ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ಎನ್ಹೆಚ್.ಎಂ/ಎನ್ಯುಹೆಚ್ಎಂ ಹಾಗೂ ಪಿಎಂ ಅಭೀಮ್ ಯೋಜನೆಯಡಿ ವಿವಿಧ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಅಧಿಸೂಚನೆ ಹೊರಡಿಸಿದೆ.
ವಿವಿಧ ವೃಂದಗಳಲ್ಲಿ ಖಾಲಿಯಿರುವ ತಜ್ಞ ವೈದ್ಯರು, ಫಿಜಿಶಿಯನ್, ವೈದ್ಯಾಧಿಕಾರಿಗಳು ಹಾಗೂ ನೇತ್ರ ಸಹಾಯಕರು ಸೇರಿದಂತೆ ಇತರೆ ಒಟ್ಟು 31 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.16 ರಂದು ಜಿಲ್ಲೆಯ ಇಲಾಖೆ ಕಚೇರಿಯಲ್ಲಿ ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಲು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ನೇರ ಸಂದರ್ಶನ/ದಾಖಲೆ ಪರಿಶೀಲನೆಯ ದಿನಾಂಕ – ಡಿಸೆಂಬರ್ 16, 2025
ಹುದ್ದೆಗಳ ವಿವರ:
ಅರವಳಿಕೆ ತಜ್ಞ ವೈದ್ಯರು – 02 ಹುದ್ದೆಗಳು ಸ್ತ್ರೀರೋಗ ತಜ್ಞರು – 02 ಹುದ್ದೆಗಳು ಮಕ್ಕಳ ತಜ್ಞರು – 01 ಹುದ್ದೆ ರೆಡಿಯೋಲಾಜಿಸ್ಟ್ ತಜ್ಞ ವೈದ್ಯರು – 01 ಹುದ್ದೆ ಫಿಜಿಶಿಯನ್ – 01 ಹುದ್ದೆ ವೈದ್ಯಾಧಿಕಾರಿಗಳು – 05 ಹುದ್ದೆಗಳು ಅಡಿಯೋಲಾಜಿಸ್ & ಸ್ಪೀಚ್ ತೆರಪಿಸ್ಟ್ – 01 ಹುದ್ದೆ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು – 02 ಹುದ್ದೆಗಳು ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು – 03 ಹುದ್ದೆಗಳು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು – 04 ಹುದ್ದೆಗಳು ಫ್ಲೋರೋಸಿಸ್ ಸಲಹೆಗಾರರು – 01 ಹುದ್ದೆ ನೇತ್ರ ಸಹಾಯಕರು – 08 ಹುದ್ದೆಗಳು
ಒಟ್ಟು – 31 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ (ವಿಜ್ಞಾನ), ಸಂಬಂಧಿತ ವಿಭಾಗದಲ್ಲಿ ಪದವಿ/ಡಿಪ್ಲೋಮಾ, ಎಂಬಿಬಿಎಸ್ ಮತ್ತು ಸಂಬಂಧಿತ ವಿಭಾಗದಲ್ಲಿ (ತಜ್ಞತೆಯಲ್ಲಿ) ಸ್ನಾತಕೋತ್ತರ ಪದವಿಯೊಂದಿಗೆ ಕರ್ನಾಟಕ ಮೆಡಿಕಲ್ ಕೌನ್ಸಿಲಿಂಗ್ನಲ್ಲಿ ನೋಂದಣಿಯಾಗಿರಬೇಕು.
ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 40 ರಿಂದ 60 ವರ್ಷಗಳು
ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ:
ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಕಮ್ ರೋಸ್ಟರ್ ನಿಯಮದ ಅನುಸಾರ ನೇರ ಸಂದರ್ಶನ ಹಾಗೂ ದಾಖಲಾತಿ ಪರಿಶೀಲನೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 11,500ರೂ. ಗಳಿಂದ 1,10,000ರೂ. ವರೆಗೆ ಮಾಹೆಯಾನ ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಉಲ್ಲೇಖಿಸಲಾಗಿರುವುದಿಲ್ಲ
ನೇರ ಸಂದರ್ಶನ/ದಾಖಲೆ ಪರಿಶೀಲನೆಗೆ ಅಗತ್ಯವಿರುವ ದಾಖಲಾತಿಗಳು
ಅಭ್ಯರ್ಥಿಗಳು ಮೂಲ ದಾಖಲಾತಿಗಳ ಪರಿಶೀಲನೆಗೆ ಕಡ್ಡಾಯವಾಗಿ (ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಆಧಾರ್ ಜೆರಾಕ್ಸ್ ಪ್ರತಿ, ಕಂಪ್ಯೂಟರ್ ಸಾಕ್ಷರತಾ ಪ್ರಮಾಣ ಪತ್ರ, ಜನ್ಮ ದಿನಾಂಕ ದೃಡೀಕರಣ ಪ್ರತಿ ಎಸ್.ಎಸ್.ಎಲ್.ಸಿ ಅಂಕ ಪಟ್ಟಿ ಮತ್ತು ವಿಳಾಸ ದೃಡೀಕರ ಪತ್ರ ಒಳಗೊಂಡಂತೆ ಇತರೆ ದಾಖಲೆಗಳು) ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಡಿಸೆಂಬರ್ 16 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುವ ನೇರ ಸಂದರ್ಶನ/ದಾಖಲೆ ಪರಿಶೀಲನೆಗೆ ಹಾಜರಾಗಬಹುದು.
ನೇರ ಸಂದರ್ಶನ/ದಾಖಲೆ ಪರಿಶೀಲನೆ ನಡೆಯುವ ಸ್ಥಳ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಕೋಲಾರ ಜಿಲ್ಲೆ, ಕೋಲಾರ – 563102