ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಅಧೀನದ ಜೋಧಪುರದ ರಕ್ಷಣಾ ಪ್ರಯೋಗಾಲಯ (DLJ)ದಲ್ಲಿ 2026ನೇ ಸಾಲಿಗೆ ಎಂಜಿನಿಯರಿಂಗ್ ಹಾಗೂ ವಿಜ್ಞಾನ ವಿಭಾಗದ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಪೈಡ್ ಇಂಟರ್ನ್ಶಿಪ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಮೆಟೀರಿಯಲ್ಸ್/ಕೆಮಿಕಲ್, ಫಿಸಿಕ್ಸ್ ಹಾಗೂ ಕೆಮಿಸ್ಟ್ರಿ ವಿಭಾಗಗಳಿಗೆ ಒಟ್ಟು 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಿದೆ. ತರಬೇತಿ ಸಮಯದಲ್ಲಿ ₹5 ಸಾವಿರ ಮಾಹೆಯಾನ ತರಬೇತಿ ವೇತನ ನೀಡಲಾಗುತ್ತದೆ. ಸದರಿ ಇಂಟರ್ನ್ಶಿಪ್ ತರಬೇತಿಗೆ ಸೇರ ಬಯಸುವ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳುಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ಡಿ.23ರೊಳಗೆ ನಿಗದಿತ ವಿಳಾಸಕ್ಕೆ ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 23, 2025
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸೂಚನೆ ಹೊರಡಿಸುವ ದಿನಾಂಕ – ಡಿಸೆಂಬರ್ 26, 2025
ಇಂಟರ್ನ್ಶಿಪ್ ತರಬೇತಿ ಆರಂಭದ ದಿನಾಂಕ – ಜನವರಿ 01, 2026
ಶಾಖೆಗಳ ವಿವರ:
• ಎಲೆಕ್ಟ್ರಾನಿಕ್ಸ್ • ಮೆಕ್ಯಾನಿಕಲ್ • ಎಲೆಕ್ಟ್ರಿಕಲ್ • ಕಂಪ್ಯೂಟರ್ ಸೈನ್ಸ್ • ಮೆಟೀರಿಯಲ್ಸ್/ಕೆಮಿಕಲ್ • ಫಿಸಿಕ್ಸ್ • ಕೆಮಿಸ್ಟ್ರಿ
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಪ್ರಸ್ತುತ 75% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಬಿ.ಇ/ಬಿ.ಟೆಕ್ ಅಥವಾ ಎಂ.ಟೆಕ್./ಎಂ.ಎಸ್ಸಿ ಪದವಿಯ ಅಂತಿಮ ವರ್ಷದ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
ವಯೋಮಿತಿ:
ಗರಿಷ್ಠ ವಯಸ್ಸಿನ ಮಿತಿ – 28 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಸದರಿ ಇಂಟರ್ನ್ ಶಿಪ್ ತರಬೇತಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ 5,000ರೂ. ವರೆಗೆ ಮಾಹೆಯಾನ ಸ್ಟೈಫಂಡ್ ನೀಡಲಾಗುತ್ತದೆ.
ತರಬೇತಿಯ ಅವಧಿ:
ಸದರಿ ಇಂಟರ್ನ್ ಶಿಪ್ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕನಿಷ್ಠ 06 ತಿಂಗಳ ಅವಧಿಯವರೆಗೆ ತರಬೇತಿಯನ್ನು ನೀಡಲಾಗುತ್ತದೆ. ಇದಾದ ಬಳಿಕ ವಿದ್ಯಾರ್ಥಿಗಳಿಗೆ ತರಬೇತಿ ಪೂರ್ಣಗೊಂಡ ಪ್ರಮಾಣಪತ್ರವನ್ನು ವಿತರಿಸಲಾಗುತ್ತದೆ.
ಇಂಟರ್ನ್ ಶಿಪ್ ತರಬೇತಿಗೆ ಅರ್ಜಿ ಸಲ್ಲಿಸುವುದು ಹೇಗೆ.?
• ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೂಲಕವೂ ಅರ್ಜಿ ನಮೂನೆ ಪಡೆದುಕೊಳ್ಳಬಹುದು
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ-ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಲಕೋಟೆಯ ಮೇಲ್ಭಾಗದಲ್ಲಿ ವಿದ್ಯಾರ್ಥಿಗಳು “ಪಾವತಿಸಿದ ಇಂಟರ್ನ್ಶಿಪ್ಗಾಗಿ ಅರ್ಜಿ” ಎಂದು ಸ್ಪಷ್ಟವಾಗಿ ನಮೂದಿಸಿ.
• ಈ ಕೆಳಗಿನ ವಿಳಾಸಕ್ಕೆ ಡಿಸೆಂಬರ್ 23ರೊಳಗೆ ತಲುಪುವಂತೆ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.
ವಿಳಾಸ: ನಿರ್ದೇಶಕರು, ರಕ್ಷಣಾ ಪ್ರಯೋಗಾಲಯ ಜೋಧಪುರ, ಪ್ರೊ. ದೌಲತ್ ಸಿಂಗ್ ಕೊಠಾರಿ ಮಾರ್ಗ್, ರತನಾಡ, ಜೋಧಪುರ -342011, ರಾಜಸ್ಥಾನ