Career After ITI: ಮುಗಿಸಿದ ನಂತರ ಮುಂದೇನೆಂದು ಚಿಂತೆಯೇ? ಆಗಿದ್ರೆ ಈ ಲೇಖನ ಓದಿ ನೋಡಿ

Follow Us:

Career After ITI: ಐಟಿಐ ಇದು‌ 10th ನೇ‌ ತರಗತಿ‌ ಮುಗಿಸಿದ ನಂತರ ಇರುವ ವೃತ್ತಿಪರ ತರಬೇತಿ ನೀಡುವ ವಿಶಿಷ್ಟವಾದ ಕೋರ್ಸ್.‌ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯ, ಕೌಶಲ್ಯ ಮತ್ತು ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಮತ್ತು ಕೇಂದ್ರ ಸರ್ಕಾರವು ಸ್ಥಾಪಿಸಿರುವ ವಿನೂತನ ಕಾರ್ಯಕ್ರಮ. ಅನೇಕ ವಿಧ್ಯಾರ್ಥಿಗಳು 10th ನಂತರ ಏನು ಎಂಬ ಪ್ರಶೆಗೆ‌ ಐಟಿಐ ಸರಿಯಾದ ಉತ್ತರ,‌ಈಗಾಗಲೇ‌‌ ಸಾಕಷ್ಟು ವಿಧ್ಯಾರ್ಥಿಗಳು ಐಟಿಐ‌ನ ಮುಂತಾರ ತಮ್ಮ ವೃತಿ ಜೀವನವನ್ನು ಸುಗಮ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಸರ್ಕಾರಿ ಮತ್ತು ಖಾಸಗಿ‌ ಕ್ಷೇತ್ರಗಳೆರಡರಲ್ಲೂ ಹೆಚ್ಚಿನ ITI ಕಾಲೇಜುಗಳು ಇವೆ.‌ ಈ ಕಾರ್ಯಕ್ರಮದ ಪ್ರಮುಖ‌ ಉದ್ದೇಶ ವಿದ್ಯಾರ್ಥಿಗಳನ್ನು ಉದ್ಯೋಗಗಳಿಗೆ ಸಿದ್ಧಗೊಳಿಸುವುದು ಐಟಿಐಗಳ ಪ್ರಾಥಮಿಕ ಉದ್ದೇಶವಾಗಿದೆ. ITI ಪೂರ್ಣಗೊಳಿಸಿದ ನಂತರ ವಿಧ್ಯಾರ್ಥಿಗಳಿಗೆ ರಾಷ್ಟ್ರೀಯ ವ್ಯಾಪರ‌ ಪ್ರಮಾಣ ಪತ್ರ‌ (NTC) ವನ್ನು ನೀಡಲಾಗುತ್ತದೆ.‌

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ‌ ವಿಧ್ಯಾರ್ಥಿಗಳು ‌ITIಗೆ ಪ್ರವೇಶ ಬಯಸುತ್ತಾರೆ,‌ ಕಾರಣ ಬಹು‌ ಬೇಗ ಉದ್ಯೋಗ ಸಿಗುತ್ತೇದೆ‌ ನಂತರ ಜೀವನ‌ ಸಾಗಿಸಲು ಸಹಾಕಾರಿಯಾಗುತ್ತದೆ‌ ಎಂದು, ಹಾಗಾದರೆ ವಿಧ್ಯಾರ್ಥಿಗಳಗೆ‌ ITI ಮುಗಿಸಿದ ನಂತರ‌ ಯಾವ ಕ್ಷೇತ್ರದಲ್ಲಿ ಕೆಲಸ‌ ಮಾಡಬೇಕು, ITIನಲ್ಲಿ ಎಷ್ಟು ವಿವಿಧ‌ ಬಗೆಗಿನ ಕೋಸ್೯ಗಳು ಇವೆ, ITI ನಂತರ ಮುಂದೆ ವೃತಿಗಳು‌ ಯಾವುವು, ಸರ್ಕಾರಿ ಹಾಗೂ ಖಾಸಗಿವಲಯಗಳಲ್ಲಿ ಉದ್ಯೋಗಗಳು ಸಿಗುತ್ತದೆಯೋ?,ಎಂಬ ಎಲ್ಲಾ ಪ್ರಶ್ನೆಗಳಗೆ‌ ಈ ಲೇಖನದಲ್ಲಿ ಉತ್ತರವಿದೆ. ಸಂಪೂರ್ಣವಾಗಿ ಓದುವ ಮೂಲಕ ‌ಮಾಹಿತಿ‌ ಪಡೆದುಕೊಳ್ಳಿ.

Career After ITI – Shortview

Career Path NameITI
Article typeCareer
Type of CareerGovt and Private
Pay ScaleLow/Medium/High
Career After Iti
Career After Iti

ITIನಲ್ಲಿರುವ ವಿವಿಧ ಕೋರ್ಸ್‌ಗಳು ಬಗ್ಗೆ

ITI ಕೋರ್ಸ್ ಗಳಲ್ಲಿ ಪ್ರಮುಖವಾಗಿ ಎರಡು ವಿಧಗಳನ್ನು ನಾವು ನೋಡಬಹುದು. ಮೊದಲನೆಯದು ಎಂಜಿನಿಯರಿಂಗ್ ಕೋರ್ಸ್‌ಗಳು ಮತ್ತು ಎರಡನೆಯದು ಇಂಜಿನಿಯರಿಂಗ್ ಅಲ್ಲದ ಕೋರ್ಸ್‌ಗಳು.

ITI ಕೋರ್ಸ್‌ನ ಅವಧಿಯು ಆರು ತಿಂಗಳಿಂದ ಎರಡು ವರ್ಷಗಳವರೆಗೆ ನಡೆಯುತ್ತವೆ. ಉನ್ನತ ಸಂಸ್ಥೆಗಳು (ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು) ಲಿಖಿತ ಪರೀಕ್ಷೆಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪರೀಕ್ಷೆಗಳನ್ನು ನಡೆಸಿ ಮತ್ತು ಕೆಲವು ಖಾಸಗಿ ಸಂಸ್ಥೆಗಳು ನೇರ ಪ್ರವೇಶದ ಮೂಲಕ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುತ್ತವೆ. ಈ ಸಂಸ್ಥೆಗಳು ಐಟಿಐ ನಂತರ ಯಶಸ್ವಿ ವೃತ್ತಿಜೀವನಕ್ಕಾಗಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಕೌಶಲ್ಯ ರೂಪಿಸುವುದು ಮತ್ತು ಜ್ಞಾನವನ್ನು ಒದಗಿಸಲು ಸಹಾಯ ಮಾಡುತ್ತವೆ.

ITI ಕೋರ್ಸ್‌ಗಳ ಆಯ್ಕೆ ಸೂಕ್ತವೇ..?

ಪ್ರಸ್ತುತವಾಗಿ ಈ ಆಧುನಿಕ ಯುಗದಲ್ಲಿ ಯಶಸ್ವಿಯಾಗಲು, ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ವಿಶೇಷ ಕೌಶಲ್ಯ ಹೊಂದಿರಬೇಕು ಮತ್ತು ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ತಿಳಿದಿರಬೇಕು. ಐಟಿಐಗಳಿಗೆ ಉತ್ತಮ ವೃತ್ತಿ ಅವಕಾಶವಿಲ್ಲ ಅಥವಾ ಪದವಿ ಬೇರೆ ಯಾವುದೇ ಪದವಿಗಿಂತ ಕಡಿಮೆಯಿದೆ ಎಂದು ಯೋಚಿಸುವುದು ಸಂಪೂರ್ಣವಾಗಿ ತಪ್ಪು. ವಾಸ್ತವವಾಗಿ, ಕೆಲವು ಸಂದರ್ಭಗಳಲ್ಲಿ ಉನ್ನತ ಪದವಿಯನ್ನು ಹೊಂದಿರುವ ಇತರರಿಗೆ ಹೋಲಿಸಿದರೆ ಸರಿಯಾದ ಕೌಶಲ್ಯ ಮತ್ತು ತರಬೇತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಉತ್ತಮ ಉದ್ಯೋಗದ ಅವಕಾಶವನ್ನು ಹೊಂದಿರುತ್ತಾರೆ. ವಿದ್ಯಾರ್ಥಿಗಳು ಕಲಿತ ಕೌಶಲ್ಯ ಮತ್ತು ಪಡೆದ ತರಬೇತಿ ಅವರ ಐಟಿಐ ನಂತರ ವೃತ್ತಿಜೀವನಕ್ಕೆ ಹೆಚ್ಚು ಉಪಯುಕ್ತವಾಗುತ್ತದೆ.

ITIನಲ್ಲಿ ಇವೆ ಹಲವು ಡಿಪ್ಲೋಮೋ ಕೋರ್ಸ್ ಗಳು

ತಾಂತ್ರಿಕ ಅಥವಾ ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಐಟಿಐ ತರಬೇತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಹಲವಾರು ಎಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್‌ಗಳು ಲಭ್ಯವಿದೆ. ಡಿಪ್ಲೊಮಾ ಎಂಜಿನಿಯರಿಂಗ್ ಕೋರ್ಸ್‌ಗಳು ಕೌಶಲ್ಯ ಆಧಾರಿತ ಮತ್ತು ಪ್ರಾಯೋಗಿಕ ಜ್ಞಾನವನ್ನು ಕಲಿಸುವ ಮೂಲಕ ಮೂಲಕ ಕೋರ್ಸ್‌ಗಳ ಆಳವಾದ ತಾಂತ್ರಿಕ ಜ್ಞಾನ ಮತ್ತು ಎಂಜಿನಿಯರಿಂಗ್ ಕೌಶಲ್ಯಗಳನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡುತ್ತದೆ. ಮೆಕಾನಿಕ್ಸ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ವೆಲ್ಡರ್, ಫಿಟ್ಟರ್, ಟರ್ನರ್, ಮೆಷಿನಿಸ್ಟ್, ಮೋಟಾರ್ ವೆಹಿಕಲ್, ಆಟೋಮೊಬೈಲ್ಸ್, ಫೌಂಡ್ರಿಮ್ಯಾನ್, ಎಲೆಕ್ಟ್ರಿಷಿಯನ್, ಕಟಿಂಗ್ ಮತ್ತು ಹೊಲಿಗೆ, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಇನ್ನು ಮುಂತಾದ ಕೌಶಲ್ಯ ಆಧಾರಿತ ಕೋರ್ಸ್ ಲಭ್ಯವಿದ್ದು ಮುಂದೆ ಇಂಜಿನಿಯರಿಂಗ್ ಪ್ರವೇಶಿಸಲು ಅಥವಾ ಋತುಜೀವನ ಪ್ರಾರಂಭಿಸಲು ಸಹಾಯವಾಗುತ್ತದೆ.

ITI ನಂತರದ ಉದ್ಯೋಗ ಅವಕಾಶಗಳು

ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿಯನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗಗಳಿಗೆ ಸಿದ್ಧಗೊಳಿಸುವುದು ಐಟಿಐಗಳ ಪ್ರಾಥಮಿಕ ಉದ್ದೇಶವಾಗಿದೆ. ವಿದ್ಯಾರ್ಥಿಯು ತನ್ನ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ, ಐಟಿಐ ನಂತರ ವೃತ್ತಿಜೀವನವನ್ನು ಮುಂದುವರಿಸಲು ಸಾಕಷ್ಟು ಅವಕಾಶಗಳಿವೆ. ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅವಕಾಶಗಳಿದ್ದು, ಉನ್ನತ ತರಬೇತಿ ಪಡೆದು ಕೈಗಾರಿಕಾ ಕ್ಷೇತ್ರದಲ್ಲಿ ಅತಿ ಹೆಚ್ಚು ಉದ್ಯೋಗಾವಕಾಶಗಳಿದ್ದು ಇದರ ಸದುಪಯೋಗ ಐಟಿಐ ಮೂಲಕ ಪಡೆದುಕೊಳ್ಳಬಹುದಾಗಿದೆ.

ಸರ್ಕಾರಿ ವಲಯದಲ್ಲಿನ ಉದ್ಯೋಗವಕಾಶಗಳು

ಸರ್ಕಾರಿ ವಲಯವನ್ನು ಐಟಿಐ ವಿದ್ಯಾರ್ಥಿಗಳಿಗೆ ದೊಡ್ಡ ಉದ್ಯೋಗದಾತರು ಎಂದು ಪರಿಗಣಿಸಲಾಗುತ್ತದೆ. ಐಟಿಐ ನಂತರ ವೃತ್ತಿಯನ್ನು ಮಾಡಲು ಹಲವಾರು ಆಯ್ಕೆಗಳಿವೆ. ವಿವಿಧ ಸರ್ಕಾರಿ ವಲಯದ ಘಟಕಗಳಾದ (PSUs) ರೈಲ್ವೆಗಳು, ರಾಜ್ಯವಾರು PWDಗಳು, BSNL, IOCL, ONGC ಮತ್ತು ಇನ್ನೂ ಅನೇಕ ITI ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ. ITI ವಿದ್ಯಾರ್ಥಿಗಳು ಭಾರತೀಯ ಸೇನೆ, ಭಾರತೀಯ ನೌಕಾಪಡೆ, BSF, CRPF ಮತ್ತು ಇತರ ಅರೆಸೇನಾ ಪಡೆಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ.

ಖಾಸಗಿ ವಲಯದಲ್ಲಿನ ಉದ್ಯೋಗವಕಾಶಗಳು

ಖಾಸಗಿ ಉತ್ಪಾದನಾ ಮತ್ತು ಮೆಕ್ಯಾನಿಕ್ ಹಾಗೂ ಕೈಗಾರಿಕಾ ಕಂಪನಿಗಳಲ್ಲಿ ಉದ್ಯೋಗಳು ಲಭ್ಯವಿರುತ್ತದೆ. ಖಾಸಗಿ ವಲಯವು ವಿದ್ಯಾರ್ಥಿಗಳಿಗೆ ಐಟಿಐ ನಂತರ ವೃತ್ತಿಜೀವನವನ್ನು ಮುಂದುವರಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಕಂಪನಿಗಳ ಹೊರತಾಗಿ, ಐಟಿಐ ವಿದ್ಯಾರ್ಥಿಗಳು ಕೃಷಿ, ಇಂಧನ ನಿರ್ಮಾಣ ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಹುಡುಕಬಹುದು. ಎಲೆಕ್ಟ್ರಾನಿಕ್ಸ್, ವೆಲ್ಡಿಂಗ್ , ಏರ್ ಕಂಡಿಷನರ್, ಮೆಕ್ಯಾನಿಕ್ಸ್ ,ನಿರ್ದಿಷ್ಟ ಉದ್ಯೋಗ ಕೌಶಲ್ಯಾಧಾರಿತ ಕೆಲಸಗಳು ಮತ್ತು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು‌ ITI ಸಹಕಾರಿಯಾಗಿವೆ.

ಇತ್ತೀಚಿನ ದಿನಗಳಲ್ಲಿ ಐಟಿಐ ಕೋರ್ಸ್‌ಗಳ ಪ್ರವೇಶಾವತಿ ಪಡೆದುಕೊಳ್ಳುವ ಸಂಖ್ಯೆ ಕಡಿಮೆಯಾಗುತ್ತಿದ್ದು, ITI ಗಳು ಉತ್ತಮ ವೃತ್ತಿ ಅವಕಾಶವನ್ನು ಹೊಂದಿಲ್ಲ ಅಥವಾ ಯಾವುದೇ ಪದವಿಗಿಂತ ಕಡಿಮೆ ಯೋಚಿಸುವುದು ತಪ್ಪು. ಭಾರತ ಮತ್ತು ವಿದೇಶಗಳಲ್ಲಿ ನುರಿತ ಕೆಲಸಗಾರರಿಗೆ ಹೆಚ್ಚಿನ ಬೇಡಿಕೆಯಿದೆ. ಆದ್ದರಿಂದ, ಐಟಿಐ ನಂತರ ಯಶಸ್ವಿ ವೃತ್ತಿಜೀವನವನ್ನು ಕಂಡುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಐಟಿಐಗಳು ಉತ್ತಮ ಅವಕಾಶವನ್ನು ಒದಗಿಸುತ್ತವೆ.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links:

More Career UpdatesClick Here
KarnatakaHelp.inHome Page

Leave a Comment