Technical Assistant Posts Notification 2026
ಆನ್‌ಲೈನ್‌ ಅರ್ಜಿ ನಮೂನೆ ವಿಂಡೋ

ಮುಂದೆ ಹೊಸಪುಟ ತೆರೆಯುತ್ತದೆ. ತಾವು ಹೊಸ ಬಳಕೆದಾರರಾಗಿ ನೋಂದಣಿಯಾಗಿ. ಅರ್ಜಿ ನಮೂನೆಯನ್ನು ತುಂಬಿ, ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಕೆ ಲಿಂಕ್(ನೇರ ಲಿಂಕ್)ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣhttps://www.nic.gov.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment