ಕೆಇಎ ಮುಂಬರುವ ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆ

Published on:

Updated On:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ನೇ ಸಾಲಿನಲ್ಲಿ ನಡೆಸಲಿರುವ ವಿವಿಧ ಇಲಾಖೆಗಳ ಮುಂಬರುವ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಈ ಕೆಳಗಿನ ದಿನಾಂಕಗಳಂದು ಪರೀಕ್ಷೆಗಳು ನಡೆಯಲಿವೆ:

ಕಡ್ಡಾಯ ಕನ್ನಡ ಪರೀಕ್ಷೆ(ವಿವಿಧ ಇಲಾಖೆಗಳು): 22.08.2026 ರಂದು (ಆರ್‌ಪಿಸಿ) ಮತ್ತು (ಕೆಕೆ) ಮಧ್ಯಾಹ್ನ 03.00 ರಿಂದ 05.00 ರವರೆಗೆ ನಡೆಯಲಿದೆ.

ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್(CAR/DAR): 06.09.2026 ರಂದು ಪರೀಕ್ಷೆ ನಡೆಯಲಿದ್ದು, ಆರ್‌ಪಿಸಿ ಅಭ್ಯರ್ಥಿಗಳಿಗೆ ಬೆಳಿಗ್ಗೆ 10.30 ರಿಂದ 12.00 ರವರೆಗೆ ಹಾಗೂ ಕೆಕೆ ಅಭ್ಯರ್ಥಿಗಳಿಗೆ ಮಧ್ಯಾಹ್ನ 3.00 ರಿಂದ 4.30 ರವರೆಗೆ ಪರೀಕ್ಷೆ ಇರಲಿದೆ.

ಪೊಲೀಸ್ ಕಾನ್ಸ್ಟೇಬಲ್(KSRP/IRB/KSISF): 20.09.2026 ರಂದು ಪರೀಕ್ಷೆ ನಿಗದಿಯಾಗಿದೆ. RPC ಅಭ್ಯರ್ಥಿಗಳಿಗೆ ಬೆಳಿಗ್ಗೆ 10.30 ರಿಂದ 12.00 ರವರೆಗೆ ಮತ್ತು KK ಅಭ್ಯರ್ಥಿಗಳಿಗೆ ಮಧ್ಯಾಹ್ನ 3.00 ರಿಂದ 4.30 ರವರೆಗೆ ಪರೀಕ್ಷೆ ನಡೆಯಲಿದೆ.

ಭೂಮಾಪಕರು(ಸರ್ವೆ, ಸೆಟಲ್ಮೆಂಟ್ ಮತ್ತು ಭೂ ದಾಖಲೆಗಳ ಇಲಾಖೆ): ಆರ್‌ಪಿಸಿ ಅಭ್ಯರ್ಥಿಗಳಿಗೆ: 04.10.2026 (ಪತ್ರಿಕೆ-1) ಮತ್ತು 03.10.2026 (ಪತ್ರಿಕೆ-2). ಕೆಕೆ ಅಭ್ಯರ್ಥಿಗಳಿಗೆ: 25.10.2026 (ಪತ್ರಿಕೆ-1) ಮತ್ತು 24.10.2026 (ಪತ್ರಿಕೆ-2). ಪರೀಕ್ಷಾ ಸಮಯ: ಪತ್ರಿಕೆ-1 ಬೆಳಿಗ್ಗೆ 10.30 ರಿಂದ 12.30 ರವರೆಗೆ ಹಾಗೂ ಪತ್ರಿಕೆ-2 ಮಧ್ಯಾಹ್ನ 3.00 ರಿಂದ 5.00 ರವರೆಗೆ ಇರಲಿದೆ.

ಗ್ರಾಮ ಆಡಳಿತ ಅಧಿಕಾರಿ(VAO) (ಕಂದಾಯ ಇಲಾಖೆ): ಆರ್‌ಪಿಸಿ ಅಭ್ಯರ್ಥಿಗಳಿಗೆ 27.09.2026 ರಂದು ಮತ್ತು ಕೆಕೆ ಅಭ್ಯರ್ಥಿಗಳಿಗೆ 26.09.2026 ರಂದು ಪರೀಕ್ಷೆ ನಡೆಯಲಿದೆ. ಪತ್ರಿಕೆ-1 ಬೆಳಿಗ್ಗೆ 10.30 ರಿಂದ 12.30 ರವರೆಗೆ ಹಾಗೂ ಪತ್ರಿಕೆ-2 ಮಧ್ಯಾಹ್ನ 3.00 ರಿಂದ 5.00 ರವರೆಗೆ ನಡೆಯಲಿದೆ.

ಸಹಾಯಕ ತೋಟಗಾರಿಕೆ ಅಧಿಕಾರಿ/ಸಹಾಯಕ ತೋಟಗಾರಿಕೆ ನಿರ್ದೇಶಕರು(ತೋಟಗಾರಿಕೆ ಇಲಾಖೆ): 11.10.2026 ರಂದು ಪರೀಕ್ಷೆ ನಡೆಯಲಿದ್ದು, ಪತ್ರಿಕೆ-1 ಬೆಳಿಗ್ಗೆ 10.30 ರಿಂದ 12.30 ರವರೆಗೆ ಹಾಗೂ ಪತ್ರಿಕೆ-2 ಮಧ್ಯಾಹ್ನ 2.30 ರಿಂದ 4.30 ರವರೆಗೆ ಇರಲಿದೆ.

ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET): 21.11.2026 (ಕೆಕೆ) ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ನಡೆಯಲಿದೆ.

ಫಾರ್ಮಸಿ ಅಧಿಕಾರಿ ಮತ್ತು ನರ್ಸಿಂಗ್ ಅಧಿಕಾರಿ(ನೌಕರರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆ): 22.11.2026 (RPC) ರಂದು ಪರೀಕ್ಷೆ ನಡೆಯಲಿದ್ದು, ಪತ್ರಿಕೆ-1 ಬೆಳಿಗ್ಗೆ 10.30 ರಿಂದ 12.30 ರವರೆಗೆ ಹಾಗೂ ಪತ್ರಿಕೆ-2 ಮಧ್ಯಾಹ್ನ 2.30 ರಿಂದ 4.30 ರವರೆಗೆ ಇರಲಿದೆ.

ಶುಶ್ರೂಷಕರು(KREIS): 21.11.2026 (ಕೆಕೆ) ರಂದು ಪರೀಕ್ಷೆ ನಡೆಯಲಿದ್ದು, ಪತ್ರಿಕೆ-1 ಬೆಳಿಗ್ಗೆ 10.30 ರಿಂದ 12.30 ರವರೆಗೆ ಹಾಗೂ ಪತ್ರಿಕೆ-2 ಮಧ್ಯಾಹ್ನ 2.30 ರಿಂದ 4.30 ರವರೆಗೆ ಇರಲಿದೆ.

ವಿವಿಧ ಶಿಕ್ಷಕರ ಹುದ್ದೆಗಳು(KREIS): ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಕಂಪ್ಯೂಟರ್, ದೈಹಿಕ ಶಿಕ್ಷಣ, ಪದವಿ ಚಿತ್ರಕಲೆ ಮತ್ತು ಡಿಪ್ಲೊಮಾ ಚಿತ್ರಕಲೆ ಶಿಕ್ಷಕರ ಹುದ್ದೆಗಳಿಗೆ 28.11.2026 (ಕೆಕೆ) ಮತ್ತು 29.11.2026 (ಆರ್‌ಪಿಸಿ) ರಂದು ಪರೀಕ್ಷೆಗಳು ನಡೆಯಲಿವೆ. ಪತ್ರಿಕೆ-1 ಬೆಳಿಗ್ಗೆ 10.30 ರಿಂದ 12.30 ರವರೆಗೆ ಹಾಗೂ ಪತ್ರಿಕೆ-2 ಮಧ್ಯಾಹ್ನ 2.30 ರಿಂದ 4.30 ರವರೆಗೆ ಇರಲಿದೆ.

ಪ್ರಮುಖ ಲಿಂಕ್‌ಗಳು

ಕೆಇಎ ಮುಂಬರುವ ಪರೀಕ್ಷೆಗಳ ವೇಳಾಪಟ್ಟಿ (KEA Upcoming Exams Schedule 2026 PDF)Download
ಅಧಿಕೃತ ಜಾಲತಾಣkea.kar.nic.in
ಮತ್ತಷ್ಟು ಮಾಹಿತಿಗಾಗಿKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

1 thought on “ಕೆಇಎ ಮುಂಬರುವ ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆ”

Leave a Comment