ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು(ಎನ್‌ಟಿಎ) ಜೂ.22 ರಿಂದ 30ರವರೆಗೆ ನಡೆಸಿದ 2026ನೇ ಸಾಲಿನ ಯುಜಿಸಿ-ನೆಟ್ ಜೂನ್ ಮಾಹೆ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ಭಾನುವಾರ(ಆ.16) ಪ್ರಕಟಿಸಿದ್ದು, ಆಕ್ಷೇಪಣೆಗೆ ಕಾಲಾವಕಾಶ ನೀಡಿದೆ.
ಒಟ್ಟು 87 ವಿಷಯಗಳ ಪೈಕಿ ಸದ್ಯ 84 ವಿಷಯಗಳಿಗೆ ತಾತ್ಕಾಲಿಕ ಕೀ ಉತ್ತರಗಳನ್ನು ಅಧಿಕೃತ ಜಾಲತಾಣ https://ugcnet.nta.nic.in/ದಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರಕಟಿತ ಕೀ ಉತ್ತರಗಳಿಗೆ ಪ್ರತಿ ಪ್ರಶ್ನೆಗೆ ₹200 ಪಾವತಿಸುವ ಮೂಲಕ ಆ.18 (ರಾತ್ರಿ 11:59 ರವರೆಗೆ)ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಉಳಿದ ಮೂರು ವಿಷಯಗಳಾದ ಇಂಗ್ಲಿಷ್, ಕಾಮರ್ಸ್ ಮತ್ತು ಸೋಷಿಯಾಲಜಿ ಪ್ರಶ್ನೆಪತ್ರಿಕೆಗಳಲ್ಲಿನ ದೋಷಗಳ ಕುರಿತು ಬಂದ ದೂರುಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ.
ಸಂಸ್ಕರಣಾ ಶುಲ್ಕ ಮರುಪಾವತಿ: ಒಂದು ವೇಳೆ ಅಭ್ಯರ್ಥಿ ಸಲ್ಲಿಸಿದ ಆಕ್ಷೇಪಣೆಯನ್ನು ವಿಷಯ ತಜ್ಞರು ಒಪ್ಪಿಕೊಂಡರೆ, ಆ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿ(Refund) ಮಾಡಲಾಗುವುದು ಎಂದು ಎನ್‌ಟಿಎ ತಿಳಿಸಿದೆ.
ಕೀ ಉತ್ತರ ಪರಿಶೀಲನೆ ಹೇಗೆ?
ಹಂತ-1 ಎನ್‌ಟಿಎ ಯುಜಿ ನೀಟ್ ಅಧಿಕೃತ ಜಾಲತಾಣ https://ugcnet.nta.nic.in/ ಕ್ಕೆ ಭೇಟಿ ನೀಡಿ.
ಹಂತ-2 ಮುಖಪುಟದ “Candidate Activity“ಎಂಬ ಶೀರ್ಷಿಕೆಯಡಿ ನೀಡಲಾದ “Challenge of Provisional Answer Keys for UGC-NET June 2026” ಲಿಂಕ್ ಕ್ಲಿಕ್ಕಿಸಿ.
ಹಂತ-3 ಈಗ ಹೊಸಪುಟವೊಂದು ತೆರೆದುಕೊಳ್ಳುತ್ತದೆ. ಅಭ್ಯರ್ಥಿಗಳು ಅಲ್ಲಿ ತಮ್ಮ ಅಪ್ಲಿಕೇಶನ್ ನಂಬರ್(Application No) ಮತ್ತು ಪಾಸ್‌ವರ್ಡ್(Password) ಹಾಗೂ ತಪ್ಪದೇ ಸರಿಯಾಗಿ ಕ್ಯಾಪ್ಚಾ(CAPTCHA) ಹಾಕಿ. ಲಾಗಿನ್ ಬಟನ್ ಕ್ಲಿಕ್ಕಿಸಿ.
ಹಂತ-4 ನಂತರ “Click To View/Challenge Answer Key” ಎಂಬ ಶೀರ್ಷಿಕೆ ಲಿಂಕ್ ಮೇಲೆ ಕ್ಲಿಕ್ಕಿಸಿ ತಮ್ಮ ಕೀ ಉತ್ತರಗಳನ್ನು ವೀಕ್ಷಣೆ ಮಾಡಬಹುದು.
ಪ್ರಮುಖ ಲಿಂಕ್‌ಗಳು:
| ನೋಟಿಸ್ ಪಿಡಿಎಫ್ | ಡೌನ್ಲೋಡ್ ಮಾಡಿ |
| ಯುಜಿಸಿ-ನೆಟ್ ಜೂನ್ 2026: ತಾತ್ಕಾಲಿಕ ಕೀ ಉತ್ತರಗಳ ಚೆಕ್ ಮಾಡುವ ಲಿಂಕ್ | ಚೆಕ್ ಮಾಡಿ |
| ಅಧಿಕೃತ ಜಾಲತಾಣ | ugcnet.nta.nic.in |
| ಹೆಚ್ಚಿನ ಮಾಹಿತಿಗಾಗಿ | KarnatakaHelp.in |
Sagar