Ganesha Festival 2024: ಶುಭಾಶಯಗಳ ಚಿತ್ರಗಳು, ಗಣಪತಿ ಕೂರಿಸಲು ಉತ್ತಮ ಸಮಯ ಯಾವುದು ಗೊತ್ತಾ…?

Follow Us:

ಭಾರತದಲ್ಲಿ ಪ್ರತಿ ವರ್ಷ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಗಣೇಶ ಚತುರ್ಥಿಯು ಭಾದ್ರಪದ ಮಾಸದ ಚತುರ್ಥ ತಿಥಿಯಿಂದ ಪ್ರಾರಂಭವಾಗುತ್ತದೆ. ಈ ಹಬ್ಬದ ಸಂದರ್ಭ ಹಲವು ಮನೆಗಳಲ್ಲಿ ಹಾಗೂ ಬೀದಿಗಳಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ವಿನಾಯಕ ಚತುರ್ಥಿಯಂದು ಪ್ರತಿ ಬೀದಿಯಲ್ಲೂ ಮಂಟಪ ನಿರ್ಮಿಸಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಗೌರಿ–ಗಣೇಶ ಹಬ್ಬಕ್ಕೆ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಾಗಾದರೆ ಗಣೇಶನ ಚತುರ್ಥಿ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

Ganesha Chaturthi Festival 2024
Ganesha Chaturthi Festival 2024

Ganesha Festival 2024 History

ಗಣೇಶನ ಇತಿಹಾಸ: ನಮ್ಮ ಹಿಂದಿನ ಪುರಾಣಗಳ ಪ್ರಕಾರ ಗಣೇಶನು ಪಾರ್ವತಿ ದೇವಿಯ ಸೃಷ್ಟಿ ತನ್ನ ಮೈಯಲ್ಲಿದ್ದ ಶ್ರೀಗಂಧದಿಂದ ಗಣಪನ ಸೃಷ್ಟಿಸಿದಳು ಎಂದು ಹೇಳಲಾಗುತ್ತದೆ. ತಾನು ಸ್ನಾನಕ್ಕೆಂದು ಹೋಗುವಾಗ ಗಣೇಶನನ್ನು ಕಾವಲಿಗಾಗಿ ನಿಲ್ಲಿಸಿ ಹೋದಳು. ಅದೇ ಸಮಯದಲ್ಲಿ ಶಿವನೂ ಪಾರ್ವತಿಯನ್ನು ನೋಡಲು ಬಂದಾಗ ಗಣಪನು ಶಿವನಿಗೆ ಒಳಗೆ ಹೋಗಲು ಅನುಮತಿ ನೀಡುವುದಿಲ್ಲ. ಗಣೇಶನು ತನ್ನ ತಾಯಿಯ ಸೂಚನೆಗಳನ್ನು ಅನುಸರಿಸಿದನು ಮತ್ತು ಯಾರನ್ನೂ ಮನೆಗೆ ಬಿಡುವುದಿಲ್ಲ ಎಂದು ಶಿವನಿಗೆ ಹೇಳಿದ. ಶಿವ ಎಂಬುವುದು ಅರಿವಿಲ್ಲದಿದ್ದರೂ, ಅವನು ಬರುವಾಗ ಅವನನ್ನು ಮನೆಯೊಳಗೆ ಪ್ರವೇಶಿಸದಂತೆ ಗಣಪ ತಡೆದನು. ಇದು ಇಬ್ಬರ ನಡುವೆ ಯುದ್ಧಕ್ಕೆ ಕಾರಣವಾಯಿತು ಮತ್ತು ಕೋಪಗೊಂಡ ಶಿವನು ಅವನ ತಲೆಯನ್ನು ಕತ್ತರಿಸಿದನು. ಇದನ್ನು ತಿಳಿದ ಪಾರ್ವತಿಯು ಕಾಳಿ ದೇವತೆಯಾಗಿ ರೂಪಾಂತರಗೊಂಡಳು. ಅವಳು ಜಗತ್ತನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದಳು.

ಈ ವಿಷಯವನ್ನು ದೇವತೆಗಳು ತಿಳಿದು ಶಿವನಲ್ಲಿ ಪ್ರಾರ್ಥನೆ ಮಾಡಿಕೊಂಡರು ಪ್ರಾರ್ಥನೆಗೆ ಕರಗಿದ ಶಿವನು ತನ್ನ ಅನುವಾಯಿಗಳಿಗೆ ಯಾರು ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿದ್ದಾರೆ, ಅವರ ತಲೆಯನ್ನು ಕತ್ತರಿಸಿಕೊಂಡು ಬನ್ನಿ ಎಂದು ಆದೇಶ ನೀಡಿದನು. ಇದರಿಂದ ಎಲ್ಲವನ್ನು ಹುಡುಕಿದ ಅವರು ಉತ್ತರ ದಿಕ್ಕಿಗೆ ಆನೆ ಮರೆಯುವುದು ತಲೆ ಇಟ್ಟು ಮಲಗಿತ್ತು ಅದರ ತಲೆಯನ್ನು ಕತ್ತರಿಸಿ ಗಣಪನಿಗೆ ಜೋಡಿಸಲಾಯಿತು.

Ganesha Festival Celebration 2024

ಗಣೇಶ ಚತುರ್ಥಿಯ ಆಚರಣೆ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಣೇಶ ಚತುರ್ಥಿಯ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣಪನ ಮೂರ್ತಿಯನ್ನು ಗೌರಿಯ ಜೊತೆಗೆ ಕೂರಿಸಿ ವಿವಿಧ ತಿಂಡಿಗಳಿಂದ ನೈವೇದ್ಯ ಮಾಡಿ, ಸಕಲ ಪೂಜೆಗಳನ್ನು ಸಲ್ಲಿಸಿ ಹತ್ತು ಐದು ಅಥವಾ ಮೂರು ದಿನಗಳ ಕಾಲ ಪ್ರತಿನಿತ್ಯ ಪೂಜೆ ಮಾಡಿ ಕೊನೆಯ ದಿನದಂದು ವಿಜೃಂಭಣೆಯಿಂದ ಮೆರವಣಿಗೆ ಮಾಡಿ ನೀರಿನಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಗುತ್ತದೆ.

Ganesh Chaturthi 2024 Wishes Images

Ganesh Chaturthi Wishes Image -1
Ganesha Festival 2024

☝️ Click Here to Download Above Image ☝️

Ganesh Chaturthi Wishes Image -2
Ganesha Festival 2024

☝️ Click Here to Download Above Image ☝️

Ganesh Chaturthi Wishes Image -3
Ganesha Festival 2024

☝️ Click Here to Download Above Image ☝️

Ganesh Chaturthi Wishes Image- 4
Ganesha Festival 2024

☝️ Click Here to Download Above Image ☝️

ಗಣೇಶನನ್ನು ಕೂರಿಸಲು ಯಾವ ಸಮಯ ಉತ್ತಮ…?

ಗಣಪತಿಯನ್ನು ನಾಳೆ ಬೆಳಗ್ಗೆ 7.35 ರಿಂದ 8.57ರ ಶುಭ ಅಮೃತ ಲಗ್ನದಲ್ಲಿ ಅಥವಾ 10.50 ರಿಂದ 12.30ರ ಶುಭ ಮುಹೂರ್ತದಲ್ಲಿ ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಇಟ್ಟು ಪೂಜೆ ಸಲ್ಲಿಸಬಹುದು.

Important Direct Links:

More UpdatesKarnataka Help.in

Leave a Comment