ಅರಣ್ಯ ಇಲಾಖೆ: ಗಸ್ತು ಅರಣ್ಯ ಪಾಲಕ ಹುದ್ದೆಗಳ ಭರ್ತಿ

ಪಿಯುಸಿ ಅರ್ಹತೆ

Published on:

ಬೆಂಗಳೂರು: ರಾಜ್ಯ ಅರಣ್ಯ ಇಲಾಖೆಯು ನಾನಾ ವೃತ್ತದ ವಿಭಾಗದಲ್ಲಿ ಖಾಲಿ ಇರುವ ಗ್ರೂಪ್ ‘ಸಿ’ ಗಸ್ತು ಅರಣ್ಯ ಪಾಲಕ (ಅರಣ್ಯ ರಕ್ಷಕ) ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.

ಒಟ್ಟು 355 (320 ಹೊಸ ಹುದ್ದೆ, 35 ಹಿಂಬಾಕಿ ಹುದ್ದೆ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ- ನವೆಂಬರ್‌ 23
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಡಿಸೆಂಬರ್‌ 22
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಡಿಸೆಂಬರ್ 23

ವೃತ್ತವಾರು/ವಿಭಾಗವಾರು ಹುದ್ದೆಗಳ ಸಂಖ್ಯೆ:

ವೃತ್ತ (Circle)ವಿಭಾಗ (Division)ಉಳಿಕೆ ಮೂಲ ವೃಂದ (RPC) ಹುದ್ದೆಗಳುಹಿಂಬಾಕಿ (Backlog) ಹುದ್ದೆಗಳು
ಬೆಂಗಳೂರು ವೃತ್ತಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ವಿಭಾಗ2–
ರಾಮನಗರ ಪ್ರಾದೇಶಿಕ ವಿಭಾಗ5–
ಕೋಲಾರ ಪ್ರಾದೇಶಿಕ ವಿಭಾಗ2–
ಚಿಕ್ಕಬಳ್ಳಾಪುರ ಪ್ರಾದೇಶಿಕ ವಿಭಾಗ2–
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ65
ಕನಕಪುರ ವನ್ಯಜೀವಿ ಉಪ ವಿಭಾಗ3–
ವೃತ್ತದ ಒಟ್ಟು205
ಬಳ್ಳಾರಿ ವೃತ್ತಚಿತ್ರದುರ್ಗ ಪ್ರಾದೇಶಿಕ ವಿಭಾಗ–1
ವೃತ್ತದ ಒಟ್ಟು01
ಚಾಮರಾಜನಗರ ವೃತ್ತಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ441
ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ121
ಚಾಮರಾಜನಗರ ಪ್ರಾದೇಶಿಕ ವಿಭಾಗ3–
ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ9–
ಮಲೈ ಮಹದೇಶ್ವರ ವನ್ಯಜೀವಿ ವಿಭಾಗ, ಕೊಳ್ಳೇಗಾಲ101
ವೃತ್ತದ ಒಟ್ಟು753
ಚಿಕ್ಕಮಗಳೂರು ವೃತ್ತಭದ್ರಾ ಹುಲಿ ಸಂರಕ್ಷಿತ ಪ್ರದೇಶ122
ಚಿಕ್ಕಮಗಳೂರು ಪ್ರಾದೇಶಿಕ ವಿಭಾಗ7–
ಕೊಪ್ಪ ಪ್ರಾದೇಶಿಕ ವಿಭಾಗ8–
ವೃತ್ತದ ಒಟ್ಟು272
ಧಾರವಾಡ ವೃತ್ತಧಾರವಾಡ ಪ್ರಾದೇಶಿಕ ವಿಭಾಗ2–
ಹಾವೇರಿ ಪ್ರಾದೇಶಿಕ ವಿಭಾಗ1–
ವೃತ್ತದ ಒಟ್ಟು30
ಹಾಸನ ವೃತ್ತಹಾಸನ ಪ್ರಾದೇಶಿಕ ವಿಭಾಗ12–
ತುಮಕೂರು ಪ್ರಾದೇಶಿಕ ವಿಭಾಗ6–
ವೃತ್ತದ ಒಟ್ಟು180
ಕೆನರಾ ವೃತ್ತಹೊನ್ನಾವರ ಪ್ರಾದೇಶಿಕ ವಿಭಾಗ41
ಕಾಳಿ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಲಿ1910
ಕಾರವಾರ ಪ್ರಾದೇಶಿಕ ವಿಭಾಗ4–
ಶಿರಸಿ ಪ್ರಾದೇಶಿಕ ವಿಭಾಗ31
ಯಲ್ಲಾಪುರ ಪ್ರಾದೇಶಿಕ ವಿಭಾಗ3–
ವೃತ್ತದ ಒಟ್ಟು3312
ಕೊಡಗು ವೃತ್ತಮಡಿಕೇರಿ ಪ್ರಾದೇಶಿಕ ವಿಭಾಗ11–
ಮಡಿಕೇರಿ ವನ್ಯಜೀವಿ ವಿಭಾಗ91
ವಿರಾಜಪೇಟೆ ಪ್ರಾದೇಶಿಕ ವಿಭಾಗ6–
ವೃತ್ತದ ಒಟ್ಟು261
ಮಂಗಳೂರು ವೃತ್ತಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ141
ಕುಂದಾಪುರ ಪ್ರಾದೇಶಿಕ ವಿಭಾಗ51
ಮಂಗಳೂರು ಪ್ರಾದೇಶಿಕ ವಿಭಾಗ132
ವೃತ್ತದ ಒಟ್ಟು324
ಮೈಸೂರು ವೃತ್ತರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ, ಹುಣಸೂರು281
ವೃತ್ತದ ಒಟ್ಟು281
ಶಿವಮೊಗ್ಗ ವೃತ್ತಭದ್ರಾವತಿ ಪ್ರಾದೇಶಿಕ ವಿಭಾಗ121
ಸಾಗರ ಪ್ರಾದೇಶಿಕ ವಿಭಾಗ221
ಶಿವಮೊಗ್ಗ ಪ್ರಾದೇಶಿಕ ವಿಭಾಗ14–
ಶಿವಮೊಗ್ಗ ವನ್ಯಜೀವಿ ವಿಭಾಗ104
ವೃತ್ತದ ಒಟ್ಟು586
ಒಟ್ಟು ಹುದ್ದೆಗಳು32035

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ ಪಿಯುಸಿ(PUC) ಅಥವಾ ಅದಕ್ಕೆ ತತ್ಸಮಾನವಾದ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಹೊಂದಿರಬೇಕು.

ವಯೋಮಿತಿ:

ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಹೊಂದಿರಬೇಕು.

ಸರ್ಕಾರದ ಆದೇಶದಂತೆ, ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ. ಅದರಂತೆ:

  • ಸಾಮಾನ್ಯ ಅಭ್ಯರ್ಥಿಗಳಿಗೆ 32 ವರ್ಷ
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 35 ವರ್ಷ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 37 ವರ್ಷ

ಸಂಬಳದ ವಿವರ:

ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 37,500 ರಿಂದ ರೂ. 76,100ರ ಶ್ರೇಣಿಯಲ್ಲಿ ವೇತನ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಪಿಯುಸಿ ಅಂಕಗಳ ಆಧಾರದ ಮೇಲೆ 1:20 ಅನುಪಾತದಲ್ಲಿ ಶಾರೀರಿಕ ಮಾನದಂಡ ಪರೀಕ್ಷೆ(ಪಿಎಸ್‌ಟಿ), ದೈಹಿಕ ತಾಳ್ವಿಕೆ ಪರೀಕ್ಷೆ (ಪಿಇಟಿ) ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗೆ (ಪಿಇಟಿ) ಕರೆಯಲಾಗುವುದು.

ನಂತರ, ಪಿಯುಸಿ. ಅಂಕಗಳ ಶೇ. 50 ಮತ್ತು ಆಪ್ಟಿಟ್ಯೂಡ್ ಪರೀಕ್ಷೆಯ(ಲಿಖಿತ ಪರೀಕ್ಷೆ) ಶೇ.50 ಅಂಕಗಳನ್ನು ಪರಿಗಣಿಸಿ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಇತರೆ ಪ್ರವರ್ಗದ ಅಭ್ಯರ್ಥಿಗಳಿಗೆ ₹750/- (₹500 ಅರ್ಜಿ ಶುಲ್ಕ + ₹250 ಪ್ರಕ್ರಿಯೆ ಶುಲ್ಕ)
  • ಪ.ಜಾತಿ/ಪಂಗಡ, ಪ್ರವರ್ಗ-1, ಮಾಜಿ ಸೈನಿಕ, ತೃತೀಯ ಲಿಂಗಿಗಳಿಗೆ ₹500/-
  • ವಿಶೇಷ ಚೇತನ ಅಭ್ಯರ್ಥಿಗಳಿಗೆ ₹250/- (ಪ್ರಕ್ರಿಯೆ ಶುಲ್ಕ ಮಾತ್ರ)

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ನಿಗದಿತ ದಿನಾಂಕದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/ ದಲ್ಲಿ ಲಭ್ಯವಾಗಲಿರುವ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್‌ ಲಿಂಕ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್(ನ.23 ರಿಂದ)
ಅಧಿಕೃತ ಜಾಲತಾಣaranya.gov.in
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕ ಹೆಲ್ಪ್‌.ಇನ್‌

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment