ಕರ್ನಾಟಕದ ನಾಗರಿಕರ ಪ್ರಮುಖ ದಾಖಲೆಗಳಾದ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್(Aadhaar Ration Link) ಅನ್ನು ಕರ್ನಾಟಕ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ರೇಷನ್ ಕಾರ್ಡ್‌ಗಳೊಂದಿಗೆ ಆಧಾರ್ ಕಾರ್ಡ್‌ಗಳನ್ನು ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2024 ರವರೆಗೆ ವಿಸ್ತರಿಸಿದೆ. ಈ ಹಿಂದೆ, ಕೊನೆವನ್ನು ದಿನಾಂಕ ಜೂನ್ 30, 2024 ನಿಗದಿಪಡಿಸಲಾಗಿತ್ತು.
ಈ ವಿಸ್ತರಣೆಯು ರಾಜ್ಯದಲ್ಲಿನ ಲಕ್ಷಾಂತರ ಜನರಿಗೆ ತಮ್ಮ ರೇಷನ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡಲು ಹೆಚ್ಚುವರಿ ಸಮಯವನ್ನು ನೀಡುತ್ತದೆ. ರೇಷನ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದರ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದುವ ಮೂಲಕ ಆಧಾರ್ ಜೊತೆ ರೇಷನ್ ಕಾರ್ಡನ್ನು ಮಾಡಿಲ್ಲದಿದ್ದರೆ ಇಂದೇ ಲಿಂಕ್ ಮಾಡಿರಿ.
ರೇಷನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರ ಪ್ರಯೋಜನಗಳು ಏನು..?
ಹೆಚ್ಚಿನ ಪಾರದರ್ಶಕತೆ ಮತ್ತು ಗುರುತಿಸುವಿಕೆ: ಆಧಾರ್-ಲಿಂಕ್ ಮಾಡಲಾದ ರೇಷನ್ ಕಾರ್ಡ್ ವ್ಯವಸ್ಥೆಯು ಹೆಚ್ಚು ಪಾರದರ್ಶಕ ಮತ್ತು ದುರುಪಯೋಗವನ್ನು ತಡೆಯಲು ಸಹಾಯ ಮಾಡುತ್ತದೆ.
ದುರುಪಯೋಗ ತಡೆಗಟ್ಟುವಿಕೆ: ಆಧಾರ್ ಲಿಂಕ್ ಮಾಡುವುದರಿಂದ ಒಂದೇ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಪಡೆಯುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಸುಲಭ ಸೇವೆಗಳು: ಆಧಾರ್-ಲಿಂಕ್ ಮಾಡಲಾದ ರೇಷನ್ ಕಾರ್ಡ್ ಹೊಂದಿರುವವರು ಆನ್‌ಲೈನ್‌ನಲ್ಲಿ ರೇಷನ್ ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ.
ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?
ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡದಿದ್ದರೆ, ನೀವು ಈ ಕೆಳಗಿನ ಸಮಸ್ಯೆಗಳನ್ನು ಎದುರಿಸಬಹುದು:
ರೇಷನ್ ಅಂಗಡಿಯಿಂದ ಸಬ್ಸಿಡಿ ದರದಲ್ಲಿ ಆಹಾರಧಾನ್ಯಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.
ಇತರ ರೇಷನ್ ಸಂಬಂಧಿತ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
Required Documents for Aadhaar Card Ration Card Link
ರೇಷನ್ ಕಾರ್ಡ್
ಆಧಾರ್ ಕಾರ್ಡ್
ನೋಂದಾಯಿತ ಮೊಬೈಲ್ ಸಂಖ್ಯೆ
ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳ ಪ್ರತಿಗಳು (ಐಚ್ಛಿಕ)
ಸೇವಾ ಶುಲ್ಕ: ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಲು ಯಾವುದೇ ಶುಲ್ಕವಿಲ್ಲ. ಸಹಾಯವಾಣಿ:
ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡುವುದರ ಕುರಿತು ಯಾವುದೇ ಪ್ರಶ್ನೆಗಳಿಗೆ, ನೀವು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯವಾಣಿಯನ್ನು 1800-200-1090 ಗೆ ಕರೆ ಮಾಡಬಹುದು.
ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವೇ?
ಹೌದು, ರಾಜ್ಯದಲ್ಲಿನ ಎಲ್ಲಾ ರೇಷನ್ ಕಾರ್ಡ್‌ಗಳನ್ನು ಆಧಾರ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. 2024 ರ ಸೆಪ್ಟೆಂಬರ್ 30 ರ ನಂತರ, ಲಿಂಕ್ ಮಾಡದ ರೇಷನ್ ಕಾರ್ಡ್‌ಗಳನ್ನು ಅಮಾನತುಗೊಳಿಸಬಹುದು.
Step By Step Process of Aadhaar Card-Ration Card Linking Karnataka
ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ: ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬಹುದು.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://ahara.kar.nic.in/
“ಆಧಾರ್ ಲಿಂಕ್(ಅಪ್ಡೇಟ್ ಆಧಾರ್)” ಆಯ್ಕೆಮಾಡಿ.
ನಿಮ್ಮ ರೇಷನ್ ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
OTPಯನ್ನು ನಮೂದಿಸಿ ಮತ್ತು ನಿಮ್ಮ ವಿನಂತಿಯನ್ನು ದೃಢೀಕರಿಸಿ.
ಬಂಧುಗಳೇ, ಬಹುಶಃ ಆನ್ ಲೈನ್ ಮೂಲಕ ಲಿಂಕ್ ಮಾಡಲು ಸರ್ವರ್ ತೊಂದರೆಯಾಗಬಹುದು, ಆದ್ದರಿಂದ ನೀವು ನಿಮಗೆ ಹತ್ತಿರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿಗೆ ಭೇಟಿ ನೀಡಿ. ರೇಷನ್ ಕಾರ್ಡ್’ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ. ಧನ್ಯವಾದಗಳು….