WhatsApp Channel Join Now
Telegram Group Join Now

CSB Recruitment 2024: ಸೈಂಟಿಸ್ಟ್- ಬಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ಭಾರತ ಸರ್ಕಾರದ ಮಿನಿಸ್ಟ್ರಿ ಆಫ್‌ ಟೆಕ್ಸ್‌ಟೈಲ್ಸ್‌ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್ ಸಿಲ್ಕ್‌ ಬೋರ್ಡ್‌ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸೆಂಟ್ರಲ್ ಸಿಲ್ಕ್‌ ಬೋರ್ಡ್‌ ನಲ್ಲಿ ಖಾಲಿ ಇರುವ ವಿಜ್ಞಾನಿ-ಬಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕ್ರಾಪ್‌ ಸೈನ್ಸ್‌, ವೆಟರಿನರಿ ಮತ್ತು ಅನಿಮಲ್ ಸೈನ್ಸ್‌ ಮತ್ತು ಇತರೆ ವಿಭಾಗಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಅಹ್ವಾನಿಸಲಾಗಿದೆ. ವಿಜ್ಞಾನ, ಕೃಷಿ ವಿಜ್ಞಾನ, ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ ಇಂಡಿಯನ್ ಕೌನ್ಸಿಲ್ ಆಫ್‌ ಅಗ್ರಿಕಲ್ಚರ್ ರಿಸರ್ಚ್‌ (ICAR) ನಡೆಸುವ ಆಲ್‌ ಇಂಡಿಯಾ ಕಾಂಪಿಟೇಟಿವ್ ಎಕ್ಸಾಮ್‌ (AICE)  ಬರೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Csb Recruitment 2024
Csb Recruitment 2024

ಅರ್ಹ ಮತ್ತ ಆಸಕ್ತ ಅಭ್ಯರ್ಥಿಗಳು CSB Recruitment 2024ಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ https://karnemaka.kar.nic.in/CSB_rec_24 ಸೆಪ್ಟೆಂಬರ್ 05 ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ CSB Recruitment 2024 ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಆನ್‌ಲೈನ್‌ ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ : 22-08-2024
  • ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 05-09-2024
  • ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ: 06-09-2024

ಶೈಕ್ಷಣಿಕ ಅರ್ಹತೆಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಿಜ್ಞಾನ, ಕೃಷಿ ವಿಜ್ಞಾನ, ಇತರೆ ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಪಡೆದಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 35 ವರ್ಷದ ಒಳಗಿರಬೇಕು.

ವಯೋಮಿತಿ ಸಡಲಿಕ್ಕೆ

  • OBC ಅಭ್ಯರ್ಥಿಗಳಿಗೆ – 3 ವರ್ಷಗಳು
  • SC/ST ಅಭ್ಯರ್ಥಿಗಳಿಗೆ – 5 ವರ್ಷಗಳು

ವೇತನ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹56,100 ರಿಂದ ₹1,77,500.ಮಾಸಿಕ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್(ICAR) ನಡೆಸುವ JRF ಮತ್ತು PHD ಪ್ರವೇಶ ಪರೀಕ್ಷೆಯಲ್ಲಿ ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಶಾಟ್ ಲಿಸ್ಟ್ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ – ₹1000
  • SC / ST / ವಿಶೇಷ ಚೇತನ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ

How to Apply for CSB Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • ಮೊದಲಿಗೆ CBS ಅಧಿಕೃತ ವೆಬ್ ಸೈಟ್ http://csb.gov.in/ ಭೇಟಿ ನೀಡಿ.
  • ನಂತರ ಮುಖಪುಟದಲ್ಲಿ ಪ್ರಕಟಣೆ ವಿಭಾಗದಲ್ಲಿ
    ‘Apply online’ ಲಿಂಕ್ ಅನ್ನು ಕ್ಲಿಕ್ ಮಾಡಿ.
  • ನಿಮ್ಮ ಫೋಟೋ ಮತ್ತು ಸಿಗ್ನೇಚರ್, ಅಗತ್ಯ ವಿವರಗಳೊಂದಿಗೆ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಲಾಗಿನ್ ಮಾಡಿ.
  • ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಮತ್ತು ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.

Important Direct Links:

Official Notification PDFDownload
Online Application Form LinkApply Here
Official WebsiteCentral Skill Board
More UpdatesKarnataka Help.in

Leave a Comment