ಸರ್ಕಾರದಿಂದ ‘ವರ್ಕ್‌-ಫ್ರಮ್-ಹೋಮ್‌ʼ ಹುದ್ದೆಗಳ ಭರ್ತಿ; ಸಂದರ್ಶನಕ್ಕೆ ಕರೆ

Published on:

ಬೆಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ) ವತಿಯಿಂದ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಹಾಗೂ ಕೆಎಎಸ್‌ಎಸ್‌ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಮನೆಯಿಂದಲೇ ಕೆಲಸ ಮಾಡುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕರು ತಿಳಿಸಿದ್ದಾರೆ.

ಎಬಿ-ಎಆರ್‌ಕೆ ಯೋಜನೆಯಡಿ ಕಾರ್ಯನಿರ್ವಾಹಕ ವೈದ್ಯರು(ಪ್ರಿಆಥರೈಸೇಶನ್/ಕ್ಲೈಮ್ಸ್/ಆಡಿಟ್) 14 ಹುದ್ದೆಗಳು ಹಾಗೂ ಕೆಎಎಸ್‌ಎಸ್‌ ಯೋಜನೆಯಡಿ ಕಾರ್ಯನಿರ್ವಾಹಕ ವೈದ್ಯರು(ಪ್ರಿಆಥರೈಸೇಶನ್/ಕ್ಲೈಮ್ಸ್) ಹಾಗೂ ಕ್ಲೈಮ್‌ ಕಾರ್ಯನಿರ್ವಾಹಕ 06 ಹುದ್ದೆಗಳಿಗೆ ಸಂದರ್ಶನದ ನಡೆಯಲಿದೆ.

ಪ್ರಮುಖ ದಿನಾಂಕಗಳು ಮತ್ತು ಸಂದರ್ಶನದ ವಿವರಗಳು:

  • ಅಧಿಸೂಚನೆ ಹೊರಡಿಸಿದ ದಿನಾಂಕ- ಸೆಪ್ಟೆಂಬರ್ 04
  • ನೇರ ಸಂದರ್ಶನ ನಡೆಯುವ ದಿನಾಂಕಗಳು–
    • ಸೆಪ್ಟೆಂಬರ್‌ 16 ರಂದು ಕಾರ್ಯನಿರ್ವಾಹಕ ವೈದ್ಯರು (ಎಬಿ-ಎಆರ್‌ಕೆ ಯೋಜನೆ) ಹುದ್ದೆಗಳಿಗೆ.
    • ಸೆಪ್ಟೆಂಬರ್‌ 17 ರಂದು ಕಾರ್ಯನಿರ್ವಾಹಕ ವೈದ್ಯರು (ಕೆಎಎಸ್‌ಎಸ್‌ ಯೋಜನೆ) ಮತ್ತು ಕ್ಲೈಮ್ಸ್ ಎಕ್ಸಿಕ್ಯೂಟಿವ್ ಹುದ್ದೆಗಳು.
  • ನೋಂದಣಿ ಸಮಯ: ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ಗಂಟೆಯೊಳಗೆ (12.30ರ ನಂತರ ನೋಂದಣಿಗೆ ಅವಕಾಶವಿರುವುದಿಲ್ಲ).
  • ಕಂಪ್ಯೂಟರ್ ಪರೀಕ್ಷೆ ಸಮಯ: ಬೆಳಿಗ್ಗೆ 10.45 ರಿಂದ ಮಧ್ಯಾಹ್ನ 01.30 ರವರೆಗೆ.
  • ಸಂದರ್ಶನದ ಸಮಯ: ಮಧ್ಯಾಹ್ನ 02.30 ರಿಂದ ಸಂಜೆ 05.30 ರವರೆಗೆ.
  • ಸಂದರ್ಶನ ನಡೆಯುವ ಸ್ಥಳ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೌಧ, 7ನೇ ಮಹಡಿ, ಮಾಗಡಿ ರಸ್ತೆ, ಬೆಂಗಳೂರು-560023.

ವೃಂದವಾರು ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಕಾರ್ಯನಿರ್ವಾಹಕ ವೈದ್ಯರು(ಪ್ರಿಆಥರೈಸೇಶನ್/ಕ್ಲೈಮ್ಸ್/ಆಡಿಟ್) ಹುದ್ದೆಗಳಿಗೆ

2ಎ ಪ್ರಕರಣಗಳಿಗೆ (4 ಹುದ್ದೆಗಳು); ಎಂಬಿಬಿಎಸ್ ಜೊತೆಗೆ ಪಿಜಿ ಮತ್ತು ಕಂಪ್ಯೂಟರ್ ಜ್ಞಾನ (2 ವರ್ಷದ ಅನುಭವ) ಅಥವಾ ಎಂಬಿಬಿಎಸ್ ಜೊತೆಗೆ ಕಂಪ್ಯೂಟರ್ ಜ್ಞಾನ (4 ವರ್ಷದ ಅನುಭವ) ಅಥವಾ ಬಿಡಿಎಸ್ ಜೊತೆಗೆ ಕಂಪ್ಯೂಟರ್ ಜ್ಞಾನ (3 ವರ್ಷದ ಅನುಭವ).

2ಬಿ ಪ್ರಕರಣಗಳಿಗೆ (10 ಹುದ್ದೆಗಳು); ಎಂಬಿಬಿಎಸ್ ಜೊತೆಗೆ ಕ್ಲಿನಿಕಲ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (1 ವರ್ಷದ ಅನುಭವ) ಅಥವಾ ಎಂಬಿಬಿಎಸ್ ಜೊತೆಗೆ ಪ್ರಿ ಮತ್ತು ಪ್ಯಾರಾ ಕ್ಲಿನಿಕಲ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (ಎಸ್‌ಎಎಸ್‌ಟಿ/ಯಾವುದೇ ವಿಮಾ ಕಂಪನಿಯಲ್ಲಿ ಕ್ಲೈಮ್ ಪ್ರೊಸೆಸಿಂಗ್‌ನಲ್ಲಿ 2 ವರ್ಷದ ಅನುಭವ) ಅಥವಾ ಎಂಬಿಬಿಎಸ್ ಜೊತೆಗೆ ಕಂಪ್ಯೂಟರ್ ಜ್ಞಾನ (5 ವರ್ಷದ ಒಟ್ಟು ಅನುಭವ ಮತ್ತು ಎಸ್‌ಎಸ್‌ಟಿ/ವಿಮಾ ಕಂಪನಿಯಲ್ಲಿ ಕ್ಲೈಮ್ ಪ್ರೊಸೆಸಿಂಗ್‌ನಲ್ಲಿ 2 ವರ್ಷದ ಅನುಭವ).

3ಎ ಮತ್ತು 4ಎ ಪ್ರಕರಣಗಳಿಗೆ; ಎಂಬಿಬಿಎಸ್ ಜೊತೆಗೆ ಕ್ಲಿನಿಕಲ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (2 ವರ್ಷದ ಅನುಭವ) ಅಥವಾ ಎಂಬಿಬಿಎಸ್ ಜೊತೆಗೆ ನಾನ್-ಕ್ಲಿನಿಕಲ್ ಸ್ಪೆಷಾಲಿಟಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (ಎಸ್‌ಎಎಸ್‌ಟಿ/ವಿಮಾ ಕಂಪನಿಯಲ್ಲಿ ಕ್ಲೈಮ್ ಪ್ರೊಸೆಸಿಂಗ್‌ನಲ್ಲಿ 3 ವರ್ಷದ ಒಟ್ಟು ಅನುಭವ ಮತ್ತು 2 ವರ್ಷದ ಸಮಾನ ಅನುಭವ).

ಆಂಕೊಲಾಜಿ (Oncology) ಪ್ರಕರಣಗಳಿಗೆ; ಎಂಬಿಬಿಎಸ್ ಜೊತೆಗೆ ಸ್ನಾತಕೋತ್ತರ ಪದವಿ(Oncology) ಮತ್ತು ಕಂಪ್ಯೂಟರ್ ಜ್ಞಾನ (3 ವರ್ಷದ ಕ್ಲಿನಿಕಲ್ ಅನುಭವ) ಅಥವಾ ಎಂಬಿಬಿಎಸ್ ಜೊತೆಗೆ ಸಂಬಂಧಿತ ಬ್ರಾಡ್ ಸ್ಪೆಷಾಲಿಟಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (ಎಸ್‌ಎಎಸ್‌ಟಿ/ವಿಮಾ ಕಂಪನಿಯಲ್ಲಿ ಕ್ಲೈಮ್ ಪ್ರೊಸೆಸಿಂಗ್‌ನಲ್ಲಿ 3 ವರ್ಷದ ಒಟ್ಟು ಅನುಭವ ಮತ್ತು 2 ವರ್ಷದ ಸಮಾನ ಅನುಭವ).

ಕಾರ್ಯನಿರ್ವಾಹಕ ವೈದ್ಯರು(ಪ್ರಿಆಥರೈಸೇಶನ್/ಕ್ಲೈಮ್ಸ್) (ಕೆಎಎಸ್‌ಎಸ್‌ ಯೋಜನೆ) ಹುದ್ದೆಗಳಿಗೆ

2ಎ ಪ್ರಕರಣಗಳಿಗೆ (2 ಹುದ್ದೆಗಳು); ಎಂಬಿಬಿಎಸ್ ಜೊತೆಗೆ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (2 ವರ್ಷದ ಅನುಭವ) ಅಥವಾ ಎಂಬಿಬಿಎಸ್ ಜೊತೆಗೆ ಕಂಪ್ಯೂಟರ್ ಜ್ಞಾನ (4 ವರ್ಷದ ಅನುಭವ) ಅಥವಾ ಬಿಡಿಎಸ್ ಜೊತೆಗೆ ಕಂಪ್ಯೂಟರ್ ಜ್ಞಾನ (3 ವರ್ಷದ ಅನುಭವ).

2ಬಿ ಪ್ರಕರಣಗಳಿಗೆ (7 ಹುದ್ದೆಗಳ ಪೈಕಿ); ಎಂಬಿಬಿಎಸ್ ಜೊತೆಗೆ ಕ್ಲಿನಿಕಲ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (1 ವರ್ಷದ ಅನುಭವ) ಅಥವಾ ಎಂಬಿಬಿಎಸ್ ಜೊತೆಗೆ ಪ್ರಿ ಮತ್ತು ಪ್ಯಾರಾ ಕ್ಲಿನಿಕಲ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (ಎಸ್‌ಎಎಸ್‌ಟಿ/ವಿಮಾ ಕಂಪನಿಯಲ್ಲಿ ಕ್ಲೈಮ್ ಪ್ರೊಸೆಸಿಂಗ್‌ನಲ್ಲಿ 2 ವರ್ಷದ ಅನುಭವ) ಅಥವಾ ಎಂಬಿಬಿಎಸ್ ಜೊತೆಗೆ ಕಂಪ್ಯೂಟರ್ ಜ್ಞಾನ (5 ವರ್ಷದ ಒಟ್ಟು ಅನುಭವ ಮತ್ತು ಎಸ್‌ಎಎಸ್‌ಟಿ/ವಿಮಾ ಕಂಪನಿಯಲ್ಲಿ ಕ್ಲೈಮ್ ಪ್ರೊಸೆಸಿಂಗ್‌ನಲ್ಲಿ 2 ವರ್ಷದ ಅನುಭವ).

3ಎ ಮತ್ತು 4ಎ ಪ್ರಕರಣಗಳಿಗೆ; ಎಂಬಿಬಿಎಸ್ ಜೊತೆಗೆ ಕ್ಲಿನಿಕಲ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (2 ವರ್ಷದ ಅನುಭವ) ಅಥವಾ ಎಂಬಿಬಿಎಸ್ ಜೊತೆಗೆ ನಾನ್-ಕ್ಲಿನಿಕಲ್ ಸ್ಪೆಷಾಲಿಟಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (SAST/ವಿಮಾ ಕಂಪನಿಯಲ್ಲಿ ಕ್ಲೈಮ್ ಪ್ರೊಸೆಸಿಂಗ್‌ನಲ್ಲಿ 3 ವರ್ಷದ ಒಟ್ಟು ಅನುಭವ ಮತ್ತು 2 ವರ್ಷದ ಸಮಾನ ಅನುಭವ).

ಆಂಕೊಲಾಜಿ (Oncology) ಪ್ರಕರಣಗಳಿಗೆ; ಎಂಬಿಬಿಎಸ್ ಜೊತೆಗೆ ಸ್ನಾತಕೋತ್ತರ ಪದವಿ(Oncology) ಮತ್ತು ಕಂಪ್ಯೂಟರ್ ಜ್ಞಾನ (3 ವರ್ಷದ ಕ್ಲಿನಿಕಲ್ ಅನುಭವ) ಅಥವಾ ಎಂಬಿಬಿಎಸ್ ಜೊತೆಗೆ ಸಂಬಂಧಿತ ಬ್ರಾಡ್ ಸ್ಪೆಷಾಲಿಟಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಜ್ಞಾನ (ಎಸ್‌ಎಎಸ್‌ಟಿ/ವಿಮಾ ಕಂಪನಿಯಲ್ಲಿ ಕ್ಲೈಮ್ ಪ್ರೊಸೆಸಿಂಗ್‌ನಲ್ಲಿ 3 ವರ್ಷದ ಒಟ್ಟು ಅನುಭವ ಮತ್ತು 2 ವರ್ಷದ ಸಮಾನ ಅನುಭವ).

ಕ್ಲೈಮ್‌ ಕಾರ್ಯನಿರ್ವಾಹಕ ಹುದ್ದೆಗೆ; ಬಿ.ಕಾಂ/ಬಿಬಿಎಂ(ಹಣಕಾಸು) ಪದವಿ ಹೊಂದಿರಬೇಕು ಮತ್ತು ಟ್ಯಾಲಿ ಸಾಫ್ಟ್‌ವೇರ್ ಬಳಕೆಯೊಂದಿಗೆ ಕನಿಷ್ಠ 4 ವರ್ಷಗಳ ಅನುಭವ ಹೊಂದಿರಬೇಕು.

ವಯೋಮಿತಿ:

ಕಾರ್ಯನಿರ್ವಾಹಕ ವೈದ್ಯರು ಹುದ್ದೆಗೆ ಗರಿಷ್ಠ 65 ವರ್ಷಗಳ ಒಳಗಿರಬೇಕು ಹಾಗೂ ಕ್ಲೈಮ್ಸ್ ಕಾರ್ಯನಿರ್ವಾಹಕ ಹುದ್ದೆಗಳಿಗೆ ಗರಿಷ್ಠ 55 ವರ್ಷಗಳ ಒಳಗಿರಬೇಕು.

ಆಯ್ಕೆ ಪ್ರಕ್ರಿಯೆ:

ನೇರ ಸಂದರ್ಶನ ಮತ್ತು ಕಂಪ್ಯೂಟರ್ ಪರೀಕ್ಷೆ: ಅಭ್ಯರ್ಥಿಗಳಿಗೆ ಸಂದರ್ಶನದ ದಿನದಂದೇ ಕಂಪ್ಯೂಟರ್ (ಲಿಖಿತ/ಪ್ರಾಯೋಗಿಕ) ಪರೀಕ್ಷೆಯನ್ನು ನಡೆಸಲಾಗುತ್ತದೆ.

ಕನಿಷ್ಠ ಅಂಕಗಳು ಕಡ್ಡಾಯ:- ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚಿನ (50% and above) ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಲಾಗುವುದು.

ಭಾಷಾ ಜ್ಞಾನ:- ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

ದಾಖಲಾತಿಗಳ ಪರಿಶೀಲನೆ

ಸಂಬಳ(ಕ್ಲೈಮ್‌ ಪ್ರೊಸೆಸಿಂಗ್‌ ಫೀ – ಪ್ರತಿ ಪ್ರಕರಣದ ಆಧಾರದ ಮೇಲೆ):

ಈ ಹುದ್ದೆಗಳು ‘Case to case’ ಆಧಾರದ ಮೇಲಿರುವುದರಿಂದ, ಸಂಭಾವನೆಯನ್ನು ಪ್ರತಿ ಪ್ರಕರಣದ ಪ್ರೊಸೆಸಿಂಗ್ ಶುಲ್ಕದ ರೂಪದಲ್ಲಿ ನೀಡಲಾಗುತ್ತದೆ:

  • 2ಎ ಪ್ರಕರಣಗಳ ವೈದ್ಯರಿಗೆ ಪ್ರತಿ ಪ್ರಕರಣಕ್ಕೆ ರೂ.18/-.
  • 2ಬಿ, 3ಎ ಮತ್ತು 4ಎ ಪ್ರಕರಣಗಳ ವೈದ್ಯರಿಗೆ 700 ಪ್ರಕರಣಗಳವರೆಗೆ ಪ್ರತಿ ಪ್ರಕರಣಕ್ಕೆ ರೂ.70/- ಮತ್ತು 701ನೇ ಪ್ರಕರಣದಿಂದ ಪ್ರತಿ ಪ್ರಕರಣಕ್ಕೆ ರೂ.100/-.
  • ಆಂಕೊಲಾಜಿ ಪ್ರಕರಣಗಳ ವೈದ್ಯರಿಗೆ 700 ಪ್ರಕರಣಗಳವರೆಗೆ ಪ್ರತಿ ಪ್ರಕರಣಕ್ಕೆ ರೂ.100/- ಮತ್ತು 701ನೇ ಪ್ರಕರಣದಿಂದ ಪ್ರತಿ ಪ್ರಕರಣಕ್ಕೆ ರೂ.125/-.
  • ಕ್ಲೈಮ್ಸ್ ಕಾರ್ಯನಿರ್ವಾಹಕ ಹುದ್ದೆಗಳಿಗೆ:
    • 2ಎ ಪ್ರಕರಣಗಳಿಗೆ ಪ್ರತಿ ಪ್ರಕರಣಕ್ಕೆ ರೂ.7/-.
    • 2ಬಿ, 3ಎ ಮತ್ತು 4ಎ ಪ್ರಕರಣಗಳಿಗೆ ಪ್ರತಿ ಪ್ರಕರಣಕ್ಕೆ ರೂ.12/-.

ಅರ್ಜಿ ಶುಲ್ಕ:

ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಿರುತ್ತದೆ.

ಅಭ್ಯರ್ಥಿಗಳು ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ನಮೂನೆಗಾಗಿ ಇಲಾಖೆಯ ಅಧಿಕೃತ ವೆಬ್‌ಸೈಟ್ https://sast.karnataka.gov.in/sast/ಗೆ ಭೇಟಿ ನೀಡಬಹುದು. ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ಸಂಬಂಧಪಟ್ಟ ದಾಖಲೆಗಳ ನಕಲು ಪ್ರತಿಗಳ ಜೊತೆಗೆ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡುಬರಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಮುಖ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಅರ್ಜಿ ನಮೂನೆ ಪಿಡಿಎಫ್ ಲಿಂಕ್ಡೌನ್ಲೋಡ್‌ ಮಾಡಿ
ಅಧಿಕೃತ ಜಾಲತಾಣhttps://sast.karnataka.gov.in/
ಮತ್ತಷ್ಟು ಸುದ್ದಿಗಾಗಿಕರ್ನಾಟಕ ಹೆಲ್ಪ್‌.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

5 thoughts on “ಸರ್ಕಾರದಿಂದ ‘ವರ್ಕ್‌-ಫ್ರಮ್-ಹೋಮ್‌ʼ ಹುದ್ದೆಗಳ ಭರ್ತಿ; ಸಂದರ್ಶನಕ್ಕೆ ಕರೆ”

Leave a Comment