ವಾಯುಪಡೆ(IAF) ಅಗ್ನಿವೀರ್ ವಾಯು ಕ್ರೀಡಾ ಇಂಟೆಕ್ 02/2026ಕ್ಕೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಮಾ.29 ಕೊನೆ ದಿನ

Published on:

ಭಾರತೀಯ ವಾಯುಪಡೆಯು ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ವಾಯು(ಕ್ರೀಡಾ) ಇಂಟೆಕ್ 02/2026ರ ಭರ್ತಿಗಾಗಿ ಅಧಿಸೂಚನೆ ಬಿಡುಗಡೆಗೊಳಿಸಿದ್ದು, ಅವಿವಾಹಿತ ಪುರುಷ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಾ.23 ರಿಂದ ಪ್ರಾರಂಭಗೊಂಡು 29ಕ್ಕೆ ಅಂತ್ಯಗೊಳ್ಳಲಿದ್ದು, ದ್ವಿತೀಯ ಪಿಯುಸಿ/ಡಿಪ್ಲೋಮಾ ತೇರ್ಗಡೆ ಜೊತೆಗೆ ಸಂಬಂಧಿಸಿದ ಕ್ರೀಡೆಯಲ್ಲಿ ಸಾಧನೆಗೈದಿರುವ ಆಸಕ್ತರು ಐಎಎಫ್‌ನ ಅಧಿಕೃತ ವೆಬ್‌ಸೈಟ್ https://agnipathvayu.cdac.in/AV/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ- ಮಾರ್ಚ್ 23, 2026
  • ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಮಾರ್ಚ್ 29, 2026

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ ಗಣಿತ, ಭೌತಶಾಸ್ತ್ರ/ಯಾವುದೇ ಸ್ಟ್ರೀಮ್/ವಿಷಯಗಳಲ್ಲಿ ಇಂಗ್ಲಿಷ್‌ನೊಂದಿಗೆ ದ್ವಿತೀಯ ಪಿಯುಸಿ(10+2)/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಅಥವಾ

ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಯಿಂದ ಸಂಬಂಧಿತ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಆಟೋಮೊಬೈಲ್/ ಕಂಪ್ಯೂಟರ್ ಸೈನ್ಸ್/ ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ/ಮಾಹಿತಿ ತಂತ್ರಜ್ಞಾನ) ವಿಭಾಗದಲ್ಲಿ 03 ವರ್ಷಗಳ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿರಬೇಕು.

ಅಥವಾ

ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 02 ವರ್ಷಗಳ ವೃತ್ತಿಪರ ಕೋರ್ಸ್‌ನಲ್ಲಿ ಕನಿಷ್ಠ 50% ಅಂಕಗಳು ಹಾಗೂ ಇಂಗ್ಲಿಷ್‌ನಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ಅಭ್ಯರ್ಥಿಗಳು ನಿಗದಿತ ಕ್ರೀಡೆಯಲ್ಲಿ ಸಾಧನೆಗೈದಿರಬೇಕು ಹಾಗೂ ವೈದ್ಯಕೀಯ ಮಾನದಂಡಗಳನ್ನು ಹೊಂದಿರಬೇಕು. ಅಭ್ಯರ್ಥಿಗಳು ತಪ್ಪದೆ ಸಂಪೂರ್ಣ ಅಧಿಕೃತ ಅಧಿಸೂಚನೆಯನ್ನು ಓದಬೇಕು.

ವಯೋಮಿತಿ:

ಜುಲೈ 02, 2005 ರಿಂದ ಜನವರಿ 02, 2009ರ ನಡುವೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

• ಗರಿಷ್ಠ ವಯಸ್ಸಿನ ಮಿತಿ – 21 ವರ್ಷಗಳು

ಸೇವಾ ಅವಧಿ:

ಅಗ್ನಿವೀರ್ ಯೋಜನೆಯಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಭಾರತೀಯ ವಾಯುಪಡೆಯಲ್ಲಿ 04 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾರೆ.

ವೇತನ ಹಾಗೂ ಅಗ್ನಿವೀರ್ ಕಾರ್ಪಸ್ ನಿಧಿ ವಿವರ:

• 1ನೇ ವರ್ಷ – ಮಾಸಿಕ ವೇತನ 30 ಸಾವಿರರೂ., ಅದರಲ್ಲಿ ಅಭ್ಯರ್ಥಿಗಳಿಗೆ ₹21 ಸಾವಿರ, ಅಗ್ನಿವೀರ್ ಕಾರ್ಪಸ್ ನಿಧಿಗೆ ₹9 ಸಾವಿರ ಹೋಗುತ್ತದೆ.

• 2ನೇ ವರ್ಷ -ಮಾಸಿಕ ವೇತನ ₹33 ಸಾವಿರ, ಅದರಲ್ಲಿ ಅಭ್ಯರ್ಥಿಗಳಿಗೆ 23,100ರೂ., ಅಗ್ನಿವೀರ್ ಕಾರ್ಪಸ್ ನಿಧಿಗೆ ₹9,900 ಹೋಗುತ್ತದೆ.

• 3ನೇ ವರ್ಷ -ಮಾಸಿಕ ವೇತನ ₹36,500, ಅದರಲ್ಲಿ ಅಭ್ಯರ್ಥಿಗಳಿಗೆ 25,550ರೂ., ಅಗ್ನಿವೀರ್ ಕಾರ್ಪಸ್ ನಿಧಿಗೆ ₹10,950 ಹೋಗುತ್ತದೆ.

• 4ನೇ ವರ್ಷ -ಮಾಸಿಕ ವೇತನ ₹40,000, ಅದರಲ್ಲಿ ಅಭ್ಯರ್ಥಿಗಳಿಗೆ 28ಸಾವಿರ ರೂ., ಅಗ್ನಿವೀರ್ ಕಾರ್ಪಸ್ ನಿಧಿಗೆ ₹12ಸಾವಿರ ಹೋಗುತ್ತದೆ.

• 4 ವರ್ಷಗಳ ನಂತರ, ಅಗ್ನಿವೀರ್ ಅಭ್ಯರ್ಥಿಗಳು ₹10.04 ಲಕ್ಷ ಸೇವಾ ನಿಧಿ ಪ್ಯಾಕೇಜ್ ಪಡೆಯುತ್ತಾರೆ.

ಆಯ್ಕೆ ವಿಧಾನ:

  • ದೈಹಿಕ ಸದೃಢತಾ ಪರೀಕ್ಷೆ (PFT)
  • ಕ್ರೀಡಾ ಕೌಶಲ್ಯ ಪ್ರಯೋಗಗಳು
  • ವೈದ್ಯಕೀಯ ಪರೀಕ್ಷೆ
  • ಅಂತಿಮ ಮೆರಿಟ್ ಪಟ್ಟಿ

ಅರ್ಜಿ ಶುಲ್ಕ:

ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ₹100

ಅರ್ಜಿ ಸಲ್ಲಿಸುವ ವಿಧಾನ

• ಅಭ್ಯರ್ಥಿಗಳು IAF ಅಧಿಕೃತ ವೆಬ್ ಸೈಟ್ https://agnipathvayu.cdac.in/AV/ಗೆ ಭೇಟಿ ನೀಡಿ.

• ನಂತರ ಮಾರ್ಚ್ 23ರಂದು ಸಕ್ರಿಯವಾಗುವ “ಅಗ್ನಿವೀರ್ವಾಯು (ಕ್ರೀಡೆ) ನೇಮಕಾತಿ 02/2026” ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ. ಆಯ್ಕೆಯನ್ನು ಆರಿಸಿ.

• ಬಳಿಕ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಆನ್ ಲೈನ್ ಮೂಲಕ ಪಾವತಿಸಿ.

• ನಂತರ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಭವಿಷ್ಯಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form Link(ಮಾ.23 ರಿಂದ)Apply
Official Websiteagnipathvayu.cdac.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment