Accident Assistance: ಕಾರ್ಮಿಕ ಅಪಘಾತಕ್ಕೀಡಾದರೆ, ಸರ್ಕಾರದಿಂದ ಪರಿಹಾರ, ಸಂಪೂರ್ಣ ಮಾಹಿತಿ ಇಲ್ಲಿದೆ!

By KH Digital Desk

Published On:

IST

Updated On:

ಫಾಲೋ ಮಾಡಿ

ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಯು ಕಾರ್ಮಿಕರ ಸಾಮಾಜಿಕ ಹಿತದೃಷ್ಟಿಯಿಂದ ಕಾರ್ಮಿಕರು ಕೆಲಸದ ವೇಳೆ ಅಪಘಾತದಿಂದಾಗಿ ಸಂಕಷ್ಟಕ್ಕೆ ಸಿಲುಕುವ ಅವರ ಕುಟುಂಬದವರಿಗೆ ನೆರವು ನೀಡಲು ಅಪಘಾತ ಪರಿಹಾರ(Accident Assistance) ಸೌಲಭ್ಯವನ್ನು ಜಾರಿಗೆ ತಂದಿದೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೆಲಸದ ವೇಳೆ ಅಪಘಾತ ಸಂಭವಿಸಿದಲ್ಲಿ ಮಂಡಳಿಯು ಅಪಘಾತ ಪರಿಹಾರವನ್ನು ನೀಡಲಾಗುತ್ತದೆ. ಸದರಿ ಯೋಜನೆ ಕುರಿತಾದಂತೆ ಅರ್ಹತಾ ಮಾನದಂಡಗಳು, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಇತರೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

ಅರ್ಹತಾ ಮಾನದಂಡ

  • ಫಲಾನುಭವಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • 18 ವರ್ಷದಿಂದ 60 ವರ್ಷ ವಯಸ್ಸಿನವರಾಗಿರಬೇಕು.
  • ನಿಮ್ಮ ಪ್ರದೇಶದಲ್ಲಿರುವ ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ನೀವು ಕಾರ್ಮಿಕರಾಗಿ ನೋಂದಾಯಿಸಿಕೊಂಡಿರಬೇಕು.
  • ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಿರುವ ಕಾರ್ಮಿಕರ ಗುರುತಿನ ಚೀಟಿ ಹೊಂದಿರಬೇಕು.
  • ಕಟ್ಟಡ ಅಥವಾ ಇತರ ನಿರ್ಮಾಣ ಕೆಲಸದಲ್ಲಿ ನಿರತರಾಗಿರಬೇಕು.
  • ಹಿಂದಿನ 12 ತಿಂಗಳುಗಳಲ್ಲಿ ನಿರ್ಮಾಣ ಕ್ಷೇತ್ರದಲ್ಲಿ 90 ದಿನಗಳ ಕೆಲಸವನ್ನು ಪೂರ್ಣಗೊಳಿಸಿರಬೇಕು.
  • ಉದ್ಯೋಗದ ಸಮಯದಲ್ಲಿ ಅಪಘಾತಕ್ಕೀಡಾದ ಅಥವಾ ಮರಣ ಹೊಂದಿದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ನೈಸರ್ಗಿಕ ಸಾವು ಸಂಭವಿಸಿದರು ಅರ್ಜಿ ಸಲ್ಲಿಸಬಹುದು.

ಅಪಘಾತ ಪರಿಹಾರ ಮೊತ್ತ:

  • ಮರಣ ಭತ್ಯೆ: ₹5,00,000/- ನೀಡಲಾಗುತ್ತದೆ
  • ಅಂಗವೈಕಲ್ಯ ಭತ್ಯೆ: ₹2,00,000/- ನೀಡಲಾಗುತ್ತದೆ
  • ಶಾಶ್ವತ ಭಾಗಶಃ ಅಂಗವೈಕಲ್ಯ ಭತ್ಯೆ: ₹1,00,000/- ನೀಡಲಾಗುತ್ತದೆ

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಗುರುತಿನ ಚೀಟಿಯ ಛಾಯಾಚಿತ್ರ.
  • ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಿರುವ ಗುರುತಿನ ಚೀಟಿ.
  • ಉದ್ಯೋಗದಾತರಿಂದ ಭರ್ತಿ ಮಾಡಿಸಿದ ನಮೂನೆ 21 ಮತ್ತು 21A ಅರ್ಜಿಯನ್ನು ಸಲ್ಲಿಸಬೇಕು.
  • ಅಪಘಾತದಿಂದ ಮರಣ ಹೊಂದಿದ್ದಲ್ಲಿ, ಮರಣ ಪ್ರಮಾಣಪತ್ರ.
  • ಮರಣೋತ್ತರ ಪರೀಕ್ಷೆ ವರದಿ
  • ನಾಮಿನಿಯ ಯಾವುದೇ ಫೋಟೋ ಗುರುತಿನ ಚೀಟಿ.
  • ಅಪಘಾತ ಸಂಭವಿಸಿದ ಕುರಿತಂತೆ ಎಫ್ ಐ ಆರ್ ಪ್ರತಿ.
  • ವೈದ್ಯಕೀಯ ವರದಿ.
  • ಫಲಾನುಭವಿಯು ಮರಣ ಹೊಂದಿದ್ದಲ್ಲಿ ಅವರ ನಾಮನಿರ್ದೇಶಿತರ ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ಉದ್ಯೋಗ ದೃಢೀಕರಣ ಪತ್ರ ಮತ್ತು ಸ್ವಯಂ ದೃಢೀಕರಣ ಪತ್ರ.
  • ದುರ್ಬಲತೆ ಪ್ರಕರಣವಿದ್ದಲ್ಲಿ ದುರ್ಬಲತೆಯ ಶೇಕಡಾವಾರು ಪ್ರಮಾಣ ನಮೂದಿಸಬೇಕು.
  • ಫಲಾನುಭವಿ ದುರ್ಬಲತೆಯಾದ ನಂತರ ತಪಾಸಣೆ ಮಾಡಿದ ಸರ್ಕಾರಿ / ಸರ್ಕಾರದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆ ವೈದ್ಯರಿಂದ ಶೇಕಡಾವಾರು ದುರ್ಬಲತೆ ಖಚಿತ ಪಡಿಸಿರುವ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು.
  • ಅಪಘಾತ ಸಂಭವಿಸಿದ ಒಂದು ವರ್ಷದೊಳಗೆ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

  • ಮಂಡಳಿಯ ಅಧಿಕೃತ ವೆಬ್ ಸೈಟ್ https://kbocwwb.karnataka.gov.in/login ಗೆ ಭೇಟಿ ನೀಡಿ.
  • ಕೇಳಲಾಗುವ ಮಾಹಿತಿಗಳನ್ನು ನೀಡಿ ಲಾಗಿನ್ ಆಗಿ.
  • ಕಾರ್ಮಿಕ ಅಪಘಾತ ಪರಿಹಾರ ಯೋಜನೆಗೆ ಬೇಕಾದ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ. ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಅರ್ಜಿ ಸಲ್ಲಿಕೆಯ ನಂತರ ಹಿರಿಯ/ ಕಾರ್ಮಿಕ ನಿರೀಕ್ಷಕರಿಂದ ಅರ್ಜಿಯ ಪ್ರಕ್ರಿಯೆ ಮತ್ತು ಪರಿಶೀಲನೆ ಮಾಡಲಾಗುತ್ತದೆ.
  • ಸಹಾಯಕ ಕಾರ್ಮಿಕ ಆಯುಕ್ತರಿಂದ ಪರಿಶೀಲನೆ ಮತ್ತು ಅನುಮೋದನೆ ಮಾಡಲಾಗುತ್ತದೆ.
  • ಪರಿಹಾರದ ಮೊತ್ತ ನೀವು ನೀಡಿರುವ ಖಾತೆಗೆ ಜಮೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: ಕಾರ್ಮಿಕ ಸಹಾಯವಾಣಿ -155214 ಅನ್ನು ಸಂಪರ್ಕಿಸಿ ಅಥವಾ

  • ಮಂಡಳಿಯ ಅಧಿಕೃತ ವೆಬ್ ಸೈಟ್ karbwwb.karnataka.gov.in ಗೆ ಭೇಟಿ ನೀಡಿ.
  • ಮತ್ತಷ್ಟು ಮಾಹಿತಿಗಾಗಿ KarnatakaHelp.inಗೆ ಭೇಟಿ ನೀಡಿ

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಅಂತರ್ಜಾಲ ಸುದ್ದಿ ಮಾಧ್ಯಮ.

For Feedback - admin@karnatakahelp.in

Leave a Comment