WhatsApp Channel Join Now
Telegram Group Join Now

AWES OST 2024 Notification: ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿ

ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿಯ (AWES) ಆರ್ಮಿ ಪಬ್ಲಿಕ್ ಶಾಲೆಗಳಲ್ಲಿ PRT, TGT ಮತ್ತು PGT ವಿಭಾಗಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆರ್ಮಿ ಪಬ್ಲಿಕ್ ಶಾಲೆಗಳಲ್ಲಿನ ವಿವಿಧ ಬೋಧನೆ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ತರಬೇತಿ ಪಡೆದ ಪದವೀಧರ ಶಿಕ್ಷಕರು (TGT) ಪ್ರಾಥಮಿಕ ಶಿಕ್ಷಕರು (PRT), ಸ್ನಾತಕೋತ್ತರ ಶಿಕ್ಷಕ(PGT) ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಜೊತೆಗೆ B.Ed ಪಡೆದುಕೊಂಡಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಅರ್ಜಿ ಸಲ್ಲಿಸದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ನಡೆಸಿ ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಗೆ ಹುದ್ದೆವಾರು ವೇತನವನ್ನು ನಿಗದಿಪಡಿಸಲಾಗಿದೆ.

ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿ (AWES) 2024ರ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು AWES ನ ಅಧಿಕೃತ ವೆಬ್ ಸೈಟ್ awesindia.com ಭೇಟಿ ನೀಡುವ ಮೂಲಕ ಅಕ್ಟೋಬರ್ 25ರ ಒಳಗೆ  ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ AWES OST Recruitment 2024 ಕುರಿತು ಹೆಚ್ಚಿನ ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.

Awes Ost 2024 Notification
Awes Ost 2024 Notification

Shortview of AWES OST Recruitment 2024

Organization Name – Army Welfare Education Society
Post Name – PGT, TGT Primary Teacher (PRT) and Other Posts
Total Vacancy – Various Posts
Application Process: Online
Job Location – All Over India (Karnataka)

ನೇಮಕಾತಿಯ ಪ್ರಮುಖ ದಿನಾಂಕಗಳು

  • ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ -10 ಸೆಪ್ಟೆಂಬರ್ 2024
  • ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ -25 ಅಕ್ಟೋಬರ್ 2024
  • ಪ್ರವೇಶ ಕಾರ್ಡ್ ಲಭ್ಯತೆ –  ನವೆಂಬರ್ 2024
  • ಪರೀಕ್ಷೆಯ ದಿನಾಂಕ – 23 ಮತ್ತು 24 ನವೆಂಬರ್ 2024
  • ಫಲಿತಾಂಶ ಪ್ರಕಟಣೆಯ ದಿನಾಂಕ – 10 ಡಿಸೆಂಬರ್ 2024

ವಿದ್ಯಾರ್ಹತೆ:

  • PRT ಹುದ್ದೆಗಳಿಗೆ‌ – ಪದವಿ + B.Ed/ D.Ed ಕನಿಷ್ಟ 50% ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
  • TGT  ಹುದ್ದೆಗಳಿಗೆ‌ – ಪದವಿಯ ಜೊತೆಗೆ B.Ed ಕನಿಷ್ಟ 50% ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
  • PGT  ಹುದ್ದೆಗಳಿಗೆ‌ – ಸ್ನಾತಕೋತ್ತರ ಪದವಿ ಜೊತೆಗೆ B.Ed ಕನಿಷ್ಟ 50% ಅಂಕಗಳೊಂದಿಗೆ ಪಾಸ್ ಮಾಡಿರಬೇಕು.

ವಯೋಮಿತಿ:

AWES OST 2024ಕ್ಕೆ ಅಧಿಸೂಚನೆ ಪ್ರಾಕರ ಅರ್ಜಿ ಸಲ್ಲಿಸಲು ಯಾವುದೇ ವಯಸ್ಸಿನ ಮಿತಿಯಿಲ್ಲ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ಸಂದರ್ಶನ
  • ದಾಖಲಾತಿ ಪರಿಶೀಲನೆ

ಅರ್ಜಿ ಶುಲ್ಕ:

  • Gen/ OBC/ EWS ಅಭ್ಯರ್ಥಿಗಳಿಗೆ – ₹385/-
  • SC/ ST/ PWD ಅಭ್ಯರ್ಥಿಗಳಿಗೆ – ₹385/-

ಪಾವತಿ‌ ವಿಧಾನ – ಆನ್ ಲೈನ್

How to Apply for AWES OST 2024 Recruitment (Army Public School)

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ…?

  • ಮೊದಲಿಗೆ ಅಧಿಕೃತ ವೆಬ್ ಸೈಟ್  https://www.awesindia.com ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ OST (ONLINE SCREENING TEST) ಲಿಂಕ್ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್ ಪೇಜ್ ತೆರೆಯುತ್ತದೆ, ಅಲ್ಲಿ ನೊಂದಣಿಗಾಗಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.
  • ನಂತರ ನೀಡಲಾದ ಲಾಗ್ ಇನ್ ID ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗ್ ಇನ್ ಮಾಡಿ.
    “ಆನ್‌ಲೈನ್ ನೋಂದಣಿ” ಲಿಂಕ್ ಕ್ಲಿಕ್ ಮಾಡಿ.
  • ಅಗತ್ಯ ಅರ್ಜಿ ವಿವರಗಳನ್ನು ಭರ್ತಿ‌ ಮಾಡಿ.
  • ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ (jpg ಅಥವಾ png, ಗರಿಷ್ಠ 50 KB) ಮತ್ತು  ಸಹಿ (jpg ಅಥವಾ png, ಗರಿಷ್ಠ 50 KB) ಅಪ್ ಲೋಡ್ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕ ಪಾವತಿಸಿ.
  • ಕೊನೆಯದಾಗಿ‌ ಅರ್ಜಿಯನ್ನು ಸಲ್ಲಿಸಿ.

Important Direct Links:

Official Notification PDFDownload
Online Application Form LinkRegister ||| Login
Official Websiteawesindia.com
More UpdatesKarnataka Help.in

Leave a Comment