Bidar Home Guard Vacancy 2025: ಬೀದರ್ ಜಿಲ್ಲೆಯಲ್ಲಿ 31 ಗೃಹರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

ಫಾಲೋ ಮಾಡಿ

Bidar Home Guard Recruitment 2025
Bidar Home Guard Vacancy 2025

ಬೀದರ್ ಜಿಲ್ಲೆಯ ತಾಲ್ಲೂಕು ಘಟಕ ಮತ್ತು ಉಪ ಘಟಕಗಳಲ್ಲಿ ಖಾಲಿ ಇರುವ 31 ಗೃಹರಕ್ಷಕ ಹುದ್ದೆಗೆ ಅಭ್ಯರ್ಥಿಗಳನ್ನು ನೇಮಕಾತಿ(Bidar Home Guard Vacancy 2025) ಮಾಡಿಕೊಳ್ಳಲು ಪ್ರಕಟಣೆಯನ್ನು ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಬೀದರ್ ಜಿಲ್ಲೆಯ ತಾಲ್ಲೂಕು ಘಟಕ ಮತ್ತು ಉಪ ಘಟಕಗಳಲ್ಲಿ ವಿವಿಧ ವಿಭಾಗಗಳಲ್ಲಿ ಹಾಲಿ ಖಾಲಿ ಇರುವ ದೀರ್ಘ ಕಾಲದಿಂದ ಗೈರು ಹಾಜರಾಗಿರುವ ಮತ್ತು ನಿಷ್ಕ್ರಿಯಗೊಳಿಸಿರುವ ಗೃಹ ರಕ್ಷಕರ ಸ್ಥಾನದಲ್ಲಿ ಹೊಸ ಗೃಹರಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

Highlights of Employment News

Organization Name – District Home Guard Department
Post Name – Home Guard
Total Vacancy – 31
Application Process – Offline
Job Location – Bidar

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

• ಅರ್ಜಿ ಸಲ್ಲಿಕೆಯ ಪ್ರಕಟಣೆಯ ದಿನಾಂಕ – 14-05-2025
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23-05-2025

ಖಾಲಿ ಇರುವ ಹುದ್ದೆಗಳ ವಿವರ:

  • ಬೀದರ್ – 2
  • ಧನ್ನೂರ – 3
  • ಔರಾದ – 1
  • ಕಮಲನಗರ – 8
  • ಹುಲಸೂರ – 13
  • ಮಂಠಾಳ 4

ಒಟ್ಟು 31 ಹುದ್ದೆಗಳು ಖಾಲಿ ಇವೆ.

ಶೈಕ್ಷಣಿಕ ಅರ್ಹತೆ:

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಕನಿಷ್ಠ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಇತರೆ ಅರ್ಹತೆಗಳು:

  • ಗೃಹರಕ್ಷಕ ಸದಸ್ಯರಾಗ ಬಯಸುವವರು ತಮ್ಮ ವಾಸ ಸ್ಥಳದಿಂದ ತಾವು ಸೇರ ಬಯಸುವ ಘಟಕಕ್ಕೆ 6 ಕಿ.ಮೀ. ವ್ಯಾಪ್ತಿಯ ಒಳಗಿರಬೇಕು
  • ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರಬಾರದು.
  • ಧೃಢಕಾಯರಾಗಿದು ಆರೋಗ್ಯವಂತರಾಗಿರಬೇಕು
  • ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು.

ವಯೋಮಿತಿ:

  • ಕನಿಷ್ಠ ವಯಸ್ಸಿನ ಮಿತಿ – 20 ವರ್ಷಗಳು
  • ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು

ಆಯ್ಕೆ ಪ್ರಕ್ರಿಯೆ:

  • ಸಂದರ್ಶನ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ವೈದ್ಯರಿಂದ ಶಾರೀರಿಕ ಸುಸ್ಥಿತಿಯ ಬಗ್ಗೆ ಶಾರೀರಿಕ ಅರ್ಹತಾ ಪ್ರಮಾಣ ಪತ್ರ
  • ಸ್ಥಳೀಯ ನಿವಾಸದ ಪ್ರಮಾಣ ಪತ್ರ
  • ಪೋಲಿಸ ಇಲಾಖೆಯಿಂದ ನೀಡಲಾದ ಗುಣ ನಡತೆ ಪ್ರಮಾಣ ಪತ್ರದ ದಾಖಲಾತಿಗಳು ಲಗತ್ತಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಅಭ್ಯರ್ಥಿಗಳು ಆಯಾ ಘಟಕ ಮತ್ತು ಉಪ ಘಟಕದಲ್ಲಿ ಅರ್ಜಿಯನ್ನು ಪಡೆದು ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ. ಮೇ 23ರೊಳಗೆ ಆಯಾ ಘಟಕದ ಘಟಕಾಧಿಕಾರಿಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂದು ಬೀದರ್ ಗೃಹ ರಕ್ಷಕ ದಳದ ಸಮಾದೇಷ್ಠರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Important Direct Links:

Official Short Notice PDFDownload
More UpdatesKarnatakaHelp.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

Leave a Comment