ಗ್ರಾಜುಯೇಟ್, ಟೆಕ್ನಿಷಿಯನ್ ಮತ್ತು ಟ್ರೇಡ್ ಅಪ್ರೆಂಟಿಸ್‌ಶಿಪ್; ಅರ್ಜಿ ಆರಂಭ

ಒಟ್ಟು 326 ಹುದ್ದೆಗಳು

Published on:

ಮುಂಬೈ: ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್(ಆರ್‌ಸಿಎಫ್‌) ಸಂಸ್ಥೆಯ ಉತ್ಪಾದನಾ ಘಟಕಗಳಾದ ಟ್ರಾಂಬೆ ಮತ್ತು ರಾಯಗಢ ಜಿಲ್ಲೆಯ ಥಾಲ್‌ನಲ್ಲಿ ಅಪ್ರೆಂಟಿಸ್‌ ಕಾಯ್ದೆಯಡಿ ತರಬೇತಿಗಾಗಿ ಗ್ರಾಜುಯೇಟ್, ಟೆಕ್ನಿಷಿಯನ್ ಮತ್ತು ಟ್ರೇಡ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಗ್ರಾಜುಯೇಟ್ ಅಪ್ರೆಂಟಿಸ್ 145 ಹುದ್ದೆಗಳು, ಟೆಕ್ನಿಷಿಯನ್ ಅಪ್ರೆಂಟಿಸ್ 105 ಹುದ್ದೆಗಳು, ಟ್ರೇಡ್ ಅಪ್ರೆಂಟಿಸ್ 76 ಹುದ್ದೆಗಳಿಗೆ ಮೆರಿಟ್‌ ಆಧಾರದ ಮೇಲೆ ನೇಮಕ ಪ್ರಕ್ರಿಯೆ ನಡೆಯಲಿದೆ. ಯಾವುದೇ ಪದವಿ, ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ/ಬಿ.ಎಸ್ಸಿ ಅರ್ಹತೆ ಹೊಂದಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್‌ಸೈಟ್ (www.rcfltd.com) ಮೂಲಕ ಯಾವುದೇ ಅರ್ಜಿ ಶುಲ್ಕವಿಲ್ಲದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ಸೆಪ್ಟೆಂಬರ್ 4, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 20, 2026 ರಂದು ಸಂಜೆ 5:00 ಗಂಟೆಯವರೆಗೆ.

ವೃಂದವಾರು ಹುದ್ದೆಗಳ ಸಂಖ್ಯೆ ಮತ್ತು ಶೈಕ್ಷಣಿಕ ಅರ್ಹತೆ :

ಗ್ರಾಜುಯೇಟ್ ಅಪ್ರೆಂಟಿಸ್‌ ವೃಂದ

ಅಕೌಂಟ್ಸ್ ಎಕ್ಸಿಕ್ಯೂಟಿವ್- 50 ಹುದ್ದೆಗಳು; ಬಿ.ಕಾಂ(B.Com), ಬಿಬಿಎ(BBA) ಅಥವಾ ಅರ್ಥಶಾಸ್ತ್ರದೊಂದಿಗೆ ಪದವಿ. ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ.
ಸೆಕ್ರೆಟೇರಿಯಲ್ ಅಸಿಸ್ಟೆಂಟ್- 60 ಹುದ್ದೆಗಳು; ಯಾವುದೇ ಪದವಿ. ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ.
ರಿಕ್ರೂಟ್‌ಮೆಂಟ್ ಎಕ್ಸಿಕ್ಯೂಟಿವ್ (ಹೆಚ್‌ಆರ್‌) – 35 ಹುದ್ದೆಗಳು; ಯಾವುದೇ ಪದವಿ. ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ಕಡ್ಡಾಯ.

ಟೆಕ್ನಿಷಿಯನ್ ಅಪ್ರೆಂಟಿಸ್ ವೃಂದ

ಡಿಪ್ಲೊಮಾ ಕೆಮಿಕಲ್- 20 ಹುದ್ದೆಗಳು; ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ಡಿಪ್ಲೊಮಾ ಸಿವಿಲ್- 15 ಹುದ್ದೆಗಳು; ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ಡಿಪ್ಲೊಮಾ ಕಂಪ್ಯೂಟರ್- 10 ಹುದ್ದೆಗಳು; ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ಡಿಪ್ಲೊಮಾ ಎಲೆಕ್ಟ್ರಿಕಲ್- 20 ಹುದ್ದೆಗಳು; ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ಡಿಪ್ಲೊಮಾ ಇನ್ಸ್ಟ್ರುಮೆಂಟೇಶನ್- 20 ಹುದ್ದೆಗಳು; ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.
ಡಿಪ್ಲೊಮಾ ಮೆಕ್ಯಾನಿಕಲ್- 20 ಹುದ್ದೆಗಳು; ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ.

ಟ್ರೇಡ್ ಅಪ್ರೆಂಟಿಸ್ ವೃಂದ

ಅಟೆಂಡೆಂಟ್ ಆಪರೇಟರ್ – ಕೆಮಿಕಲ್ ಪ್ಲಾಂಟ್- 35 ಹುದ್ದೆಗಳು; ರಸಾಯನಶಾಸ್ತ್ರವನ್ನು ಪ್ರಮುಖ ವಿಷಯವಾಗಿ ಹೊಂದಿರುವ ಬಿ.ಎಸ್ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ).
ಇನ್ಸ್ಟ್ರುಮೆಂಟ್ ಮೆಕ್ಯಾನಿಕ್ – ಕೆಮಿಕಲ್ ಪ್ಲಾಂಟ್- 04 ಹುದ್ದೆಗಳು; ಭೌತಶಾಸ್ತ್ರವನ್ನು ಪ್ರಮುಖ ವಿಷಯವಾಗಿ ಹೊಂದಿರುವ ಬಿ.ಎಸ್ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ).
ಲ್ಯಾಬೊರೇಟರಿ ಅಸಿಸ್ಟೆಂಟ್ – ಕೆಮಿಕಲ್ ಪ್ಲಾಂಟ್- 06 ಹುದ್ದೆಗಳು; ರಸಾಯನಶಾಸ್ತ್ರವನ್ನು ಪ್ರಮುಖ ವಿಷಯವಾಗಿ ಹೊಂದಿರುವ ಬಿ.ಎಸ್ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ).
ಬಾಯ್ಲರ್ ಅಟೆಂಡೆಂಟ್- 02 ಹುದ್ದೆಗಳು; 10+2 ಪದ್ಧತಿಯಡಿ ವಿಜ್ಞಾನ ವಿಷಯದೊಂದಿಗೆ 12ನೇ ತರಗತಿ ತೇರ್ಗಡೆ.
ಎಲೆಕ್ಟ್ರಿಷಿಯನ್- 06 ಹುದ್ದೆಗಳು; ವಿಜ್ಞಾನ ವಿಷಯದೊಂದಿಗೆ 12ನೇ ತರಗತಿ ಅಥವಾ ತತ್ಸಮಾನ ತೇರ್ಗಡೆ.
ಹಾರ್ಟಿಕಲ್ಚರ್ ಅಸಿಸ್ಟೆಂಟ್- 06 ಹುದ್ದೆಗಳು; 12ನೇ ತರಗತಿ ಅಥವಾ ತತ್ಸಮಾನ ತೇರ್ಗಡೆ.
ಮೆಡಿಕಲ್ ಲ್ಯಾಬೊರೇಟರಿ ಟೆಕ್ನಿಷಿಯನ್ – ಪ್ಯಾಥಾಲಜಿ- 17 ಹುದ್ದೆಗಳು; ವಿಜ್ಞಾನ ವಿಷಯದೊಂದಿಗೆ 12ನೇ ತರಗತಿ ತೇರ್ಗಡೆ.

ಗಮನಿಸಿ: ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕಗಳನ್ನು ಪಡೆದಿರಬೇಕು. ಎಸ್‌ಸಿ/ಎಸ್‌ಟಿ ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಶೇ. 5 ರಷ್ಟು ಸಡಿಲಿಕೆ ಇರುತ್ತದೆ

ವಯೋಮಿತಿ:

ಅಭ್ಯರ್ಥಿಗಳಿಗೆ 01-09-2026ಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು.

ಗರಿಷ್ಠ ವಯೋಮಿತಿ ಹುದ್ದೆಗಳಿಗೆ ಅನುಗುಣವಾಗಿ 21 ರಿಂದ 25 ವರ್ಷಗಳಾಗಿರುತ್ತದೆ.

ವಯೋಮಿತಿ ಸಡಿಲಿಕೆ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳು, 1984ರ ದಂಗೆಯ ಸಂತ್ರಸ್ತರ ಮಕ್ಕಳು/ಕುಟುಂಬದ ಸದಸ್ಯರಿಗೆ 5 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಮೆರಿಟ್ ಪಟ್ಟಿ
  • ದಾಖಲಾತಿ ಪರಿಶೀಲನೆ

ಸಂಬಳ/ಮಾಸಿಕ ಸ್ಟೈಪೆಂಡ್:

ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕವಾಗಿ ಈ ಕೆಳಗಿನಂತೆ ಒಟ್ಟು ಸ್ಟೈಪೆಂಡ್ ನೀಡಲಾಗುತ್ತದೆ:

  • ಗ್ರಾಜುಯೇಟ್ ಅಪ್ರೆಂಟಿಸ್‌ಗಳಿಗೆ (ಅಕೌಂಟ್ಸ್ ಎಕ್ಸಿಕ್ಯೂಟಿವ್, ಸೆಕ್ರೆಟೇರಿಯಲ್ ಅಸಿಸ್ಟೆಂಟ್, ರಿಕ್ರೂಟ್‌ಮೆಂಟ್ ಎಕ್ಸಿಕ್ಯೂಟಿವ್)₹17,300/-
  • ಟೆಕ್ನಿಷಿಯನ್ ಅಪ್ರೆಂಟಿಸ್‌ಗಳಿಗೆ(ಎಲ್ಲಾ ಡಿಪ್ಲೊಮಾ ವಿಭಾಗಗಳು) ₹15,900/-
  • ಟ್ರೇಡ್ ಅಪ್ರೆಂಟಿಸ್‌ಗಳಿಗೆ(AOCP, IMCP, LACP) ₹17,300/-
  • ಇತರ ಟ್ರೇಡ್ ಅಪ್ರೆಂಟಿಸ್‌ಗಳಿಗೆ (ಬಾಯ್ಲರ್ ಅಟೆಂಡೆಂಟ್, ಎಲೆಕ್ಟ್ರಿಷಿಯನ್, ಹಾರ್ಟಿಕಲ್ಚರ್ ಅಸಿಸ್ಟೆಂಟ್, ಮೆಡಿಕಲ್ ಲ್ಯಾಬೊರೇಟರಿ ಟೆಕ್ನಿಷಿಯನ್) ₹14,600/-

ಹೆಚ್ಚುವರಿಯಾಗಿ, ತರಬೇತಿ ಅವಧಿಯಲ್ಲಿ ಕಂಪನಿಯ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಾಹಾರ, ಚಹಾ ಮತ್ತು ಮಧ್ಯಾಹ್ನದ ಸಸ್ಯಾಹಾರಿ ಊಟವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಶುಲ್ಕ:

ಅರ್ಜಿ ಶುಲ್ಕದ ಕುರಿತು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿಲ್ಲ. (ಬಹುಶಃ ಯಾವುದೇ ಅರ್ಜಿ ಶುಲ್ಕವಿಲ್ಲ)

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?

ಹಂತ 1: ಆರ್‌ಸಿಎಫ್‌ ಕಂಪನಿಯ ಅಧಿಕೃತ ವೆಬ್‌ಸೈಟ್‌(www.rcfltd.com)ಗೆ ಭೇಟಿ ನೀಡಿ

ಹಂತ 2: ವೆಬ್‌ಸೈಟ್‌ನಲ್ಲಿ “HR” ವಿಭಾಗದಡಿ “RECRUITMENT” ಉಪವಿಭಾಗದ ಲಿಂಕ್ ಮೇಲೆ ಕ್ಲಿಕ್ಕಿಸಿ, ನಂತರ “ADVERTISEMENT FOR THE ENGAGEMENT OF ACT APPRENTICES TRAINEES IN VARIOUS DISCIPLINES AT TROMBAY (MUMBAI) AND THAL (RAIGAD).” ಎಂಬುದನ್ನು ಶೀರ್ಷಿಕೆಯಡಿ ಅಲ್ಲಿ ನೀಡಲಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಲು “Apply Online” ಎಂಬುದರ ಮೇಲೆ ಕ್ಲಿಕ್ ಮಾಡಿ.

Rcfl Apprenticeship 2026 Online Form
ಆನ್‌ಲೈನ್‌ ಅರ್ಜಿ ನಮೂನೆ ಚಿತ್ರಪಟ

ಹಂತ 4: ಮುಂದೆ ಅಭ್ಯರ್ಥಿಗಳು “Position Details” ನಡಿ ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಯನ್ನು ಡ್ರಾಪ್-ಡೌನ್ ಬಾಕ್ಸ್‌ನ ಮೂಲಕ ಆಯ್ಕೆ ಮಾಡಿಕೊಳ್ಳಬೇಕು.

ಹಂತ 5: ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಮಾಹಿತಿಯನ್ನು ಉಳಿಸಲು “SUBMIT Form” ಬಟನ್ ಮೇಲೆ ಕ್ಲಿಕ್ ಮಾಡಿ. ಕೊನೆಯದಾಗಿ “Print” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.

ದಾಖಲಾತಿ ಪರಿಶೀಲನೆಯ ಸಮಯದಲ್ಲಿ ಅರ್ಜಿ ಸ್ವೀಕೃತಿ ಪ್ರತಿಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ.

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಕೆ ಲಿಂಕ್‌ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣhttps://www.rcfltd.com/
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment