ಇಂಡಿಯನ್ ಆಯಿಲ್ ಕಾರ್ಪೊರೇಷನ್(IOCL)ನಲ್ಲಿ ಎಕ್ಸಿಕ್ಯೂಟಿವ್ ಉದ್ಯೋಗಾವಕಾಶ

ಸೆ.03ರೊಳಗೆ ಅರ್ಜಿ ಸಲ್ಲಿಸಿ

Published on:

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(IOCL) ಖಾಲಿ ಇರುವ ವಿವಿಧ ಕಾರ್ಯನಿರ್ವಾಹಕ(ಎಕ್ಸಿಕ್ಯೂಟಿವ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

420 ಪ್ರಸ್ತುತ ಹುದ್ದೆಗಳು ಮತ್ತು 50 ವಿಕಲಚೇತನರಿಗೆ ಮೀಸಲಾಗಿದ್ದ ಬ್ಯಾಕ್‌ಲಾಗ್/ಇತರ ಹುದ್ದೆಗಳು ಸೇರಿದಂತೆ ಒಟ್ಟು 470 ಹುದ್ದೆಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯ(ಸಿಬಿಟಿ) ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಿತ ವಿಷಯದಲ್ಲಿ ಬಿ,ಟೆಕ್/ಬಿಇ/ಎಂಬಿಎ/ಡಿಪ್ಲೊಮಾ ಅಥವಾ ಕಾನೂನು ಪದವಿ ಹೊಂದಿರುವ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಜಾಲತಾಣ https://iocl.com/latest-job-openingದಲ್ಲಿ ಲಭ್ಯವಿರುವ ಲಿಂಕ್(https://ibpsreg.ibps.in/iocljun26/) ಮೂಲಕ ಸೆ.03ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಆಧಾರಿತವಾಗಿ ಹುದ್ದೆಗಳ ಸಂಖ್ಯೆಗಳ ಮಾಹಿತಿಯನ್ನೊಳಗೊಂಡ ಪಿಡಿಎಫ್‌ ಅನ್ನು ಸುದ್ದಿಯಲ್ಲಿ ಕೊನೆಯಲ್ಲಿ ಪ್ರಮುಖ ಲಿಂಕ್ಸ್‌ನಡಿ ಲಗತ್ತಿಸಲಾಗಿದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಆಗಸ್ಟ್‌ 14
  • ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- ಸೆಪ್ಟೆಂಬರ್‌ 03 (ಸಂಜೆ 17:00 ಗಂಟೆಯವರೆಗೆ)
  • ಪ್ರವೇಶ ಪತ್ರ(Admit Card) ಬಿಡುಗಡೆ ದಿನಾಂಕ- ಸೆಪ್ಟೆಂಬರ್‌ 15
  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯುವ ದಿನಾಂಕ- ಸೆಪ್ಟೆಂಬರ್ 24

ಶೈಕ್ಷಣಿಕ ಅರ್ಹತೆ:

ಗ್ರಾಜುಯೇಟ್ ಇಂಜಿನಿಯರ್ (ಗ್ರೇಡ್ ‘ಎ’): ಸಂಬಂಧಪಟ್ಟ ವಿಭಾಗದಲ್ಲಿ (ಕೆಮಿಕಲ್‌, ಸಿವಿಲ್‌, ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಶನ್, ಇನ್ಸ್ಟ್ರುಮೆಂಟೇಶನ್‌, ಮೆಕ್ಯಾನಿಕಲ್) ಬಿ,ಟೆಕ್/ಬಿಇ ಅಥವಾ ತತ್ಸಮಾನ ಪದವಿ. ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ ಶೇ.65 ಮತ್ತು ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಕನಿಷ್ಠ ಶೇ.55 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.

ಆಫೀಸರ್ – ಮಾರ್ಕೆಟಿಂಗ್ (ಗ್ರೇಡ್ ‘ಎ’): ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಸ್ಪೆಷಲೈಸೇಶನ್‌ನೊಂದಿಗೆ ಎಂಬಿಎ(MBA) ಅಥವಾ ಪಿಜಿಡಿಬಿಎ(PGDBA) ಪದವಿ. ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ 60% ಮತ್ತು ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳು ಕಡ್ಡಾಯ.

ಆಫೀಸರ್-ಲಾ (ಗ್ರೇಡ್ ‘ಎ’): ಯಾವುದೇ ಪದವಿಯ ನಂತರ ಎಲ್‌ಎಲ್‌ಬಿ(LLB) ಅಥವಾ 5 ವರ್ಷಗಳ ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಪದವಿ(ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದಿರಬೇಕು). ಸಾಮಾನ್ಯ/ಇಡಬ್ಲೂಎಸ್‌/ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ 60% ಮತ್ತು ಎಸ್ಸಿ/ಎಸ್ಟಿ/ಪಿಡಬ್ಲೂಬಿಡಿ ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳು ಕಡ್ಡಾಯ. ಜೊತೆಗೆ ಕನಿಷ್ಠ 2 ವರ್ಷಗಳ ವೃತ್ತಿಪರ ಅನುಭವ ಇರಬೇಕು.

ಅಸಿಸ್ಟೆಂಟ್ ಕ್ವಾಲಿಟಿ ಕಂಟ್ರೋಲ್ ಆಫೀಸರ್(ಗ್ರೇಡ್ ‘ಎ0’) ಹುದ್ದೆಗೆ; ಕೆಮಿಸ್ಟ್ರಿ/ಅಪ್ಲೈಡ್ ಕೆಮಿಸ್ಟ್ರಿ/ಇಂಡಸ್ಟ್ರಿಯಲ್ ಕೆಮಿಸ್ಟ್ರಿ ಇತ್ಯಾದಿ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ(Master’s Degree). ಸಾಮಾನ್ಯ/ಇಡಬ್ಲೂಎಸ್/ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ 60% ಮತ್ತು ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳು ಕಡ್ಡಾಯ. ಜೊತೆಗೆ ಕನಿಷ್ಠ 2 ವರ್ಷಗಳ ಸಂಬಂಧಿತ ಅನುಭವ ಇರಬೇಕು.

ಡಿಪ್ಲೊಮಾ ಇಂಜಿನಿಯರ್(ಗ್ರೇಡ್ ‘ಇ0’) ಹುದ್ದೆಗೆ; ಸಂಬಂಧಪಟ್ಟ ವಿಭಾಗದಲ್ಲಿ (ಎಲೆಕ್ಟ್ರಿಕಲ್, ಮೆಕ್ಯಾನಿಕಲ್,‌ ಸೆಫ್ಟಿ) 3 ವರ್ಷಗಳ ಇಂಜಿನಿಯರಿಂಗ್ ಡಿಪ್ಲೊಮಾ. ಸಾಮಾನ್ಯ/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ 65% ಮತ್ತು ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳು ಕಡ್ಡಾಯ

ವಯಸ್ಸಿನ ಮಿತಿ:

01 ಜುಲೈ 2026 ಕ್ಕೆ ಅನ್ವಯಿಸುವಂತೆ ಸಾಮಾನ್ಯ (General) ಮತ್ತು EWS ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಕೆಳಗಿನಂತಿದೆ:

  • ಗ್ರಾಜುಯೇಟ್ ಇಂಜಿನಿಯರ್ (ಗ್ರೇಡ್ A) ಹುದ್ದೆಗೆ 26 ವರ್ಷಗಳು
  • ಡಿಪ್ಲೊಮಾ ಇಂಜಿನಿಯರ್ (ಗ್ರೇಡ್ E0) ಹುದ್ದೆಗೆ 26 ವರ್ಷಗಳು
  • ಆಫೀಸರ್ – ಮಾರ್ಕೆಟಿಂಗ್ (ಗ್ರೇಡ್ A) ಹುದ್ದೆಗೆ 28 ವರ್ಷಗಳು
  • ಲಾ ಆಫೀಸರ್ (ಗ್ರೇಡ್ A) ಹುದ್ದೆಗೆ 30 ವರ್ಷಗಳು
  • ಅಸಿಸ್ಟೆಂಟ್ ಕ್ವಾಲಿಟಿ ಕಂಟ್ರೋಲ್ ಆಫೀಸರ್ (ಗ್ರೇಡ್ A0) ಹುದ್ದೆಗೆ 30 ವರ್ಷಗಳು

(ಗಮನಿಸಿ: OBC (NCL), SC, ST ಮತ್ತು PwBD ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ).

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ)
  • ಗುಂಪು ಚರ್ಚೆ(ಜಿಡಿ) ಮತ್ತು ಗುಂಪು ಕಾರ್ಯ(ಜಿಟಿ)
  • ವೈಯಕ್ತಿಕ ಸಂದರ್ಶನ(ಪಿಐ)
  • ಅಂತಿಮ ಮೆರಿಟ್ ಪಟ್ಟಿ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಮೂಲ ವೇತನ ಮತ್ತು ವಾರ್ಷಿಕ ಅಂದಾಜು ಸಿಟಿಸಿ(CTC) ವಿವರಗಳು ಈ ಕೆಳಗಿನಂತಿವೆ:

  • ಗ್ರೇಡ್ A: ಮೂಲ ವೇತನ ₹50,000/- (ವೇತನ ಶ್ರೇಣಿ ₹50,000 ರಿಂದ1,60,000/-). ವಾರ್ಷಿಕ ಅಂದಾಜು ಸಿಟಿಸಿ ಸುಮಾರು ₹18.4 ಲಕ್ಷಗಳು.
  • ಗ್ರೇಡ್ A0: ಮೂಲ ವೇತನ ₹40,000/- (ವೇತನ ಶ್ರೇಣಿ: ₹40,000 ರಿಂದ 1,40,000/-). ವಾರ್ಷಿಕ ಅಂದಾಜು ಸಿಟಿಸಿ ಸುಮಾರು ₹14.8 ಲಕ್ಷಗಳು.
  • ಗ್ರೇಡ್ E0: ಮೂಲ ವೇತನ ₹30,000/- (ವೇತನ ಶ್ರೇಣಿ: ₹30,000 ರಿಂದ 1,20,000/-). ವಾರ್ಷಿಕ ಅಂದಾಜು ಸಿಟಿಸಿ ಸುಮಾರು ₹11.1 ಲಕ್ಷಗಳು.

ಮೂಲ ವೇತನದ ಜೊತೆಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ವೈದ್ಯಕೀಯ ಸೌಲಭ್ಯಗಳು, ಗ್ರಾಚ್ಯುಟಿ, ಪ್ರಾವಿಡೆಂಟ್ ಫಂಡ್ ಮತ್ತು ಇತರ ಸೌಲಭ್ಯಗಳು ಸಂಸ್ಥೆಯ ನಿಯಮಾವಳಿಗಳ ಪ್ರಕಾರ ದೊರೆಯಲಿವೆ.

ಅರ್ಜಿ ಶುಲ್ಕ:

  • ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ (ಯಾವುದೇ ಶುಲ್ಕವಿಲ್ಲ).
  • ಇತರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ₹1000/-

ಅರ್ಜಿ ಸಲ್ಲಿಕೆ ಹೇಗೆ.?

ಹಂತ-1 ಅಧಿಕೃತ ಜಾಲತಾಣ https://iocl.com/latest-job-openingದಲ್ಲಿ‌ ವಿಭಾಗದಲ್ಲಿ ಲಭ್ಯವಿರುವ ಲಿಂಕ್ಗೆ(https://ibpsreg.ibps.in/iocljun26/) ಭೇಟಿ ನೀಡಿ.

ಹಂತ-2 ನಂತರ ಹೊಸ ಬಳಕೆದಾರರಾಗಿ ನೋಂದಣಿಯಾಗಿ.

Iocl Various Executive Notification 2026
ಆನ್‌ಲೈನ್‌ ಅರ್ಜಿ ನಮೂನೆ

ಹಂತ-3 ತದನಂತರ ಅರ್ಜಿ ನಮೂನೆಯಲ್ಲಿ ಕೇಳಲಾದ ಮಾಹಿತಿಯನ್ನು ತುಂಬಿ ಹಾಗೂ ಕೇಳಲಾದ ದಾಖಲೆಗಳನ್ನು ಅಪ್ಲೋಡ್‌ ಮಾಡಿ, ಕೊನೆಗೆ ತಮಗೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

Important Direct Links:

Official Notification PDFDownload
Vacancy Details PDFDownload
Online Application Form LinkApply Now
Official Websiteiocl.com
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

2 thoughts on “ಇಂಡಿಯನ್ ಆಯಿಲ್ ಕಾರ್ಪೊರೇಷನ್(IOCL)ನಲ್ಲಿ ಎಕ್ಸಿಕ್ಯೂಟಿವ್ ಉದ್ಯೋಗಾವಕಾಶ”

Leave a Comment