ರಕ್ಷಣಾ ಸಚಿವಾಲಯದಡಿ ಬರುವ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳು ಭಾರತ ಲಿಮಿಟೆಡ್(AWEIL)ನಲ್ಲಿ ಎಕ್ಸಿಕ್ಯೂಟಿವ್ ಫೈನಾನ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ತನ್ನ ವಿವಿಧ ಘಟಕಗಳಿಗೆ 14 ಅರ್ಹ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ಪೂರ್ಣ ಸಮಯದವರೆಗೆ ಭರ್ತಿ ಮಾಡಿಕೊಳ್ಳಲಿದೆ. ಸಿಎ/ಸಿಎಂಎ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಸಬಹುದು. ಆಸಕ್ತರು ಅಧಿಕೃತ ವೆಬ್ಸೈಟ್https://www.aweil.in/ನಲ್ಲಿ ಅರ್ಜಿ ನಮೂನೆ ಪಡೆದು ಮಾಹಿತಿ ತುಂಬಿ, ಫೆ.23ರೊಳಗೆ ‘ಜನರಲ್ ಮ್ಯಾನೇಜರ್ (HR), ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್, ಆರ್ಡನೆನ್ಸ್ ಫ್ಯಾಕ್ಟರಿ ಕಪ್ಲಿ ರಸ್ತೆ ಕಾನ್ಪುರ್-208009’ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಅಭ್ಯರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಅರ್ಹ ಚಾರ್ಟರ್ಡ್ ಅಕೌಂಟೆಂಟ್(CA) ಅಥವಾ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ICMAI) ನಿಂದ ಕಾಸ್ಟ್ & ಮ್ಯಾನೇಜ್ಮೆಂಟ್ ಅಕೌಂಟೆಂಟ್(CMA) ಪೂರ್ಣಗೊಳಿಸಿರಬೇಕು ಮತ್ತು ICAI/ICMAIನ ಅಸೋಸಿಯೇಟ್/ಫೆಲೋ ಸದಸ್ಯರಾಗಿರಬೇಕು.
• ಆರ್ಟಿಕಲ್ ಶಿಪ್ ಅವಧಿಯನ್ನು ಹೊರತುಪಡಿಸಿ, ಕನಿಷ್ಠ 03 ವರ್ಷಗಳ ಅರ್ಹತಾ ನಂತರದ ಅನುಭವವನ್ನು ಹೊಂದಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ₹90,000 ರವರೆಗೆ ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
• DDPDOO ಅಧಿಕೃತ ಪೋರ್ಟಲ್ https://ddpdoo.gov.in/careerಗೆ ಭೇಟಿ ನೀಡಿ.
• ಖಾಲಿ ಹುದ್ದೆ ಮತ್ತು ಸುತ್ತೋಲೆ ವಿಭಾಗದಲ್ಲಿ ನೀಡಲಾಗಿರುವ “AWEIL ನಲ್ಲಿ ಕಾರ್ಯನಿರ್ವಾಹಕ ಹಣಕಾಸು (ಒಪ್ಪಂದದ ಆಧಾರದ ಮೇಲೆ ನಿಗದಿತ ಅವಧಿ) 14 ಹುದ್ದೆಗಳ ನೇಮಕಾತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಹೀರಾತಿನ ಕೊನೆಯಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
• ನಂತರ ಅರ್ಜಿ ನಮೂನೆಯಲ್ಲಿ ಕೇಳಲಾಗುವ ತಮ್ಮ ಮೂಲ ಮಾಹಿತಿಗಳನ್ನು ನಮೂದಿಸಿ.
• ನಂತರ ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಫೆಬ್ರವರಿ 23ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಜನರಲ್ ಮ್ಯಾನೇಜರ್ (HR), ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್, ಆರ್ಡನೆನ್ಸ್ ಫ್ಯಾಕ್ಟರಿ ಕಪ್ಲಿ ರಸ್ತೆ ಕಾನ್ಪುರ್ -208009
ಅಭ್ಯರ್ಥಿಗಳ ಗಮನಕ್ಕೆ: ಅರ್ಜಿ ನಮೂನೆಯ ಮುಂಗಡ ಸ್ಕ್ಯಾನ್ ಮಾಡಿದ ಪ್ರತಿಯನ್ನು ಲಗತ್ತುಗಳೊಂದಿಗೆ ವಿಷಯದ ಶೀರ್ಷಿಕೆಯಲ್ಲಿ “ಎಕ್ಸಿಕ್ಯೂಟಿವ್ ಫೈನಾನ್ಸ್ ಹುದ್ದೆಗೆ ಒಪ್ಪಂದದ ಆಧಾರದ ಮೇಲೆ ಅರ್ಜಿ” ಎಂದು ನಮೂದಿಸಿ ಇ-ಮೇಲ್ – dir-hr@aweil.in ವಿಳಾಸಕ್ಕೆ ಕಳುಹಿಸಬೇಕು.