ಬಿಜಾಪುರ ಸೈನಿಕ ಶಾಲೆಯಲ್ಲಿ ನಾನಾ ಹುದ್ದೆಗಳು ಖಾಲಿ..

Published on:

ವಿಜಯಪುರ/ಬಿಜಾಪುರ: ಇಲ್ಲಿನ ಸೈನಿಕ ಶಾಲೆಯು ನಿಯಮಿತ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ಪಿಜಿಟಿ 02, ಟಿಜಿಟಿ 06, ಕ್ರಾಫ್ಟ್ ಇನ್ಸ್ಟ್ರಕ್ಟರ್ 01, ನರ್ಸಿಂಗ್ ಅಸಿಸ್ಟೆಂಟ್ ಮತ್ತು ಎಂಟಿಎಸ್‌ 05 ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ಶಾಲೆಯ ಅಧಿಕೃತ ವೆಬ್‌ಸೈಟ್ (www.ssbj.in ಅಥವಾ ಸುದ್ದಿ ಕೊನೆಯಲ್ಲಿ ನೀಡಲಾದ ಲಿಂಕ್‌ ಮೂಲಕ) ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳು, ಡಿಡಿ ಮತ್ತು ರೂ.55/- ರ ಅಂಚೆ ಚೀಟಿ ಅಂಟಿಸಿದ ಸ್ವಯಂ ವಿಳಾಸಿತ ಲಕೋಟೆಯನ್ನು ಲಗತ್ತಿಸಿ ಪ್ರಾಂಶುಪಾಲರು, ಸೈನಿಕ ಶಾಲೆ ಬಿಜಾಪುರ, ಅಥಣಿ ರಸ್ತೆ, ವಿಜಯಪುರ ಜಿಲ್ಲೆ, ಕರ್ನಾಟಕ – 586108 ಈ ವಿಳಾಸಕ್ಕೆ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:

  • ಅಧಿಕೃತ ಅಧಿಸೂಚನೆಯ ದಿನಾಂಕ- ಸೆಪ್ಟೆಂಬರ್‌ 5-11
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜಾಹೀರಾತು ಪ್ರಕಟವಾದ ದಿನಾಂಕದಿಂದ 21 ದಿನಗಳ ಒಳಗೆ ಅರ್ಜಿಗಳು ಶಾಲೆಯನ್ನು ತಲುಪಬೇಕು.

ಹುದ್ದೆಗಳವಾರು ಹುದ್ದೆಗಳ ಸಂಖ್ಯೆ:

ಒಟ್ಟು ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ:

  1. ಪಿಜಿಟಿ(ಕೆಮಿಸ್ಟ್ರಿ): 01 (ಒಬಿಸಿ-ಎನ್‌ಸಿಎಲ್)
  2. ಪಿಜಿಟಿ (ಇಂಗ್ಲಿಷ್): 01 (ಎಸ್‌ಸಿ)
  3. ಟಿಜಿಟಿ (ಇಂಗ್ಲಿಷ್): 02 (ಒಬಿಸಿ-ಎನ್‌ಸಿಎಲ್- 01, ಸಾಮಾನ್ಯ ವರ್ಗ- 01)
  4. ಟಿಜಿಟಿ (ಬಯಾಲಜಿ): 01 (ಒಬಿಸಿ-ಎನ್‌ಸಿಎಲ್)
  5. ಟಿಜಿಟಿ (ಮ್ಯಾಥ್ಸ್): 01 (ಎಸ್‌ಟಿ)
  6. ಟಿಜಿಟಿ (ಕನ್ನಡ): 01 (ಸಾಮಾನ್ಯ ವರ್ಗ)
  7. ಟಿಜಿಟಿ(ಫಿಸಿಕ್ಸ್): 01 (ಸಾಮಾನ್ಯ ವರ್ಗ)
  8. ಟಿಜಿಟಿ (ಸೋಷಿಯಲ್ ಸೈನ್ಸ್): 02 (ಸಾಮಾನ್ಯ ವರ್ಗ- 01, ಎಸ್‌ಟಿ- 01)
  9. ಕ್ರಾಫ್ಟ್ ಇನ್ಸ್ಟ್ರಕ್ಟರ್ (Craft Instructor): 01 (ಸಾಮಾನ್ಯ ವರ್ಗ)
  10. ನರ್ಸಿಂಗ್ ಅಸಿಸ್ಟೆಂಟ್ (Nursing Assistant – ಪುರುಷರಿಗೆ ಮಾತ್ರ): 01 (ಸಾಮಾನ್ಯ ವರ್ಗ)
  11. ಜನರಲ್ ಎಂಪ್ಲಾಯೀಸ್ (MTS): 05 (ಸಾಮಾನ್ಯ ವರ್ಗ- 02, ಒಬಿಸಿ-ಎನ್‌ಸಿಎಲ್‌- 02, ಎಸ್‌ಟಿ- 01)

ಶೈಕ್ಷಣಿಕ ಅರ್ಹತೆ:

ಪಿಜಿಟಿ (ಕೆಮಿಸ್ಟ್ರಿ ಮತ್ತು ಇಂಗ್ಲಿಷ್) ಹುದ್ದೆಗೆ; ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಎನ್‌ಸಿಟಿಇ ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಇಡಿ ಒಳಗೊಂಡಂತೆ ಇಂಟಿಗ್ರೇಟೆಡ್ ಪೋಸ್ಟ್ ಗ್ರಾಜುಯೇಟ್ ಕೋರ್ಸ್ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 50% ಅಂಕಗಳೊಂದಿಗೆ ಮಾಸ್ಟರ್ಸ್ ಡಿಗ್ರಿ ಮತ್ತು ಬಿ.ಇಡಿ. ಪದವಿ ಹೊಂದಿರಬೇಕು. ಅಥವಾ ಮೂರು ವರ್ಷಗಳ ಇಂಟಿಗ್ರೇಟೆಡ್ ಬಿ.ಇಡಿ.-ಎಂ.ಇಡಿ ಅಥವಾ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಪದವಿ ಹೊಂದಿರಬೇಕು.

ಟಿಜಿಟಿ(ಇಂಗ್ಲಿಷ್, ಬಯಾಲಜಿ, ಮ್ಯಾಥ್ಸ್, ಕನ್ನಡ, ಫಿಸಿಕ್ಸ್, ಸೋಷಿಯಲ್ ಸೈನ್ಸ್)ಹುದ್ದೆಗೆ; ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಪದವಿ ಅಥವಾ ಕನಿಷ್ಠ 50% ಅಂಕಗಳೊಂದಿಗೆ ಬ್ಯಾಚುಲರ್/ಆನರ್ಸ್ ಡಿಗ್ರಿ ಮತ್ತು ಬಿ.ಇಡಿ ಪದವಿ ಹೊಂದಿರಬೇಕು. ಅಥವಾ ಮೂರು ವರ್ಷಗಳ ಇಂಟಿಗ್ರೇಟೆಡ್ ಬಿ.ಇಡಿ.-ಎಂ.ಇಡಿ ಅಥವಾ ಆರ್‌ಸಿಐ ನಿಂದ ಒಂದು ವರ್ಷದ B.Ed. (ಸ್ಪೆಷಲ್ ಎಜುಕೇಶನ್) ಹೊಂದಿರಬೇಕು.

ಸಿಬಿಎಸ್‌ಸಿ ನಡೆಸುವ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ(ಸಿಟಿಇಟಿ ಪತ್ರಿಕೆ-II) ನಲ್ಲಿ ಉತ್ತೀರ್ಣರಾಗಿರಬೇಕು (ಟಿಜಿಟಿ-ಗಣಿತ[ಮ್ಯಾಥ್ಸ್] ಹೊರತುಪಡಿಸಿ ಉಳಿದ ವಿಭಾಗದ ಟಿಜಿಟಿ ಹುದ್ದೆಗಳಿಗೆ ಇದು ಕಡ್ಡಾಯವಾಗಿದೆ).

ಅಭ್ಯರ್ಥಿಗಳು ಆಯಾ ಹುದ್ದೆಗೆ ನಿಗದಿಪಡಿಸಿದ ವಿಷಯಗಳನ್ನು ಪದವಿ ಮಟ್ಟದಲ್ಲಿ ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು (ಉದಾಹರಣೆಗೆ: ಕನ್ನಡ ಹುದ್ದೆಗೆ ಕನ್ನಡವನ್ನು ಎಲೆಕ್ಟಿವ್/ಮುಖ್ಯ ವಿಷಯವಾಗಿ ಓದಿರಬೇಕು).

ಕ್ರಾಫ್ಟ್ ಇನ್ಸ್ಟ್ರಕ್ಟರ್ ಹುದ್ದೆಗೆ; ಕನಿಷ್ಠ 50% ಅಂಕಗಳೊಂದಿಗೆ ಸೀನಿಯರ್ ಸೆಕೆಂಡರಿ/ಇಂಟರ್ಮಿಡಿಯೆಟ್ ತೇರ್ಗಡೆಯಾಗಿರಬೇಕು ಮತ್ತು ಮಾನ್ಯತೆ ಪಡೆದ ಸಂಸ್ಥೆಯಿಂದ ಕ್ರಾಫ್ಟ್ ಕ್ಷೇತ್ರದಲ್ಲಿ ಡಿಗ್ರಿ ಅಥವಾ ಡಿಪ್ಲೊಮಾ ಹೊಂದಿರಬೇಕು.

ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗೆ; ಮಾನ್ಯತೆ ಪಡೆದ ಸಂಸ್ಥೆಯಿಂದ ಜನರಲ್ ನರ್ಸಿಂಗ್‌ನಲ್ಲಿ 3 ವರ್ಷದ ಡಿಪ್ಲೊಮಾ ಅಥವಾ ಬಿ.ಎಸ್ಸಿ ನರ್ಸಿಂಗ್ ಜೊತೆಗೆ ಮಾನ್ಯತೆ ಹೊಂದಿರುವ ನೋಂದಣಿ (Registration) ಇರಬೇಕು. 5 ವರ್ಷಗಳ ಅನುಭವ ಅಥವಾ ಮೆಡಿಕಲ್ ಅಸಿಸ್ಟೆಂಟ್ ಟ್ರೇಡ್‌ನಲ್ಲಿ ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿದ ಮಾಜಿ ಸೈನಿಕರಾಗಿರಬೇಕು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.

ಜನರಲ್ ಎಂಪ್ಲಾಯೀಸ್ (MTS) ಹುದ್ದೆಗೆ; ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ತೇರ್ಗಡೆಯಾಗಿರಬೇಕು. ಬೇಕರಿ, ಪ್ಲಂಬಿಂಗ್, ಕಾರ್ಪೆಂಟರ್, ಹೌಸ್ ಕೀಪಿಂಗ್ ಮುಂತಾದ ಮಲ್ಟಿ-ಸ್ಕಿಲ್ ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳು ತಿಳಿದಿರಬೇಕು.

ವಯೋಮಿತಿ:

01 ಅಕ್ಟೋಬರ್ 2026 ಕ್ಕೆ ಅನ್ವಯಿಸುವಂತೆ;

  • PGT ಹುದ್ದೆಗಳು: 21 ರಿಂದ 40 ವರ್ಷಗಳು.
  • TGT ಹುದ್ದೆಗಳು: 21 ರಿಂದ 35 ವರ್ಷಗಳು.
  • ಕ್ರಾಫ್ಟ್ ಇನ್ಸ್ಟ್ರಕ್ಟರ್: 21 ರಿಂದ 35 ವರ್ಷಗಳು.
  • ನರ್ಸಿಂಗ್ ಅಸಿಸ್ಟೆಂಟ್: 18 ರಿಂದ 50 ವರ್ಷಗಳು.
  • ಜನರಲ್ ಎಂಪ್ಲಾಯೀಸ್ (MTS): 18 ರಿಂದ 50 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಶಾರ್ಟ್‌ಲಿಸ್ಟ್(ಮೆರಿಟ್‌ ಪಟ್ಟಿ)
  • ಲಿಖಿತ ಪರೀಕ್ಷೆ (Written Test)/ ಪ್ರಾಯೋಗಿಕ ಪರೀಕ್ಷೆ (Practical Test)/ ಸಂದರ್ಶನಕ್ಕೆ (Interview)

ಸಂಬಳ:

7ನೇ ವೇತನ ಆಯೋಗದ ಪ್ರಕಾರ ಮೂಲ ವೇತನ ಮಾಸಿಕವಾಗಿ ಕೆಳಗಿನಂತಿದೆ.

ಪಿಜಿಟಿ ಹುದ್ದೆಗೆ ರೂ.47,600/- (ಲೆವೆಲ್-8)
ಟಿಜಿಟಿ ಹುದ್ದೆಗೆ ರೂ.44,900/- (ಲೆವೆಲ್-7)
ಕ್ರಾಫ್ಟ್ ಇನ್ಸ್ಟ್ರಕ್ಟರ್ ಹುದ್ದೆ ರೂ.29,200/- (ಲೆವೆಲ್-5)
ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗೆ ರೂ.25,500/- (ಲೆವೆಲ್-4)
ಜನರಲ್ ಎಂಪ್ಲಾಯೀಸ್(ಎಂಟಿಎಸ್) ರೂ.18,000/- (ಲೆವೆಲ್-1)

ಇತರ ಸೌಲಭ್ಯಗಳು: ಉಚಿತ ವಸತಿ, ಸಾರಿಗೆ ಭತ್ಯೆ, ವೈದ್ಯಕೀಯ ಭತ್ಯೆ, ಶಾಲೆಯಲ್ಲಿ ಇಬ್ಬರು ಮಕ್ಕಳಿಗೆ ರಿಯಾಯಿತಿ ದರದ ಶಿಕ್ಷಣ, ಎಲ್‌ಟಿಸಿ, ಬೋನಸ್ ಮತ್ತು ಹೊಸ ಪಿಂಚಣಿ ಯೋಜನೆ (NPS) ಸೌಲಭ್ಯಗಳು ಲಭ್ಯವಿರುತ್ತವೆ.

ಅರ್ಜಿ ಶುಲ್ಕ:

ಅಭ್ಯರ್ಥಿಗಳು ರೂ.500/- ರ ಡಿಮ್ಯಾಂಡ್ ಡ್ರಾಫ್ಟ್ (Demand Draft) ಅನ್ನು “ಪ್ರಾಂಶುಪಾಲರು, ಸೈನಿಕ ಶಾಲೆ ಬಿಜಾಪುರ” ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು (ಇದು ಮರುಪಾವತಿ ಮಾಡಲಾಗದ ಶುಲ್ಕವಾಗಿದೆ).

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್ಡೌನ್ಲೋಡ್‌ ಮಾಡಿ
ಅರ್ಜಿ ನಮೂನೆ ಪಿಡಿಎಫ್ಡೌನ್ಲೋಡ್‌ ಮಾಡಿ
ಅಧಿಕೃತ ಜಾಲತಾಣwww.ssbj.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

3 thoughts on “ಬಿಜಾಪುರ ಸೈನಿಕ ಶಾಲೆಯಲ್ಲಿ ನಾನಾ ಹುದ್ದೆಗಳು ಖಾಲಿ..”

Leave a Comment