WhatsApp Channel Join Now
Telegram Group Join Now

Aadhar Card Update: ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಇಲ್ಲಿದೆ ಸುಲಭ ಮಾರ್ಗ

Aadhar Card Update: ನಮಸ್ಕಾರ ಬಂಧುಗಳೇ, ಲೇಖನದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಸಹಾಯವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

ಆಧಾರ್ ನವೀಕರಣ ಪ್ರಕ್ರಿಯೆ ಸುಲಭ ಮತ್ತು Online ನಲ್ಲೂ ಲಭ್ಯವಿದೆ. ಆಧಾರ್ ನೋಂದಣಿ ಸಂಸ್ಥೆ (UIDAI)ಯಲ್ಲೂ‌ ಕೂಡ ಆಧಾರ್ ಕಾರ್ಡ್ ನವೀಕರಣಕ್ಕೆ ಅವಕಾಶ ನೀಡುತ್ತದೆ. ಹೆಸರು ಬದಲಾವಣೆಗೆ ಮದುವೆ ಸರ್ಟಿಫಿಕೇಟ್ (Marriage Certificate), ವಿಳಾಸ ಬದಲಾವಣೆಗೆ ಮತದಾರ ಗುರುತಿನ ಚೀಟಿ (Voter ID Card) ಈ ರೀತಿಯಾಗಿ ನಿಮ್ಮ ಬದಲಾವಣೆಗೆ ಸೂಕ್ತವಾದ ದಾಖಲೆಗಳನ್ನು ಸಲ್ಲಿಸಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ನಾಗರಿಕರಿಗೆ ಎರಡು ವಿಧಾನದಲ್ಲಿ ಅವಕಾಶವಿದೆ ಅವುಗಳೆಂದರೆ..

ಆನ್‌ಲೈನ್ ಅಪ್ಡೇಟ್(Online): UIDAI ಯ myaadhaar.uidai.gov.in ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಮತ್ತು ನಿಮ್ಮ ಆಧಾರ್ ಸಂಖ್ಯೆ ಮತ್ತು ಪಾಸ್‌ವರ್ಡ್‌ ಅಥವಾ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಫೋನಿನ ಸಂಖ್ಯೆಯ ಸಹಾಯದಿಂದ, ಒಟಿಪಿ (OTP) ಪಡೆದುಕೊಂಡು ನೀವು ಬದಲಾಯಿಸಲು ಬಯಸುವ ವಿವರಗಳನ್ನು ಆಯ್ಕೆ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅಪ್ಡೇಟ್ ಮಾಡಿಕೊಳ್ಳಬಹುದು.

ಆಧಾರ್ ಸೇವಾ ಕೇಂದ್ರ (Aadhaar Seva Kendra): ನಿಮ್ಮ ಹತ್ತಿರದಲ್ಲಿರುವ ಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ. ಅಲ್ಲಿರುವ ಅಧಿಕಾರಿಗಳಿಗೆ ನಿಮ್ಮ ಹಳೆಯ ಆಧಾರ್ ಕಾರ್ಡ್ ಮತ್ತು ಬದಲಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವ ಮೂಲಕ ಆಧಾರ್ ಸೇವಾ ಕೇಂದ್ರದಲ್ಲಿ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳಬಹುದು.

Aadhar Card Update
Aadhar Card Update

How to Update Aadhaar Card Online

ಹಾಗಾದರೆ ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ..?

  • ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಬ್ರೌಸರ್ ಓಪನ್ ಮಾಡಿ ಭಾರತ ಸರ್ಕಾರದ ಆಧಾರ್ ಕಾರ್ಡ್ ನ ಅಧಿಕೃತ ವೆಬ್ ಸೈಟ್ myaadhaar.uidai.gov.in ಗೆ ಭೇಟಿ ನೀಡಿ.
  • ನಂತರ ಮುಖಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ (Aadhaar Number) ಮತ್ತು ಪಾಸ್‌ವರ್ಡ್‌ ಅಥವಾ ಒಟಿಪಿ (OTP) ದಾಖಲಿಸಿ.
  • ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ (OTP) ಬಂದಿದ್ದರೆ, ಅದನ್ನು ದಾಖಲಿಸಿ.
  • ಲಾಗಿನ್ ಆದ ನಂತರ, “Manage Aadhaar” ವಿಭಾಗಕ್ಕೆ ಹೋಗಿ.
  • Update Demographics Data” ಆಯ್ಕೆಯನ್ನು ಆಯ್ಕೆ ಮಾಡಿ.
  • ನೀವು ಯಾವ ವಿವರಗಳನ್ನು ಬದಲಾಯಿಸಲು ಬಯಸುತ್ತೀರೋ ಅದನ್ನು ಆಯ್ಕೆ ಮಾಡಿ ಹೆಸರು,ವಿಳಾಸ ಅಥವಾ ಜನ್ಮ ದಿನಾಂಕ.
  • ಆಯ್ದ ವಿವರಗಳಿಗೆ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನುಅಪ್‌ಲೋಡ್ ಮಾಡಿ.
  • ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ.
  • ಕೊನೆಯದಾಗಿ ಮಾಹಿತಿಯನ್ನು ಸಲ್ಲಿಸಿ.

ಆಧಾರ್ ದಾಖಲೆಯನ್ನು ನವೀಕರಿಸುವುದು ಒಂದು ಪ್ರಮುಖ ಕರ್ತವ್ಯ ಆದ್ದರಿಂದ, ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಸುಲಭ ಮತ್ತು ತ್ವರಿತ ಪ್ರಕ್ರಿಯೆ. ಇದನ್ನು ಮಾಡುವ ಮೂಲಕ, ನಿಮ್ಮ ಗುರುತನ್ನು ನಿಖರವಾಗಿರಿಸಿಕೊಳ್ಳಲು ಮತ್ತು ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯ.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Links:

Aadhar Card Update Online Linkmyaadhaar.uidai.gov.in
More UpdatesKarnatakaHelp.in

FAQs – Aadhar card Update

How do I update my Aadhar card online?

Visit the official Website of to Update Aadhar Card

Leave a Comment