AWEILನಲ್ಲಿ ಎಕ್ಸಿಕ್ಯೂಟಿವ್ ಫೈನಾನ್ಸ್ ಹುದ್ದೆಗಳ ಭರ್ತಿ

ತಿಂಗಳಿಗೆ ₹90000 ವೇತನ | ಅರ್ಜಿ ಸಲ್ಲಿಸಲು ಫೆ.23 ಕೊನೆದಿನ

Published on:

ರಕ್ಷಣಾ ಸಚಿವಾಲಯದಡಿ ಬರುವ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳು ಭಾರತ ಲಿಮಿಟೆಡ್(AWEIL)ನಲ್ಲಿ ಎಕ್ಸಿಕ್ಯೂಟಿವ್ ಫೈನಾನ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ತನ್ನ ವಿವಿಧ ಘಟಕಗಳಿಗೆ 14 ಅರ್ಹ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ಪೂರ್ಣ ಸಮಯದವರೆಗೆ ಭರ್ತಿ ಮಾಡಿಕೊಳ್ಳಲಿದೆ. ಸಿಎ/ಸಿಎಂಎ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಸಬಹುದು. ಆಸಕ್ತರು ಅಧಿಕೃತ ವೆಬ್‌ಸೈಟ್‌https://www.aweil.in/ನಲ್ಲಿ ಅರ್ಜಿ ನಮೂನೆ ಪಡೆದು ಮಾಹಿತಿ ತುಂಬಿ, ಫೆ.23ರೊಳಗೆ ‘ಜನರಲ್ ಮ್ಯಾನೇಜರ್ (HR), ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್, ಆರ್ಡನೆನ್ಸ್ ಫ್ಯಾಕ್ಟರಿ ಕಪ್ಲಿ ರಸ್ತೆ ಕಾನ್ಪುರ್-208009’ ವಿಳಾಸಕ್ಕೆ ಕಳುಹಿಸಿಕೊಡಬೇಕು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜನವರಿ 27, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 23, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಅರ್ಹ ಚಾರ್ಟರ್ಡ್ ಅಕೌಂಟೆಂಟ್(CA) ಅಥವಾ ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ICMAI) ನಿಂದ ಕಾಸ್ಟ್ & ಮ್ಯಾನೇಜ್ಮೆಂಟ್ ಅಕೌಂಟೆಂಟ್(CMA) ಪೂರ್ಣಗೊಳಿಸಿರಬೇಕು ಮತ್ತು ICAI/ICMAIನ ಅಸೋಸಿಯೇಟ್/ಫೆಲೋ ಸದಸ್ಯರಾಗಿರಬೇಕು.

• ಆರ್ಟಿಕಲ್ ಶಿಪ್ ಅವಧಿಯನ್ನು ಹೊರತುಪಡಿಸಿ, ಕನಿಷ್ಠ 03 ವರ್ಷಗಳ ಅರ್ಹತಾ ನಂತರದ ಅನುಭವವನ್ನು ಹೊಂದಿರಬೇಕು.

ವಯೋಮಿತಿ:

23-02-2026 ರಂತೆ;

ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು

ವಯೋಮಿತಿ ಸಡಿಲಿಕೆ; ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ ಹಾಗೂ ಪ. ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಅರ್ಹ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್
  • ಸಂದರ್ಶನ ಅಥವಾ ಲಿಖಿತ ಪರೀಕ್ಷೆ
  • ದಾಖಲೆ ಪರಿಶೀಲನೆ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ ₹90,000 ರವರೆಗೆ ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ

ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ

• DDPDOO ಅಧಿಕೃತ ಪೋರ್ಟಲ್ https://ddpdoo.gov.in/careerಗೆ ಭೇಟಿ ನೀಡಿ.

• ಖಾಲಿ ಹುದ್ದೆ ಮತ್ತು ಸುತ್ತೋಲೆ ವಿಭಾಗದಲ್ಲಿ ನೀಡಲಾಗಿರುವ “AWEIL ನಲ್ಲಿ ಕಾರ್ಯನಿರ್ವಾಹಕ ಹಣಕಾಸು (ಒಪ್ಪಂದದ ಆಧಾರದ ಮೇಲೆ ನಿಗದಿತ ಅವಧಿ) 14 ಹುದ್ದೆಗಳ ನೇಮಕಾತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಹೀರಾತಿನ ಕೊನೆಯಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.

• ನಂತರ ಅರ್ಜಿ ನಮೂನೆಯಲ್ಲಿ ಕೇಳಲಾಗುವ ತಮ್ಮ ಮೂಲ ಮಾಹಿತಿಗಳನ್ನು ನಮೂದಿಸಿ.

• ನಂತರ ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.

• ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಫೆಬ್ರವರಿ 23ರೊಳಗೆ ತಲುಪುವಂತೆ ಕಳುಹಿಸಬೇಕು.

ವಿಳಾಸ: ಜನರಲ್ ಮ್ಯಾನೇಜರ್ (HR), ಅಡ್ವಾನ್ಸ್ಡ್ ವೆಪನ್ಸ್ ಅಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್, ಆರ್ಡನೆನ್ಸ್ ಫ್ಯಾಕ್ಟರಿ ಕಪ್ಲಿ ರಸ್ತೆ ಕಾನ್ಪುರ್ -208009

ಅಭ್ಯರ್ಥಿಗಳ ಗಮನಕ್ಕೆ: ಅರ್ಜಿ ನಮೂನೆಯ ಮುಂಗಡ ಸ್ಕ್ಯಾನ್ ಮಾಡಿದ ಪ್ರತಿಯನ್ನು ಲಗತ್ತುಗಳೊಂದಿಗೆ ವಿಷಯದ ಶೀರ್ಷಿಕೆಯಲ್ಲಿ “ಎಕ್ಸಿಕ್ಯೂಟಿವ್ ಫೈನಾನ್ಸ್ ಹುದ್ದೆಗೆ ಒಪ್ಪಂದದ ಆಧಾರದ ಮೇಲೆ ಅರ್ಜಿ” ಎಂದು ನಮೂದಿಸಿ ಇ-ಮೇಲ್ – dir-hr@aweil.in ವಿಳಾಸಕ್ಕೆ ಕಳುಹಿಸಬೇಕು.

Important Direct Links:

Official Notification and Application Form PDFDownload
Official Websitewww.aweil.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment