ನಮಸ್ಕಾರ ಬಂಧುಗಳೇ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದಿಂದ ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ “ಸ್ವಾವಲಂಬಿ ಸಾರಥಿ-ಫುಡ್ ಕಾರ್ಟ್(Swavalambi Sarathi Food Cart Vehicle subsidy Scheme)” ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಲೇಖನವನ್ನು ಕೊನೆವರೆಗೆ ಓದಿ.
ಈ ಯೋಜನೆಯ ಮುಖಾಂತರ ಅರ್ಹ ಫಲಾನುಭವಿಗಳಿಗೆ ಸಾಲದ ಮೊತ್ತಕ್ಕೆ ಶೇ.75 ರಷ್ಟು ಅಥವಾ ಗರಿಷ್ಠ ರೂ. 4.00 ಲಕ್ಷಗಳ ಸಹಾಯಧನವನ್ನು ಸರ್ಕಾರವೇ ಭರಿಸುತ್ತದೆ. ಉಳಿದೆಲ್ಲ ಮೊತ್ತವನ್ನು ಬ್ಯಾಂಕ್ ಮುಖಾಂತರ ಸಾಲ ಸೌಲಭ್ಯವನ್ನು ಒದಗಿಸುತ್ತದೆ.