285 ಜನರಲಿಸ್ಟ್ ಹುದ್ದೆಗಳು ಹಾಗೂ 15 ಹಿಂದಿ ಅಧಿಕಾರಿ ಹುದ್ದೆಗಳು ಸೇರಿ ಒಟ್ಟು 300 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.18 ರೊಳಗೆ OICL ಅಧಿಕೃತ ಜಾಲತಾಣ https://orientalinsurance.org.in/careersಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಡಿಸೆಂಬರ್ 03 (ಮುಂದೂಡಲಾಗಿದೆ)
ನೇಮಕಾತಿಗೆ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆ ದಿನಾಂಕ – ಡಿಸೆಂಬರ್ 18 (ಮುಂದೂಡಲಾಗಿದೆ)
ಶ್ರೇಣಿ I ಆನ್ಲೈನ್ ಪರೀಕ್ಷೆಯ (ತಾತ್ಕಾಲಿಕ) ದಿನಾಂಕ – ಜನವರಿ 10, 2026
ಶ್ರೇಣಿ II ಆನ್ಲೈನ್ ಪರೀಕ್ಷೆಯ (ತಾತ್ಕಾಲಿಕ) ದಿನಾಂಕ – 28ನೇ ಫೆಬ್ರವರಿ, 2026
ಶೈಕ್ಷಣಿಕ ಅರ್ಹತೆ:
✓ ಜನರಲಿಸ್ಟ್ (285) ಹುದ್ದೆಗೆ; OICL ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
✓ ಹಿಂದಿ ಅಧಿಕಾರಿ (15) ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಿಂದಿ/ಇಂಗ್ಲಿಷ್/ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಹಿಂದಿ ಮತ್ತು ಇಂಗ್ಲಿಷ್ ಕಡ್ಡಾಯ ಅಥವಾ ಐಚ್ಛಿಕ ವಿಷಯಗಳಾಗಿ ಅಥವಾ ಎರಡರಲ್ಲಿ ಯಾವುದಾದರೂ ಒಂದು ಪರೀಕ್ಷಾ ಮಾಧ್ಯಮವಾಗಿ ಮತ್ತು ಇನ್ನೊಂದನ್ನು ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿ ಕನಿಷ್ಠ 60% ಅಂಕಗಳೊಂದಿಗೆ ಪೂರ್ಣಗೊಳಿಸಬೇಕು.
ವಯೋಮಿತಿ:
30-11-2025 ರಂತೆ;
ಕನಿಷ್ಠ ವಯಸ್ಸಿನ ಮಿತಿ – 21 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು